ಮಂಗಳವಾರ, ಏಪ್ರಿಲ್ 29, 2025
HomebusinessJan Dhan Account : ಜನ್​ಧನ್​ ಖಾತೆ ತೆರೆಯಲು ಅವಕಾಶ ನೀಡುವ ಖಾಸಗಿ ಬ್ಯಾಂಕ್​ಗಳ ವಿವರ...

Jan Dhan Account : ಜನ್​ಧನ್​ ಖಾತೆ ತೆರೆಯಲು ಅವಕಾಶ ನೀಡುವ ಖಾಸಗಿ ಬ್ಯಾಂಕ್​ಗಳ ವಿವರ ಇಲ್ಲಿದೆ ನೋಡಿ

- Advertisement -

Jan Dhan Account : ಪ್ರಧಾನಮಂತ್ರಿ ಜನ ಧನ ಯೋಜನೆಯು ಕೇಂದ್ರ ಸರ್ಕಾರ ಜಾರಿಗೆ ತಂದ ಮಹತ್ತರ ಯೋಜನೆಗಳಲ್ಲಿ ಒಂದಾಗಿದೆ. ಇದು ದೇಶದ ಕೋಟಿಗಟ್ಟಲೇ ಜನರಿಗೆ ಅನುಕೂಲಕಾರಿಯಾಗಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಘೋಷಣೆ ಮಾಡಿದಾಗಿನಿಂದ ಇಲ್ಲಿಯವರೆಗೆ ಸರಿ ಸುಮಾರು 38 ಕೋಟಿಗೂ ಅಧಿಕ ಮಂದಿ ಜನಧನ ಯೋಜನೆ ಖಾತೆಗಳನ್ನು ತೆರೆದಿದ್ದಾರೆ.
ದೇಶದ ಅನೇಕ ಖಾಸಗಿ ಬ್ಯಾಂಕ್‌ಗಳು ತಮ್ಮ ಶಾಖೆಗಳಲ್ಲಿ ಜನ್ ಧನ್ ಖಾತೆಯನ್ನು ತೆರೆಯಲು ಅವಕಾಶ ಮಾಡಿಕೊಡುತ್ತವೆ. ಆರ್‌ಬಿಐ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿ ಪ್ರಮುಖ ದಾಖಲೆಗಳನ್ನು ಹೊಂದಿಲ್ಲದಿದ್ದರೆ, ಅವರು ಕಡಿಮೆ ಠೇವಣಿ ಮತ್ತು ಹಿಂಪಡೆಯುವ ಮಿತಿಯೊಂದಿಗೆ ಜನ್ ಧನ್ ಖಾತೆಯನ್ನು ತೆರೆಯಬಹುದಾಗಿದೆ.

ಜನ್​ಧನ್​ ಖಾತೆಯನ್ನು ತೆರೆಯಲು ಅವಕಾಶ ಮಾಡಿಕೊಡುವ ಖಾಸಗಿ ಬ್ಯಾಂಕುಗಳ ಪಟ್ಟಿ ಇಲ್ಲಿದೆ :
HDFC ಬ್ಯಾಂಕ್
ಆಕ್ಸಿಸ್ ಬ್ಯಾಂಕ್
ಐಸಿಐಸಿಐ ಬ್ಯಾಂಕ್
ಯೆಸ್ ಬ್ಯಾಂಕ್
ಫೆಡರಲ್ ಬ್ಯಾಂಕ್
ಕೋಟಕ್ ಮಹೀಂದ್ರಾ ಬ್ಯಾಂಕ್
ಕರ್ನಾಟಕ ಬ್ಯಾಂಕ್
ಇಂಡಸ್‌ಇಂಡ್ ಬ್ಯಾಂಕ್
ING ವೈಶ್ಯ ಬ್ಯಾಂಕ್
ಧನಲಕ್ಷ್ಮಿ ಬ್ಯಾಂಕ್
ಜನ್ ಧನ್ ಖಾತೆಯ ಪ್ರಯೋಜನಗಳು :

ಜನ್ ಧನ್ ಖಾತೆದಾರರು 2 ಲಕ್ಷದವರೆಗಿನ ಆಕಸ್ಮಿಕ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ.

