ನಿಮಗೂ ಪದೇ ಪದೇ ಸಿಹಿ ತಿಂಡಿ ತಿನ್ಬೇಕು ಅನ್ಸತ್ತಾ ? ಪೌಷ್ಟಿಕ ತಜ್ಞರ ಪ್ರಕಾರ ಇದು ಯಾವ ರೋಗದ ಸಂಕೇತ?
ಸಿಹಿ ತಿನ್ನಬೇಕೆಂಬ ಅತಿಯಾದ ಬಯಕೆಗೆ ಕಾರಣವೇನು? ಪೌಷ್ಟಿಕ ತಜ್ಞರು ನೀಡುವ ಕಾರಣ ಮತ್ತು ಪರಿಹಾರ ಹೀಗಿದೆ...
By Archana V Bhat | ಅರ್ಚನಾ ವಿ ಭಟ್
1 min read
ಸಿಹಿ ತಿಂಡಿ, ಚಿಪ್ಸ್, ಖಾರದ ತಿಂಡಿಗಳನ್ನು ಆಗೊಮ್ಮೆ ಈಗೊಮ್ಮೆ ತಿನ್ನಬೇಕೆನಿಸುವುದು ಸಹಜ. ಆದರೆ ನಮ್ಮಲ್ಲಿ ಕೆಲವರಿಗೆ ಪದೇ ಪದೇ ಸಿಹಿ ತಿಂಡಿಗಳನ್ನು ತಿನ್ನಬೇಕೆನಿಸುತ್ತದೆ. ಹೊಟ್ಟೆ ತುಂಬಿದ್ದರೂ ಸಿಹಿ ತಿನ್ನಬೇಕೆಂಬ ಬಾಯಿ ಚಪಲ ಮೂಡುತ್ತದೆ. ಸಿಹಿ ತಿನಿಸುಗಳನ್ನು ತಿಂದರೂ ತೃಪ್ತಿ ಎನಿಸುವುದಿಲ್ಲ. ಮೇಲಿಂದ ಮೇಲೆ ತಿನ್ನಬೇಕೆನಿಸುತ್ತದೆ. ಇದೊಂದು ಸಿಹಿ ತಿನ್ನುವ ಅತಿಯಾದ ಬಯಕೆಯಾಗಿದೆ. ಇದು ಯಾವತ್ತೋ ಒಂದು ದಿನ ತಿನ್ನಬೇಕೆನಿಸಿ, ಮರುದಿನ ಸಾಮಾನ್ಯ ಸ್ಥಿತಿಗೆ ಮರಳುವುದಿಲ್ಲ. ಪ್ರತಿದಿನ ಸಿಹಿ ತಿನಿಸುಗಳು ಬೇಕೆನಿಸುತ್ತದೆ. ನಿಯಂತ್ರಣ ಮೀರಿ ತಿನ್ನುವ ಬಯಕೆ ಹೆಚ್ಚಾಗುತ್ತ ಹೋಗುತ್ತದೆ. ಇದು ಸ್ಪಷ್ಟವಾಗಿ ದೇಹದಲ್ಲಿ ಆದ ಬದಲಾವಣೆಯ ಪ್ರಭಾವ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಇದಕ್ಕೆ ಹಾರ್ಮೋನ್‌ಗಳ ವ್ಯತ್ಯಾಸ, ಸಿಹಿ ತಿನ್ನುವ ಕಡು ಬಯಕೆಗಳು, ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಉಂಟಾದ ಏರುಪೇರು ಮುಂತಾದವು ಕಾರಣ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಜೊತೆಗೆ ಮಾನಸಿಕ ಆರೋಗ್ಯದ ಬದಲಾವಣೆಯೂ ಆಗಿರಬಹುದು ಎಂದು ಅವರು ಹೇಳುತ್ತಾರೆ. ಇದಕ್ಕೆ ಪರಿಹಾರವೇನು? ಇಲ್ಲಿದೆ ಓದಿ.
