Kannada News Next

business

ಜಿಯೋ ಪ್ಲಾಟ್‌ಫಾರ್ಮ್‌ IPO ಇಂದಿನಿಂದ ಪ್ರಾರಂಭ ! ಕನಿಷ್ಠ ಹೂಡಿಕೆ, ಬೆಲೆ ಮತ್ತು ಶೇರು ವಿವರ ಹೀಗಿದೆ...

ಜಿಯೋ ಪ್ಲಾಟ್‌ಫಾರ್ಮ್‌ IPO ಸಾರ್ವಜನಿಕರಿಗೆ ಇಂದು ಅಂದರೆ ಅಕ್ಟೋಬರ್‌ 21, 2026 ಕ್ಕೆ ತೆರೆದುಕೊಂಡಿದೆ. ಈ IPO ವಿವರ ಹೀಗಿದೆ...

By Archana V Bhat | ಅರ್ಚನಾ ವಿ ಭಟ್‌
Jio Platforms IPO

ರಿಲಯನ್ಸ್‌ ಒಡೆತನದಲ್ಲಿರುವ ಜಿಯೋ, ದೇಶದ ಅತಿ ದೊಡ್ಡ ಟೆಲಿಕಾಂ ನೆಟವರ್ಕ್‌ ಕಂಪನಿ. ಈಗ ಜಿಯೋ ಪ್ಲಾಟಫಾರ್ಮ್‌ ಶೇರು ಪೇಟೆಗೆ ಪಾದಾರ್ಪಣೆ ಮಾಡಲು ಮುಂದಾಗಿದೆ. ಜಿಯೋ ತನ್ನ IPO ಹೊರತರುವ ಮೂಲಕ ಶೇರು ಪೇಟೆಗೆ ಎಂಟ್ರಿ ಕೊಡಲಿದೆ. ಜಿಯೋ ಪ್ಲಾಟ್‌ಫಾರ್ಮ್‌ IPO ಸಾರ್ವಜನಿಕರಿಗೆ ಇಂದು ಅಂದರೆ ಅಕ್ಟೋಬರ್‌ 21, 2026 ಕ್ಕೆ ತರೆದುಕೊಂಡಿದೆ. ಆಸಕ್ತರು ಅಕ್ಟೋಬರ್‌ 23, 2026 ರವರೆಗೆ ಶೇರು ಖರೀದಿಗೆ ಬಿಡ್‌ ಮಾಡಬಹುದಾಗಿದೆ.

ಜಿಯೋ ಪ್ಲಾಟ್‌ಫಾರ್ಮ್‌ IPO ವಿವರ

ಬಿಡ್‌ ಪ್ರಾರಂಭ ದಿನಾಂಕ : ಅಕ್ಟೋಬರ್‌ 21, 2026

ಬಿಡ್‌ ಅಂತಿಮ ದಿನಾಂಕ : ಅಕ್ಟೋಬರ್‌ 23, 2026

ಅಲಾಟ್ಮೆಂಟ್‌ ದಿನಾಂಕ : ಅಕ್ಟೋಬರ್‌ 26, 2026

ರಿಫಂಡ್‌ ಪ್ರಾರಂಭಿಸುವ ದಿನಾಂಕ : ಅಕ್ಟೋಬರ್‌ 27, 2026

ಲಿಸ್ಟಿಂಗ್ ದಿನಾಂಕ : ಅಕ್ಟೋಬರ್‌ 28, 2026

ಜಿಯೋ IPO ಶೇರಿನ ವಿವರ

ಪ್ರೈಸ್‌ ಬ್ಯಾಂಡ್‌ : ಪ್ರತಿ ಶೇರಿನ ಬೆಲೆ ₹1,065 ದಿಂದ ₹1,119

ಲಾಟ್ ಸೈಝ್‌ : 12 ಶೇರುಗಳು

ಇಶ್ಯು ಸೈಝ್‌ : ₹30,213 ಕೋಟಿ

ಎಕ್ಸ್‌ಚೇಂಜ್ : BSE ಮತ್ತು NSE