LPG Gas Booking: ದೇಶದ ಜನರಿಗೆ ಎಲ್ ಪಿ ಜಿ ಸಿಲಿಂಡರ್ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಈಗಾಗಲೇ ಸರಕಾರ ಗ್ರಾಹಕರಿಗೆ ಸಬ್ಸಿಡಿ ಹಾಗೂ ಸಬ್ಸಿಡಿ ರಹಿತವಾಗಿ ಗ್ಯಾಸ್ ಸಿಲಿಂಡರ್ ನ್ನು ನೀಡುತ್ತಿದೆ, ಕಳೆದ ಒಂದು ವರ್ಷದಿಂದ ರೂ. 811/- ದರದಲ್ಲಿ ಸಿಲಿಂಡರ್ನ್ನು ನೀಡುತ್ತಿದ್ದು ಜನಸಾಮಾನ್ಯರಿಗೆ ಇದರಿಂದ ಬಹಳ ಅನುಕೂಲವಾಗಿತ್ತು.
ಆದರೆ ಕಳೆದ ವಾರ ದಿನಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ರೂ. 50/- ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ದಿನಬಳಕೆ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಹೆಚ್ಚಳ ಅನ್ನುವುದು ಪ್ರಧಾನಮಂತ್ರಿ ಉಜ್ವಲ ಯೋಜನೆ ಗ್ರಾಹಕರಿಗೂ ಅನ್ವಯಿಸುತ್ತದೆ.

ಈ ರೀತಿ ಸಿಲಿಂಡರ್ ಬೆಲೆ ಏರಿಕೆ ನಡುವಲ್ಲೇ, ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಕಾದಿದೆ. ಗ್ರಾಹಕರು ಖಾಲಿ ಸಿಲಿಂಡರ್ ಕೊಟ್ಟು, ತುಂಬಿದ ಸಿಲಿಂಡರ್ ಪಡೆಯಲು ಷರತ್ತುಗಳನ್ನು ಹಾಕಲಾಗಿರುತ್ತದೆ. ಅದೆನೆಂದರೆ ಗ್ರಾಹಕರು ತುಂಬಿದ ಸಿಲಿಂಡರ್ ಪಡೆಯುವುದಕ್ಕಾಗಿ ತಮ್ಮ ಮೊಬೈಲ್ ಫೋನ್ನಿಂದ ಬುಕ್ಕಿಂಗ್ ಅನ್ನು ಮಾಡಬೇಕಾಗುತ್ತದೆ.
Also Read : 50 ರೂ. ಹೂಡಿಕೆ ಮಾಡಿ 35 ಲಕ್ಷ ರೂ. ಪಡೆಯಿರಿ : ಅಂಚೆ ಇಲಾಖೆಯ ಗ್ರಾಮ ಸುರಕ್ಷಾ ಯೋಜನೆ
ಸದ್ಯ ಎಲ್ಲಾ ಗ್ರಾಹಕರು ತಮ್ಮ ಮೊಬೈಲ್ ಫೋನ್ಗಳಿಂದ ಬುಕ್ಕಿಂಗ್ ಮಾಡುತ್ತಿದ್ದು, ಇದೀಗ ಗ್ರಾಹಕರ ಹಿತದೃಷ್ಟಿಯಿಂದ ಸಣ್ಣ ಬದಲಾವಣೆಯನ್ನು ಮಾಡಲಾಗಿರುತ್ತದೆ. ಗ್ರಾಹಕರ ಗ್ಯಾಸ್ ಸಿಲಿಂಡರ್ ಮರು ಪೂರ್ಣವನ್ನು ಪಡೆಯವುದಕ್ಕಾಗಿ, ತಾವು ಸಿಲಿಂಡರ್ ಪಡೆದ ಗ್ಯಾಸ್ ಏಜೆನ್ಸಿಯಲ್ಲಿ ತಮ್ಮ ಮೊಬೈಲ್ ನಂಬರ್ನ್ನು ನೋಂದಣಿ ಮಾಡಿರಬೇಕು.

ಹಾಗೆಯೇ ಯಾವ ಮೊಬೈಲ್ ನಂಬರ್ ನೋಂದಣಿ ಆಗಿರುತ್ತದೆ. ಆದೇ ನಂಬರ್ ಯಿಂದ ಗ್ಯಾಸ್ ಬುಕ್ಕಿಂಗ್ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಗ್ಯಾಸ್ ಬುಕ್ಕಿಂಗ್ ಮಾಡಿದ ಕೂಡಲೇ ಬುಕ್ಕಿಂಗ್ ಮೆಸೇಜ್ ಮೊಬೈಲ್ಗೆ ಬರುತ್ತದೆ. ಈ ಬುಕ್ಕಿಂಗ್ ಮೆಸೇಜ್ಯಲ್ಲಿಯೇ ನಾಲ್ಕು ಅಂಕಿಯ ಓಟಿಪಿ ಇರುತ್ತದೆ. ಈ ಓಟಿಪಿ ನೀಡುವುದರಿಂದ ನಿಮ್ಮಗೆ ದಿನಬಳಕೆಯ ಸಿಲಿಂಡರ್ ಸುಲಭವಾಗಿ ಸಿಗುತ್ತದೆ.
ಈಗಾಗಲೇ ತಮ್ಮ ಮೊಬೈಲ್ ನಂಬರ್ ನೋಂದಣಿ ಮಾಡಿರುವ ಗ್ರಾಹಕರಿಗೆ ಈ ಸುದ್ದಿ ಅನ್ವಯವಾಗುವುದಿಲ್ಲ. ಹಾಗೆಯೇ ವಾಣಿಣ್ಯ ಸಿಲಿಂಡರ್ ಗ್ರಾಹಕರಿಗೂ ಅನ್ವಯಿಸುವುದಿಲ್ಲ. ಆದರೆ ಇನ್ನು ಮೊಬೈಲ್ ನಂಬರ್ ನೋಂದಣಿ ಮಾಡಿಕೊಳ್ಳದ ಗ್ರಾಹಕರೇ ಕೂಡಲೇ ಹೋಗಿ ತಾವು ಸಿಲಿಂಡರ್ ಪಡೆದ ಏಜೆನ್ಸಿಯಲ್ಲಿ ತಮ್ಮ ಮೊಬೈಲ್ ನಂಬರ್ನ್ನು ನೋಂದಣಿ ಮಾಡಿಕೊಳ್ಳಬೇಕಾಗಿದೆ.