ನವದೆಹಲಿ : ಎಲ್‌ಪಿಜಿ ಸಿಲಿಂಡರ್ (LPG gas cylinder) ಬೆಲೆ ಗಗನೇರಿಸುವ ಮೂಲಕ ಅಕ್ಟೋಬರ್ 1 ರಂದು ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟಿದೆ. ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 43.5 ರೂ.ಗಳವರೆಗೆ ಹೆಚ್ಚಿಸಿದೆ.
ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಅಕ್ಟೋಬರ್ 1 ರಿಂದ ಎಲ್ ಪಿಜಿ ಅನಿಲ ಸಿಲಿಂಡರ್ ಬೆಲೆಗಳನ್ನು (LPG gas cylinder price) ಹೆಚ್ಚಿಸಿವೆ. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ 1693 ರೂ.ಗಳಿಂದ ಪ್ರತಿ ಸಿಲಿಂಡರ್ ಗೆ 1736.5 ರೂ.ಗೆ ಏರಿಕೆಯಾಗಿದೆ.
ಇದನ್ನೂ ಓದಿ: BIG NEWS : ಜನರಿಗೆ ಮತ್ತೊಂದು ಶಾಕ್ : ಶೀಘ್ರವೇ ಆಟೋ ಪ್ರಯಾಣ ದರ ಏರಿಕೆ !
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಗಳ ಬೆಲೆಯನ್ನು ಹೆಚ್ಚಿಸಿವೆ. ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಗೆ 43.50 ರೂ.ಗಳ ಹೆಚ್ಚಳವಾಗಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಅನಿಲದ ಬೆಲೆ 43.5 ರೂಪಾಯಿ ಏರಿಕೆಕಂಡು 1736.5 ರೂಪಾಯಿಗಳಿಗೆ ತಲುಪಿದೆ. ಕೋಲ್ಕತ್ತಾದಲ್ಲಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ 35 ರೂ ಹೆಚ್ಚಳವಾಗಿದ್ದು, 1805.5 ರೂ.ಗೆ ಏರಿದೆ. ಮುಂಬೈನಲ್ಲಿ ಬೆಲೆ ರೂ.35.5 ರೂ. ಏರಿಕೆಯಾಗಿದ್ದು, 1685 ರೂ. ಏರಿಕೆಯಾಗಿದೆ. ಮತ್ತು ಚೆನ್ನೈನಲ್ಲಿ ರೂ.36.5 ರಷ್ಟು ಏರಿಕೆಯಾಗಿ ಪ್ರತಿ ಸಿಲಿಂಡರ್ ಗೆ ರೂ.1867.5 ಕ್ಕೆ ತಲುಪಿದೆ.
(The commercial LPG cylinder is priced at Rs 43.5. Increase)