ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಕರ್ನಾಟಕದ ಜನತೆಗೆ ರಾಜ್ಯ ಸರಕಾರ ಮತ್ತೊಂದು ಶಾಕ್ ಕೊಟ್ಟಿದೆ. ಕೆಎಂಎಫ್ ನಂದಿನಿ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಲು ಸಿದ್ದತೆ ಮಾಡಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಕೂಡ ಹಾಲಿನ ದರ ಏರಿಕೆಯ ಸುಳಿವು ಕೊಟ್ಟಿದ್ದಾರೆ. ನಂದಿನ ಹಾಲಿನ ಬೆಲೆಯಲ್ಲಿ 1 ರಿಂದ ೨ರೂಪಾಯಿ ಏರಿಕೆಯಾಗುವುದು ಫಿಕ್ಸ್ ಎನ್ನಲಾಗುತ್ತಿದೆ.

ಕೆಎಂಎಫ್ ಹಾಲಿನ ದರ ಏರಿಕೆಯ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ವಿದ್ಯುತ್ ದರ ಹೆಚ್ಚಳ, ಪಶು ಆಹಾರದ ಬೆಲೆ ಏರಿಕೆ, ಗೋ ಸಾಕಾಣಿಕೆಯ ನಿರ್ವಹಣಾ ವೆಚ್ಚ ದುಬಾರಿ ಆಗಿರುವ ಕಾರಣಕ್ಕೆ ಹಾಲಿನ ದರ ಏರಿಕೆ ಮಾಡಬೇಕು ಎಂದು ಕರ್ನಾಟಕ ಮಿಲ್ಕ್ ಫೆಡರೇಷನ್ ಸರಕಾರದ ಮೇಲೆ ಒತ್ತಡ ಹೇರಿದೆ. ಕೆಎಂಎಫ್ ಪ್ರಸ್ತಾವನೆಯಂತೆ ಕರ್ನಾಟಕದಲ್ಲಿ ಹಾಲಿನ ದರದಲ್ಲಿ 1 ರಿಂದ 2 ರೂಪಾಯಿ ಹೆಚ್ಚಳ ಮಾಡಲು ರಾಜ್ಯ ಸರಕಾರ ಯೋಜನೆ ರೂಪಿಸಿದೆ.
ಇದನ್ನೂ ಓದಿ : ಕರ್ನಾಟಕದಲ್ಲಿ20 ಲಕ್ಷ ಬಿಪಿಎಲ್ ಕಾರ್ಡ್ ರದ್ದು ! ಜಾರಿಯಾಯ್ತು ಹೊಸ ರೂಲ್ಸ್
ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿದ್ದಾರೆ. ಹಾಲಿನ ಬೆಲೆ ಹೆಚ್ಚಳ ಮಾಡಿದ ಕೂಡಲೇ ಬಿಜೆಪಿಯವರು ನಮ್ಮ ವಿರುದ್ದ ಗಲಾಟೆ ಮಾಡುತ್ತಾರೆ. ಹಾಗಾದ್ರೆ ಹೈನುಗಾರರು ಬದುಕುವುದು ಬೇಡವೇ ? ಎಂದು ಪ್ರಶ್ನಿಸಿದ್ದಾರೆ. ರೈತರೇ ಹಾಲಿನ ಉತ್ಪಾದನೆ ಎಷ್ಟು ಕಷ್ಟದ ಕೆಲಸ ನೀವೇ ಹೇಳಿ ಎಂದಿದ್ದಾರೆ. ರಾಜ್ಯ ಸರಕಾರಕ್ಕಾಗಿ ಹಾಲಿನ ದರ ಏರಿಕೆ ಮಾಡುತ್ತಿಲ್ಲ ಬದಲಾಗಿ ರೈತರ ಹಿತದೃಷ್ಠಿಯಿಂದ ಎಂದಿದ್ದಾರೆ.

ಹಾಲಿನ ದರ ಏರಿಕೆಯ ಮಾಡಿ ಆ ಹಣವನ್ನು ರೈತರಿಗೆ ನೀಡಲಾಗುತ್ತದೆ. ರೈತರ ಹಿತದೃಷ್ಟಿಯಿಂದ ಹಾಲಿನ ಬೆಲೆ ಹೆಚ್ಚಳ ಮಾಡಿದ್ರೆ ತಪ್ಪೇನು. ಹಾಲಿನ ದರ ಏರಿಕೆ ಮಾಡುವುದರಿಂದ ತೆರಿಗೆ ಹೆಚ್ಚಳವಾಗಲಿದೆ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ತಿಳಿಸಿದ್ದಾರೆ. ಆದರೆ ಹಾಲಿನ ಹೆಚ್ಚಳಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಹೆಸರಿನಲ್ಲಿ ರಾಜ್ಯ ಸರಕಾರ ಗ್ರಾಹಕರಿಗೆ ತೊಂದರೆ ನೀಡುತ್ತಿದೆ. ಇದು ಬೆಲೆ ಏರಿಕೆ ಸರಕಾರದ ನಾಟಕ ಎಂದಿದ್ದಾರೆ.
ಇದನ್ನೂ ಓದಿ : ಉಳಿತಾಯ ಖಾತೆಯ ಬಡ್ಡಿ ದರ ಇಳಿಕೆ : ಅಕ್ಟೋಬರ್ 1ರಿಂದ ಹೊಸ ರೂಲ್ಸ್ ಜಾರಿ
KMF Nandini Milk Price Hike 2 rupess