Karnataka BPL card holders Alert : ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗದೇ ಸಂಕಷ್ಟ ಎದುರಿಸುತ್ತಿರುವ ಹೊತ್ತಲ್ಲೇ ಬಿಪಿಎಲ್ ಕಾರ್ಡುದಾರರಿಗೆ ಮತ್ತೊಂದು ಶಾಕ್ ಸಿಕ್ಕಿದೆ. ರಾಜ್ಯದಲ್ಲಿ ಬರೋಬ್ಬರಿ 22 ಲಕ್ಷ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುಗಳು ರದ್ದಾಗಲಿವೆ. ಈಗಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನರ್ಹ ಪಡಿತರ ಕಾರ್ಡುದಾರರನ್ನು ಪತ್ತೆ ಮಾಡಿದೆ. ಹಾಗಾದ್ರೆ ಯಾವ ಜಿಲ್ಲೆಯಿಂದ ಎಷ್ಟು ಕಾರ್ಡುಗಳು ರದ್ದಾಗಲಿವೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ಸರಕಾರದ ಆದೇಶದ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅನರ್ಹ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡುತ್ತಿದೆ. ಈಗಾಗಲೇ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಅನರ್ಹ ಪಡಿತರ ಕಾರ್ಡುದಾರರನ್ನು ಪತ್ತೆ ಮಾಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೇ ಅತೀ ಹೆಚ್ಚು ಅನರ್ಹ ಬಿಪಿಎಲ್ ಕಾರ್ಡುಗಳು ಪತ್ತೆಯಾಗಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಯಾವಾಗ ಬಿಡುಗಡೆ ಆಗುತ್ತೆ ? ಇಲ್ಲಿದೆ ಮಹತ್ವದ ಸುದ್ದಿ
ಬೆಂಗಳೂರಿನಲ್ಲಿ 2.54 ಲಕ್ಷ, ಕಲಬುರಗಿಯಲ್ಲಿ 1.57 ಲಕ್ಷ, ಮೈಸೂರಿನಲ್ಲಿ 1.41 ಲಕ್ಷ, ಬೀದರ್ ನಲ್ಲಿ 1.30 ಲಕ್ಷ, ಬೆಳಗಾವಿಯಲ್ಲಿ 1.27 ಲಕ್ಷ, ಕೋಲಾರದಲ್ಲಿ 1.25 ಲಕ್ಷ, ದಕ್ಷಿಣ ಕನ್ನಡ 1.11 ಲಕ್ಷ, ಶಿವಮೊಗ್ಗ1.08 ಲಕ್ಷ, ಚಿಕ್ಕಮಗಳೂರು 1.05 ಲಕ್ಷ, ದಾವಣಗೆರೆ 85 ಸಾವಿರ, ಉಡುಪಿ 80 ಸಾವಿರ, ಬಾಗಲಕೋಟೆ 74 ಲಕ್ಷ, ವಿಜಯಪುರ 62 ಸಾವಿರ, ರಾಯಚೂರು 59 ಸಾವಿರ, ಹಾಸನ 58 ಸಾವಿರ, ಧಾರವಾಡ 55 ಸಾವಿರ, ಮಂಡ್ಯ 51 ೫೧ ಸಾವಿರ, ತುಮಕೂರು 51 ಸಾವಿರ, ಬೆಂಗಳೂರು ಗ್ರಾಮಾಂತರ 50 ಸಾವಿರ, ಹಾವೇರಿ 49 ಸಾವಿರ, ಉತ್ತರ ಕನ್ನಡ49 ಸಾವಿರ, ಚಿತ್ರದುರ್ಗ 43 ಸಾವಿರ, ಕೊಡಗು 32 ಸಾವಿರ, ಬಳ್ಳಾರಿ 31 ಸಾವಿರ, ಗದಗ 29 ಸಾವಿರ, ರಾಮನಗರ 26 ಸಾವಿರ, ವಿಜಯನಗರ 25 ಸಾವಿರ, ಚಾಮರಾಜನಗರ 20 ಸಾವಿರ, ಯಾದಗಿರಿ 19 ಸಾವಿರ, ಕೊಪ್ಪಳ 18 ಸಾವಿರ, ಚಿಕ್ಕಬಳ್ಳಾಪುರ 18 ಸಾವಿರಕ್ಕೂ ಅಧಿಕ ಕಾರ್ಡುಗಳು ರದ್ದಾಗಲಿವೆ.

ಇದನ್ನೂ ಓದಿ : Ration Card e-KYC : ರೇಷನ್ ಕಾರ್ಡ್‌ಗೆ ಇಕೆವೈಸಿ ಕಡ್ಡಾಯ, ತಪ್ಪಿದ್ರೆ ರದ್ದಾಗುತ್ತೆ ಕಾರ್ಡ್
ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಹೊಸ ಮಾನದಂಡ ವನ್ನು ಪರಿಚಯಿಸಿದೆ. 1.20 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿದವರಿಗೆ ಇನ್ಮುಂದೆ ಬಿಪಿಎಲ್ ಕಾರ್ಡ್ ಸಿಗೋದಿಲ್ಲ. ಸ್ವಂತ ಉಪಯೋಗಕ್ಕೆ ಕಾರು, 7.5 ಎಕರೆ ಒಣ ಅಥವಾ ನೀರಾವರಿ ಭೂಮಿ, ಅನುದಾನಿತ / ಅನುದಾನ ರಹಿತ ಶಾಲೆ, ಕಾಲೇಜುಗಳ ನೌಕರರು, ಕೈಗಾರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು, ಗುತ್ತಿಗೆ ನೌಕರರು, 110 ಸಿಸಿ ಮೇಲ್ಪಟ್ಟು ಇಂಧನ ಚಾಲಿತ ದ್ವಿಚಕ್ರ, ತ್ರಿಚಕ್ರ ವಾಹನ ( ಒಂದು ಆಟೋ ರಿಕ್ಷಾ ಹೊರತು ಪಡಿಸಿ) ಸೇರಿದಂತೆ ಒಟ್ಟು 14 ಮಾನದಂಡಗಳನ್ನು ನೀಡಲಾಗಿದೆ.