ಪ್ರೋಟೀನ್ ಮತ್ತು ಫೈಬರ್ ಆಹಾರ ಸೇವಿಸಿ
ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಏರುಪೇರಾದರೆ ಅದು ಸಿಹಿ ತಿಂಡಿಗಳನ್ನು ತಿನ್ನುವ ಕಡು ಬಯಕೆಗಳನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಊಟದಲ್ಲಿ ಪ್ರೋಟೀನ್ ಮತ್ತು ಫೈಬರ್ ಅಂಶ ಹೆಚ್ಚಾಗಿರುವ ಆಹಾರಗಳನ್ನು ಸೇವಿಸಿ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಾಯ್ದುಕೊಳ್ಳಲು ಸಹಾಯಮಾಡುತ್ತದೆ. ಇಷ್ಟೇ ಅಲ್ಲದೇ ಉಪ್ಪಿನಂಶ ಹೆಚ್ಚಾಗಿರುವ ಆಹಾರಗಳ ಮೇಲಿನ ಅತಿಯಾದ ಹಂಬಲವು, ವರ್ಕೌಟ್ ನಂತರ, ಡೀಹೈಡ್ರೇಷನ್ ಆದಾಗ, ಎಲೆಕ್ಟ್ರೋಲೈಟ್‌ಗಳ ನಷ್ಟ ಇವುಗಳು ಸಹ ಸಿಹಿ ತಿನಿಸನ್ನು ತಿನ್ನುವಂತೆ ಮಾಡುತ್ತವೆ. ಹೀಗಾದಲ್ಲಿ ಎಳನೀರು, ಮಜ್ಜಿಗೆ, ಒಆರ್‌ಎಸ್ ಗಳನ್ನು ಸೇವಿಸುವುದರಿಂದ ಸಾಮಾನ್ಯ ಸ್ಥಿತಿಗೆ ಮರಳಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ
ದೇಹದಲ್ಲಿನ ಪ್ರತಿ ಬದಲಾವಣೆಗೆ ಮಾನಸಿಕ ಆರೋಗ್ಯ ಹೆಚ್ಚು ಕಾರಣವಾಗಿದೆ. ಹಾಗಾಗಿ ದೇಹ ಮತ್ತು ಮನಸ್ಸು ಎರಡರ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಟಿಪ್ಸ್ ಫಾಲೋ ಮಾಡಿ:
* ಒತ್ತಡ ನಿವಾರಣೆ ಮಾಡಿಕೊಳ್ಳಲು ಪ್ರತಿನಿತ್ಯ ವ್ಯಾಯಾಮ ಮಾಡಿ.
* ನಿರ್ಜಲೀಕರಣವನ್ನು ತಪ್ಪಿಸಲು ಸಾಕಷ್ಟು ನೀರು ಕುಡಿಯಿರಿ.
* ಸಾಕಷ್ಟು ನಿದ್ದೆ ಮಾಡಿ.
* ಊಟದಲ್ಲಿ ಪ್ರೊಟೀನ್, ಫೈಬರ್ ಅಂಶ ಹೆಚ್ಚಿರುವ ಆಹಾರ ಸೇವಿಸಿ.
* ಪ್ರತಿನಿತ್ಯ ಕನಿಷ್ಠ 30 ನಿಮಿಷಗಳ ವಾಕ್ ಮಾಡಿ. ಇದು ತಿನ್ನುವ ಕಡು ಬಯಕೆಗಳನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ.
Topics
ಸಂಬಂಧಿತ ಸುದ್ದಿಗಳು
lifestyle
ದಿನದ ಆಯಾಸ ದೂರ ಮಾಡುವ ಮನೆಮದ್ದುಗಳು ! ಮಲಗುವ ಮುನ್ನ ಕೇವಲ 10 ನಿಮಿಷ ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!
lifestyle
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೀವ್ರ ವ್ಯಾಯಾಮ ಮಾಡುವುದರಿಂದ ಹೆಚ್ಚು ಕೊಬ್ಬು ಕರಗುವುದು ನಿಜನಾ? ತಜ್ಞರ ಉತ್ತರ ಏನು?
lifestyle
ವಿಶ್ವಕರ್ಮ ಜಯಂತಿ 2026: ದೇವಶಿಲ್ಪಿ ವಿಶ್ವಕರ್ಮರನ್ನು ಪೂಜಿಸಲು ಕಾರಣವೇನು?
lifestyle

