ಬೆಂಗಳೂರು : ರಾಜ್ಯ ಕರ್ನಾಟಕ ಸರಕಾರದ (karnataka Government ) ಜಾರಿಗೆ ತಂದಿರುವ ಹೊಸ ಯೋಜನೆಗಳಿಗೆ ಪಡಿತರ ಚೀಟಿ ( Ration Card) ಅತ್ಯಗತ್ಯ. ಆದರೆ ಹಲವರು ಪಡಿತರ ಚೀಟಿಯ ಸಮಸ್ಯೆಯಿಂದಲೇ ಸರಕಾರದ ಯೋಜನೆಗಳಿಂದ (Karnataka Government New Schemes) ವಂಚಿತ ರಾಗಿದ್ದಾರೆ. ಇದೀಗ ಪಡಿತರ ಚೀಟಿಗೆ (New Ration Card Application) ಅರ್ಜಿ ಸಲ್ಲಿಸಿದವರಿಗೆ ಸರಕಾರ ಗುಡ್‌ನ್ಯೂಸ್ ಕೊಟ್ಟಿದೆ.
ರಾಜ್ಯದ ಕಾಂಗ್ರೆಸ್ ಸರಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ (Gruha Lakshmi), ಅನ್ನಭಾಗ್ಯ ಯೋಜನೆಗಳಿಗೆ (Anna Bhagya Scheme) ಪಡಿತರ ಚೀಟಿ ( Ration Card) ಕಡ್ಡಾಯವಾಗಿದೆ. ಸರಕಾರ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಪ್ರತೀ ತಿಂಗಳು 2 ಸಾವಿರ ರೂ. ನೀಡುತ್ತಿದೆ. ಆದರೆ ಈ ಯೋಜನೆಯಿಂದ ಇದೀಗ ಲಕ್ಷಾಂತರ ಮಂದಿ ವಂಚಿತರಾಗಿದ್ದಾರೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಗೃಹಿಣಿಯರಿಗೆ ಗುಡ್ ನ್ಯೂಸ್ ಕೊಟ್ಟ ಸರಕಾರ , ಖಾತೆಗೆ 4000ರೂ. ಜಮೆ
ಪಡಿತರ ಚೀಟಿ ತಿದ್ದುಪಡಿಗೆ (Ration Card Updates) ರಾಜ್ಯ ಸರಕಾರ ಈಗಾಗಲೇ ಅವಕಾಶವನ್ನು ನೀಡಿತ್ತು. ಸೆಪ್ಟೆಂಬರ್ 1 ರಿಂದ 14ರ ವರೆಗೆ ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಬಹುದಾಗಿತ್ತು. ಈ ಸಮಯದಲ್ಲಿ ಸಾಕಷ್ಟು ಮಂದಿ ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಿಕೊಂಡು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದರು.
ಇದೀಗ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಹಾಗೂ ಹೊಸದಾಗಿ ಸಲ್ಲಿಸಬಯಸುವವರಿಗೆ ಕೂಡ ಸರಕಾರ ಸಿಹಿ ಸುದ್ದಿಯನ್ನು ಕೊಟ್ಟಿದೆ. ಈಗಾಗಲೇ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಶೀಘ್ರದಲ್ಲಿಯೇ ಪಡಿತರ ಚೀಟಿ ಕೈ ಸೇರಲಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವವರ ಕಾರ್ಡುಗಳ ವಿಲೇವಾರಿ ಆದ ನಂತರದಲ್ಲಿ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಇದನ್ನೂ ಓದಿ : ಉಚಿತ ಎಲ್‌ಪಿಜಿ ಸಂಪರ್ಕ: ಬಡ, ಮಧ್ಯಮ ವರ್ಗದವರಿಗೆ ಸಿಹಿಸುದ್ದಿ, 75 ಲಕ್ಷ ಕುಟುಂಬಗಳಿಗೆ ಉಚಿತ ಗ್ಯಾಸ್
ಪಡಿತರ ಚೀಟಗೆ ಈಗಾಗಲೇ ಅರ್ಜಿ ಸಲ್ಲಿಸಿದವರ ಅರ್ಜಿಗಳ ಪರಿಶೀಲನಾ ಕಾರ್ಯ ಶೇ.75ರಷ್ಟು ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ. ಪರಿಶೀಲನಾ ಕಾರ್ಯ ಸಂಪೂರ್ಣವಾಗಿ ಮುಗಿದ ನಂತರದಲ್ಲಿ ಅರ್ಜಿ ಸಲ್ಲಿಸಿದವರ ಪೈಕಿ ಅರ್ಹರಿಗೆ ಮಾತ್ರವೇ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುತ್ತದೆ.