ಜನ್ ಧನ್ ಖಾತೆ ಹಿಂಪಡೆಯುವ ಮಿತಿ:ಜನ್​ಧನ್​ ಖಾತೆಯ ಅಡಿಯಲ್ಲಿ ಫಲಾನುಭವಿಗಳು ತಿಂಗಳಿಗೆ 10000 ರೂಪಾಯಿ ಹಣವನ್ನು ವಿತ್​ಡ್ರಾ ಮಾಡಬಹುದಾಗಿದೆ.

ಜನ್​ಧನ್​ ಖಾತೆಯ ಮಿತಿ : ಈ ಯೋಜನೆಯ ಅಡಿಯಲ್ಲಿ ಜನ್​ಧನ್​ ಖಾತೆ ಹೊಂದಿರುವವರು ಗರಿಷ್ಟ 1 ಲಕ್ಷ ರೂಪಾಯಿಗಳನ್ನು ಇಲ್ಲಿ ಇಡಬಹುದಾಗಿದೆ. ಬ್ಯಾಂಕುಗಳು ನಿಮಗೆ ಉಚಿತ ಮೊಬೈಲ್​ ಬ್ಯಾಂಕಿಂಗ್​ ಸೇವೆಗಳನ್ನು ನೀಡುತ್ತವೆ. ಈ ಮೊಬೈಲ್ ಬ್ಯಾಂಕಿಂಗ್​ ಮೂಲಕವೇ ಜನರು ತಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ನೋಡಬಹುದಾಗಿದೆ. ಜನ್​ಧನ್​ ಖಾತೆಯನ್ನು ಹೊಂದಿರುವವರು ಪ್ರಧಾನ್​ಮಂತ್ರಿ ಕಿಸಾನ್​ ಹಾಗೂ ಶ್ರಮ್ ಯೋಗಿ ಮಂಡನ್​​ ಯೋಜನೆಗಳ ಫಲಾನುಭವಿಗಳಾಗಲು ಅರ್ಹರಿರುತ್ತಾರೆ. ಮಹಿಳಾ ಖಾತೆದಾರರು ತಮ್ಮ ಜನ್ ಧನ್ ಖಾತೆಗಳಲ್ಲಿ ಉಜ್ವಲ ಯೋಜನೆ ಅಡಿಯಲ್ಲಿ LPG ಸಬ್ಸಿಡಿ ಮತ್ತು ರಿಫಿಲ್​ ಶುಲ್ಕದ ನೇರ ವರ್ಗಾವಣೆಯನ್ನು ಪಡೆಯುತ್ತಾರೆ. ಖಾತೆದಾರರು ರೂ 30,000 ಜೀವ ವಿಮಾ ರಕ್ಷಣೆಯನ್ನು ಸಹ ಪಡೆಯುತ್ತಾರೆ. ಖಾತೆದಾರನ ಮರಣದ ಸಂದರ್ಭದಲ್ಲಿ ಅದನ್ನು ನಾಮಿನಿಗೆ ನೀಡಲಾಗುತ್ತದೆ.

ಇದನ್ನು ಓದಿ : supporters fighting : ಬಿ.ಕೆ.ಹರಿಪ್ರಸಾದ್‌ vs ರಮಾನಾಥ ರೈ : ಬೆಂಬಲಿಗರ ಗಲಾಟೆಗೆ ಹೈಕಮಾಂಡ್‌ ಗರಂ

ಇದನ್ನೂ ಓದಿ : Karnataka school collage close : ಶಾಲೆ ಕಾಲೇಜು 15-20 ದಿನ ಬಂದ್‌ ಮಾಡಿ : ನೈಟ್‌ ಕರ್ಪ್ಯೂಯಿಂದ ಜನಜೀವನಕ್ಕೆ ತೊಂದರೆ : ಎಚ್.ಡಿ.ಕುಮಾರಸ್ವಾಮಿ

Jan Dhan Account Opening: List Of Private Banks That Allow Opening Account, Benefits, Other Details Here

RELATED ARTICLES

Most Popular