ಈಗಾಗಲೇ ಪತ್ತೆಯಾಗಿರುವ ಅನರ್ಹ ಪಡಿತರ ಕಾರ್ಡುಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಆದಾಯ ಪ್ರಮಾಣ ಪತ್ರವನ್ನು ನೀಡುವ ಮೂಲಕ ಅನರ್ಹ ಬಿಪಿಎಲ್, ಅಂತ್ಯೋದಯ ಕಾರ್ಡುದಾರರ ಪರಿಶೀಲನೆ ಕಾರ್ಯ ನಡೆಯುತ್ತಿದೆ. ತೆರಿಗೆ ಪಾವತಿ ಮಾಡಿರುವ ಕಾರಣದಿಂದಲೇ ಬಹುತೇಕರ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುಗಳು ರದ್ದಾಗಿವೆ. ರಾಜ್ಯದಲ್ಲಿ 10,97,621 ಬಿಪಿಎಲ್ ಕಾರ್ಡುದಾರರು ತೆರಿಗೆ ಪಾವತಿ ಮಾಡಿದ್ದರೆ, 1,06,152 ಅಂತ್ಯೋದರ ಕಾರ್ಡುದಾರರು ತೆರಿಗೆ ಪಾವತಿಸಿದ್ದಾರೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 4000 ರೂ. ಯಾವಾಗ ಸಿಗುತ್ತೆ ? ಇಲ್ಲಿದೆ ಬಿಗ್ ಅಪ್ಟೇಟ್ಸ್
ಯಾವ ಕಾರಣಕ್ಕೆ ರದ್ದಾಗಲಿದೆ ನಿಮ್ಮ ರೇಷನ್ ಕಾರ್ಡ್ ?
ಸರಕಾರದ ಹೊಸ ನಿಯಮದ ಪ್ರಕಾರ ರೇಷನ್ ಕಾರ್ಡ್‌ದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಲಿಂಕ್ ಮಾಡಬೇಕು. ಹೀಗೆ ಮಾಡುವುದರಿಂದ ಕಾರ್ಡುದಾರರ ಆರ್ಥಿಕ ಸ್ಥಿತಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಬ್ಯಾಂಕುಗಳಿಂದ ಸಾಲ ಪಡೆಯುವ ಸಂದರ್ಭದಲ್ಲಿ ಆದಾಯ ತೆರಿಗೆ ಪಾವತಿ ಮಾಡುವುದು ಕಡ್ಡಾಯ. ಒಂದೊಮ್ಮೆ ಕಡಿಮೆ ಆದಾರವಿದ್ದವರು ಸಾಲದ ಕಾರಣಕ್ಕೆ ಹೆಚ್ಚುವರಿ ಆದಾಯವನ್ನು ತೋರಿಸಿದ್ರೆ ಆಗ ಆದಾಯ ಮಿತಿ 1.20 ೦ಕ್ಕಿಂತ ಅಧಿಕವಾಗುವ ಕಾರಣಕ್ಕೆ ನಿಮ್ಮ ಬಿಪಿಎಲ್ ಕಾರ್ಡ್‌ರದ್ದಾಗಲಿದೆ.
ಇನ್ನು ಕುಟುಂಬದ ಯಾವುದೇ ಸದಸ್ಯರ ಆದಾಯದ 1.20 ಲಕ್ಷಕ್ಕಿಂತ ಅಧಿಕ ಇದ್ದರೆ ಅಂತಹ ಸಂದರ್ಭದಲ್ಲಿ ಬಿಪಿಎಲ್, ಅಂತ್ಯೋದಯ ಕಾರ್ಡ್ ರದ್ದಾಗುವುದು ಖಚಿತ. ಆದಾಯ ದೃಢೀಕರಣ ಪ್ರಮಾಣ ಪತ್ರದಲ್ಲಿ ಹೊಸದಾಗಿ ಆದಾಯವನ್ನು ನಮೂದು ಮಾಡಿದ ಸಂದರ್ಭದಲ್ಲಿ. ನಿಮ್ಮ ಆದಾಯ 1.20 ೦ಕ್ಕಿಂತಲೂ ಅಧಿಕ ಇದೆ ಎಂದು ಅಧಿಕಾರಿಗಳು ನಮೂದು ಮಾಡಿದ್ರೆ ನಿಮ್ಮ ಕಾರ್ಡ್ ರದ್ದಾಗುವುದು ಖಚಿತ.
Karnataka BPL card holders Alert 22 lakh BPL, Antyodaya card Cancel