ಒಂದೊಮ್ಮೆ ನೀವು ಈಗಾಗಲೇ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರೆ. ನೀವು ಆನ್‌ಲೈನ್ ಮೂಲಕ ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲನೆ ಮಾಡಬಹುದಾಗಿದೆ. ಅದ್ರಲ್ಲೂ ನಿಮ್ಮ ಮೊಬೈಲ್ ನಲ್ಲಿ ಈ ಕಾರ್ಯವನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ.

ಆನ್‌ಲೈನ್‌ನಲ್ಲಿ ಪಡಿತರ ಕಾರ್ಡ್ (Ration Card Status) ಸ್ಥಿತಿಯನ್ನು ಪರಿಶೀಲಿಸಲು ಹಂತ:
ಹಂತ 1: ಅಧಿಕೃತ ವೆಬ್‌ಸೈಟ್ https://www.karnataka.gov.in/ ಗೆ ಭೇಟಿ ನೀಡಿ
ಹಂತ 2 : ನಂತರ E-Status ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 3 : ನಂತರ RC ವಿನಂತಿ ಸ್ಥಿತಿ ಲಿಂಕ್ ಟ್ಯಾಬ್ ಅನ್ನು ಆಯ್ಕೆ ಮಾಡಿ
ಹಂತ 4 : ನಂತರ ಅಲ್ಲಿ ಕಂಡುಬರುವ ಜಿಲ್ಲೆಗಳಿಂದ ನಿಮ್ಮ ಜಿಲ್ಲೆಯನ್ನು ಆಯ್ಕೆಮಾಡಿ
ಹಂತ 5: ಹೊಸ ಪಡಿತರ ಚೀಟಿಗಾಗಿ ಸಲ್ಲಿಸಿದ ಅರ್ಜಿಯ ಸ್ಟೇಟಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 6 : ನಂತರ, ಗೋಚರಿಸುವ ಬಾಕ್ಸ್‌ನಲ್ಲಿ ಸ್ವೀಕೃತಿ ಸಂಖ್ಯೆ ನಮೂದಿಸಿ.
ಹಂತ 7: ಅದರ ನಂತರ ಗೋ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಅರ್ಜಿ ಸಲ್ಲಿಕೆ ಸ್ಥಿತಿಯ ಕುರಿತು ಮಾಹಿತಿ ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ: ಪಡಿತರ ಚೀಟಿ ತಿದ್ದುಪಡಿಗೆ ಇನ್ಮುಂದೆ ಅವಕಾಶವೇ ಇಲ್ಲ ! ಜಾರಿಯಾಯ್ತು ಸರಕಾರದ ಹೊಸ ಆದೇಶ

ಪಡಿತರ ಚೀಟಿಯನ್ನು ಆನ್‌ಲೈನ್‌ನಲ್ಲಿ ತಿದ್ದುಪಡಿ ಮಾಡುವ ಹಂತ:
ಹಂತ 1: ಅಧಿಕೃತ https://ahara.kar.nic.in/ ಗೆ ಭೇಟಿ ನೀಡಿ
ಹಂತ 2: ಮುಖಪುಟದಲ್ಲಿ ಇ-ಸೇವೆಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 3 : ಅದರ ನಂತರ ತಿದ್ದುಪಡಿಗಾಗಿ ವಿನಂತಿ / ಹೊಸ ಸೇರ್ಪಡೆ ಆಯ್ಕೆಯು ಕಾಣಿಸಿಕೊಳ್ಳುತ್ತದೆ, ಅದನ್ನು ಆಯ್ಕೆಮಾಡಿ
ಹಂತ 4: ಅದರ ನಂತರ ಹೊಸ ಪುಟ್ ತೆರೆಯುತ್ತದೆ
ಹಂತ 5 : ನಿಮ್ಮ ಜಿಲ್ಲೆಗೆ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಂತ 6 : ಹೊಸ ಸೇರ್ಪಡೆ/ತಿದ್ದುಪಡಿ ನಮೂನೆಯಲ್ಲಿ ಅಗತ್ಯವಿರುವ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
ಹಂತ 7 : ನಂತರ ತಿದ್ದುಪಡಿಗಾಗಿ ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ
ಹಂತ 8: ಅಪ್‌ಲೋಡ್ ಮಾಡಿದ ನಂತರ, ಫಾರ್ಮ್ ಅನ್ನು ಸಲ್ಲಿಸಿ
ಹಂತ 9: ಅರ್ಜಿ ಸಲ್ಲಿಕೆ ರಿಜಿಸ್ಟರ್ ಸಂಖ್ಯೆ ಲಭ್ಯವಿರುತ್ತದೆ
ಹಂತ 10: ಈ ಸಂಖ್ಯೆಯ ಮೂಲಕ ನಿಮ್ಮ ಅರ್ಜಿಯ ಸ್ಥಿತಿಯನ್ನು ನೀವು ಪರಿಶೀಲಿಸಬಹುದು.
Karnataka New Ration Card Good News Gruha Lakshmi and annabhagya Yojana