ಮಂಗಳವಾರ, ಏಪ್ರಿಲ್ 29, 2025
HomebusinessLIC IPO Policy Holders: ಎಲ್‌ಐಸಿ ಪಾಲಿಸಿದಾರರೇ, ಫೆಬ್ರವರಿ 28ರೊಳಗೆ ಹೀಗೆ ಮಾಡದಿದ್ದರೆ ಎಲ್‌ಐಸಿ ಐಪಿಒಗೆ...

LIC IPO Policy Holders: ಎಲ್‌ಐಸಿ ಪಾಲಿಸಿದಾರರೇ, ಫೆಬ್ರವರಿ 28ರೊಳಗೆ ಹೀಗೆ ಮಾಡದಿದ್ದರೆ ಎಲ್‌ಐಸಿ ಐಪಿಒಗೆ ಅಪ್ಲೈ ಮಾಡೋಕಾಗಲ್ಲ

- Advertisement -

ಬಹುನಿರೀಕ್ಷಿತ LIC IPO ಬಿಡುಗಡೆಯಾಗಲು ಕೆಲವೇ ದಿನಗಳಿವೆ. ಎಲ್‌ಐಸಿ ಐಪಿಒದಲ್ಲಿ ಹೂಡಿಕೆ ಮಾಡಲು, ಪಾಲಿಸಿದಾರರು ಕೆಲವು ಪ್ರಮುಖ ವಿಷಯಗಳನ್ನು ಅನೂಚಾನವಾಗಿ ನಡೆಸಿರಲೇಬೇಕು ಎಂದು ಸರ್ಕಾರ ಸೂಚಿಸಿದೆ. ಎಲಲ್‌ಐಸಿ ಪಾಲಿಸಿದಾರರಿಗೆ ಎಲ್‌ಐಸಿ ಐಪಿಒದಲ್ಲಿ (LIC IPO Policy Holders) ಕೆಲವು ಪಾಲನ್ನು ಪ್ರತ್ಯೇಕವಾಗಿ ಕಾಯ್ದಿರಿಸುವುದಾಗಿ ಸರ್ಕಾರ ಈಮುನ್ನವೇ ಮಾಹಿತಿ ನೀಡಿದೆ. ಆದರೆ ಹೀಗೆ ಮಾಡಲು ಎಲ್‌ಐಸಿ ಪಾಲಿಸಿದಾರರು ತಮ್ಮ PAN  Card ವಿವರಗಳನ್ನು LIC ಪಾಲಿಸಿಯೊಂದಿಗೆ ಲಿಂಕ್ ಮಾಡಿರಬೇಕು. ಅಲ್ಲದೇ ಪಾಲಿಸಿದಾರರು ಕಡ್ಡಾಯವಾಗಿ ಡಿಮ್ಯಾಟ್ ಖಾತೆಯನ್ನು (Demat Account) ಹೊಂದಿರಬೇಕು. ಈ ಲಿಂಕ್ ಮೂಲಕ ಪಾನ್ ಕಾರ್ಡ ವಿವರವನ್ನು ನಿಮ್ಮ ಎಲ್‌ಐಸಿ ಪಾಲಿಸಿಗೆ ಲಿಂಕ್ ಮಾಡಬಹುದಾಗಿದೆ – https://linkpan.licindia.in/UIDSeedingWebApp/

SEBI ಗೆ LIC ಸಲ್ಲಿಸಿದ DRHP ಪ್ರಕಾರ, ಫೆಬ್ರವರಿ 28, 2022 ರ ಮೊದಲು ತನ್ನ/ಆಕೆಯ PAN ಅನ್ನು ನವೀಕರಿಸದ ಪಾಲಿಸಿದಾರರು ಪಾಲಿಸಿದಾರರಿಗೆ ಕಾಯ್ದಿರಿಸಿದ ಭಾಗದ ಅಡಿಯಲ್ಲಿ ಅದರ IPO ನಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ. LIC DRPH ಪ್ರಕಾರ, “ನಮ್ಮ ಕಾರ್ಪೊರೇಶನ್‌ನ ಪಾಲಿಸಿದಾರರು ಪ್ಯಾನ್ ವಿವರಗಳನ್ನು ನಮ್ಮ ಕಾರ್ಪೊರೇಶನ್‌ನ ಪಾಲಿಸಿ ದಾಖಲೆಗಳಲ್ಲಿ ಸಾಧ್ಯವಾದಷ್ಟು ಬೇಗ ನವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.  ಫೆಬ್ರವರಿ 28ರ ಒಳಗೆ ಎಲ್‌ಐಸಿ ಪಾಲಿಸಿದಾರರು ತಮ್ಮ ಪಾನ್ ಕಾರ್ಡ್ ವಿವರಗಳನ್ನು ಎಲ್‌ಐಸಿ ಪಾಲಿಸಿಯ ಜೊತೆ ಲಿಂಕ್ ಮಾಡಬೇಕು. ಈ ದಿನಾಂಕದ ಒಳಗೆ ಲಿಂಕ್ ಮಾಡದಿದ್ದರೆ ಎಲ್‌ಐಸಿ ಪಾಲಿಸಿದಾರರಿಗೆಂದೇ ಪ್ರತ್ಯೇಕವಾಗಿ ಕಾಯ್ದಿರಿಸುವ ಐಪಿಒಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಲೈಫ್ ಇನ್ಶೂರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ.

LIC IPO 31,62,49,885 ಈಕ್ವಿಟಿ ಷೇರುಗಳನ್ನು ಸಂಪೂರ್ಣವಾಗಿ ಮಾರಾಟ ಮಾಡುತ್ತಿದ್ದು ಇದುವರೆಗಿನ ಅತ್ಯಂತ ಉತ್ತಮ ಹೂಡಿಕೆಗಳಲ್ಲಿ ಒಂದಾಗಲಿದೆ ಎಂದೇ ವಿಶ್ಲೇಷಣೆ ಮಾಡಲಾಗಿದೆ.  ಚಿಲ್ಲರೆ ಭಾಗವನ್ನು ಆಫರ್‌ನ 35% ಕ್ಕೆ ನಿಗದಿಪಡಿಸಲಾಗಿದೆ. ಪಾಲಿಸಿದಾರರ ಕಾಯ್ದಿರಿಸುವಿಕೆಯ ಭಾಗವು ಗಾತ್ರದ 10% ಅನ್ನು ಮೀರುವುದಿಲ್ಲ ಮತ್ತು ರಿಯಾಯಿತಿಯಲ್ಲಿ ಸಹ ನೀಡಬಹುದು. ಎಲ್ಐಸಿ ಪಾಲಿಸಿದಾರರು ಪ್ಯಾನ್ ಅನ್ನು ಎಲ್‌ಐಸಿ ವೆಬ್‌ಸೈಟ್ ಮೂಲಕ ಲಿಂಕ್ ಮಾಡಬಹುದಾಗಿದೆ.

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

(LIC IPO Policy Holders link PAN Card details for apply for shares by February 28)

RELATED ARTICLES

Most Popular