ಬೆಂಗಳೂರು : ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ (Karnataka Building Construction Workers) ಸುಧಾರಣೆಗಾಗಿ ಹಲವು ಸುಧಾರಣೆಗಳನ್ನು ಮಾಡಲಾಗಿದೆ. ಇದೀಗ ನೋಂದಾಯಿತ ಕಟ್ಟಡ ಕಾರ್ಮಿಕರು ಮಂಡಳಿಯ ವತಿಯಿಂದ ತಮ್ಮ ಅಥವಾ ಅವರ ಮಕ್ಕಳ ಮದುವೆಗಾಗಿ ಸಹಾಯಧನ ಪಡೆಯಬಹುದು. ಕಾರ್ಮಿಕರ ಮದುವೆ ಅಥವಾ ಅವರ ಎರಡು ಮಕ್ಕಳ ಮದುವೆಗೆ ಮಂಡಳಿಯು ರೂ. 60,000 ಧನಸಹಾಯ ನೀಡುತ್ತದೆ.
ಕಟ್ಟಡ ಕಾರ್ಮಿಕರ ಹಾಗೂ ಅವರ ಕುಟುಂಬದವರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅದರಲ್ಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ, ಅಪಘಾತ ವಿಮೆ ಹೀಗೆ ವಿವಿಧ ರೀತಿಯ ಸೌಲಭ್ಯಗಳು ಜಾರಿಯಲ್ಲಿದೆ. ಇದೀಗ ಕಾರ್ಮಿಕರ ಅಥವಾ ಅವರ ಇಬ್ಬರೂ ಮಕ್ಕಳ ಮದುವೆಗೆ ಆರ್ಥಿಕ ನೆರವು ನೀಡುವ ಸಲುವಾಗಿ ಸಹಾಯಧನವನ್ನು ಘೋಷಿಸಿದೆ. ಈ ಸಹಾಯಧನವನ್ನು ಸರಕಾರದಿಂದ ಪಡೆಯಲು ಕಾರ್ಮಿಕರು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು. ಹಾಗೆಯೇ ಯಾವೆಲ್ಲಾ ದಾಖಲೆಗಳ ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಸಲಾಗಿದೆ. ಇದನ್ನೂ ಓದಿ : India Launches Ayush Visa : ಆಯುಷ್ ವೀಸಾವನ್ನು ಪ್ರಾರಂಭಿಸಿದ ಭಾರತ : ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ? ಇಲ್ಲಿದೆ ಮಾಹಿತಿ
ನೋಂದಾಯಿತ ಕಟ್ಟಡ ಕಾರ್ಮಿಕರು ಮಂಡಳಿಯ ವತಿಯಿಂದ ಮದುವೆ ಸಹಾಯಧನ ಪಡೆಯಬಹುದು. ಕಾರ್ಮಿಕರ ಮದುವೆ ಅಥವಾ ಅವರ ಎರಡು ಮಕ್ಕಳ ಮದುವೆಗೆ ಮಂಡಳಿಯು ₹60,000 ಧನಸಹಾಯ ನೀಡುತ್ತದೆ.#ಶ್ರಮಮೇವ_ಜಯತೇ #KBOCWWB pic.twitter.com/JmRziv5h5o
— Construction Workers Welfare Board (@WorkersBoard) August 19, 2023
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು :
- ನೋಂದಣಿ ದಿನಾಂಕದಿಂದ ಮದುವೆ ದಿನಾಂಕದವರೆಗೆ ಮಂಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿಸರಬೇಕು.
- ಒಂದು ಕುಟುಂಬವು ಎರಡು ಬಾರಿ ಮಾತ್ರ ಈ ಸೌಲಭ್ಯ ಪಡೆಯಬಹುದು.
- ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ಹೊಂದಿರಬೇಕು.
- ಮದುವೆಯ ದಿನಾಂಕದಿಂದ ಆರು ತಿಂಗಳೊಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು.
Karnataka Building Construction Workers : 60,000 grant for marriage of children of construction workers: What are the qualifications required to apply?