ಮಂಗಳವಾರ, ಏಪ್ರಿಲ್ 29, 2025
HomebusinessJeevan Azad Policy : ಎಲ್‌ಐಸಿ ಈ ಹೊಸ ಪ್ರೀಮಿಯಂನಿಂದ ಕಡಿಮೆ ಹೂಡಿಕೆ ಹೆಚ್ಚು ಲಾಭ

Jeevan Azad Policy : ಎಲ್‌ಐಸಿ ಈ ಹೊಸ ಪ್ರೀಮಿಯಂನಿಂದ ಕಡಿಮೆ ಹೂಡಿಕೆ ಹೆಚ್ಚು ಲಾಭ

- Advertisement -

ನವದೆಹಲಿ : ಭಾರತೀಯ ಜೀವ ವಿಮಾ ನಿಗಮವು (LIC) ಭಾರತತದಲ್ಲಿನ ಅತ್ಯಂತ ದೊಡ್ಡ ಜೀವವಿಮಾ ಕಂಪನಿ ಹಾಗೂ ದೇಶದ ಅತಿ ದೊಡ್ಡ ಹೂಡಿಕೆದಾರ ಕಂಪೆನಿ ಕೂಡ ಆಗಿದೆ. ಇತ್ತೀಚೆಗೆ ಎಲ್ಐಸಿಯು ಹೊಸ ವಿಮಾ ಯೋಜನೆಯನ್ನು ಪರಿಚಯಿಸಿದೆ. ಈ ಎಲ್‌ಐಸಿ ಪಾಲಿಸಿಯ ಹೆಸರು “ಜೀವನ್ ಆಜಾದ್ ಯೋಜನೆ” (Jeevan Azad Policy) ಆಗಿದೆ. ಈ ವಿಮಾ ಪಾಲಿಸಿಯು ಬೇರೆ ಪಾಲಿಸಿಗಿಂತ ವಿಶಿಷ್ಟವಾಗಿದೆ. ಅದಕ್ಕೆ ಕಾರಣ ಇದು ಪಾವತಿಸಿದ ಪ್ರೀಮಿಯಂಗಳ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು ಆದಾಯವನ್ನು ನೀಡುತ್ತದೆ.

ಭಾರತೀಯ ಜೀವ ವಿಮಾ ನಿಗಮವು (LIC) ಜೀವನ್ ಆಜಾದ್ (ಯೋಜನೆ ಸಂಖ್ಯೆ 868) ಪ್ರೀಮಿಯಂ ಪಾಲಿಸಿಯನ್ನು ಪ್ರಾರಂಭಿಸಿದೆ. ಇದು ವೈಯಕ್ತಿಕ ಉಳಿತಾಯ ಮತ್ತು ಜೀವ ವಿಮೆಯ ಗುರಿಯನ್ನು ಹೊಂದಿರುವ ಹೊಸ ಯೋಜನೆಯಾಗಿದೆ. ಎಲ್ಐಸಿ ಪ್ರಕಾರ, ಈ ಪಾಲಿಸಿ ಯೋಜನೆಯು ರಕ್ಷಣೆ ಮತ್ತು ಉಳಿತಾಯದ ಆಕರ್ಷಕ ಸಂಯೋಜನೆಯನ್ನು ನೀಡುತ್ತದೆ. ಹಾಗಾಗಿ ನೀವು ನಿಮ್ಮ ಭವಿಷ್ಯದ ಒಳಿತಿಗಾಗಿ ಈ ಪಾಲಿಸಿಯನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ.

ಜೀವನ್ ಆಜಾದ್ ಯೋಜನೆ ಉದ್ದೇಶ :
ಭಾರತೀಯ ಜೀವ ವಿಮಾ ನಿಗಮ (LIC)ದ ಜೀವನ್ ಆಜಾದ್ ಒಂದು ಸೀಮಿತ ಅವಧಿಯ ಪಾವತಿ ದತ್ತಿ ಯೋಜನೆಯಾಗಿದ್ದು, ಪಾಲಿಸಿ ಅವಧಿಯಲ್ಲಿ ಜೀವ ವಿಮಾದಾರರ ದುರದೃಷ್ಟಕರ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ ಹಣಕಾಸಿನ ನೆರವು ನೀಡುತ್ತದೆ. ಜೀವನ್ ಆಜಾದ್ ಯೋಜನೆಯು ಸಾಲ ಸೌಲಭ್ಯದ ಮೂಲಕ ಹಣದ ಅಗತ್ಯವನ್ನು ಸಹ ನೋಡಿಕೊಳ್ಳುತ್ತದೆ. ಇದು ಮೆಚ್ಯೂರಿಟಿಯ ದಿನಾಂಕದಂದು ಬದುಕಿರುವ ಜೀವಿತಾವಧಿಗೆ ಖಾತರಿಯ ಮೊತ್ತದ ಮೊತ್ತವನ್ನು ಒದಗಿಸುತ್ತದೆ.

ಇದನ್ನೂ ಓದಿ : ಕೇಂದ್ರ ಸರಕಾರಿ ನೌಕರರಿಗೆ ಸಿಹಿ ಸುದ್ಧಿ : ಶೇ. 41ರಷ್ಟು ತುಟಿಭತ್ಯೆ ಹೆಚ್ಚಳ

ಇದನ್ನೂ ಓದಿ : ಸ್ವಿಗ್ಗಿಗೂ ತಟ್ಟಿದ ಉದ್ಯೋಗ ಕಡಿತದ ಭೀತಿ : 600 ಉದ್ಯೋಗಳು ವಜಾ ಸಾಧ್ಯತೆ

ಇದನ್ನೂ ಓದಿ : ಎಸ್‌ಬಿಐ ಗ್ರಾಹಕರೇ ಗಮನಕ್ಕೆ : ನಿಮ್ಮ ಬ್ಯಾಂಕ್‌ ಖಾತೆಯ ಹಣಕ್ಕೆ ಕನ್ನ ಬೀಳಬಹುದು ಎಚ್ಚರ !

ವಿಮಾ ಮೊತ್ತದ ವಿವರ :
ಎಲ್ಐಸಿ ಜೀವನ್ ಆಜಾದ್ ಯೋಜನೆಯಡಿಯಲ್ಲಿ ಕನಿಷ್ಠ ಮೂಲ ವಿಮಾ ಮೊತ್ತವು 2 ಲಕ್ಷ ರೂಪಾಯಿಗಳಾಗಿದ್ದು, ಮೆಚ್ಯೂರಿಟಿ ಸಮಯದಲ್ಲಿ ಗರಿಷ್ಠ ಮೂಲ ವಿಮಾ ಮೊತ್ತವು 5 ಲಕ್ಷ ರೂಪಾಯಿಗಳು ದೊರೆಯುತ್ತದೆ. ಈ ಪಾಲಿಸಿಯನ್ನು ಗ್ರಾಹಕರು 15 ರಿಂದ 20 ವರ್ಷಗಳ ಅವಧಿಗೆ ತೆಗೆದುಕೊಳ್ಳಬಹುದು.

Jeevan Azad Policy : Low investment more profit with this new premium from LIC

RELATED ARTICLES

Most Popular