LPG gas subsidy : ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದ ಕೇಂದ್ರ ಸರಕಾರ ಎಲ್‌ಪಿಜಿ (LPG) ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಗ್ಯಾಸ್ ಬಳಕೆದಾರರಿಗೆ ಗ್ಯಾಸ್ ಸಬ್ಸಿಡಿ ಹಣ ಬಿಡುಗಡೆ ಮಾಡಿದೆ. ಕೆಲವರ ಖಾತೆಗಳಿಗೆ ಈಗಾಗಲೇ ಹಣ ಜಮೆ ಆಗಿದೆ. ಉಳಿದವರಿಗೆ ಇನ್ನೂ ಸಬ್ಸಿಡಿ ಹಣ ಬಂದಿಲ್ಲ.

ಕೇಂದ್ರ ಸರಕಾರ ಗ್ಯಾಸ್ ಬಳಕೆದಾರರಿಗೆ ಸಬ್ಸಿಡಿ ಹಣವನ್ನು ಖಾತೆದಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡುತ್ತಿದೆ. ಆದರೆ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಸಬ್ಸಿಡಿ ಹಣ ಸಂದಾಯ ಮಾಡುವುದನ್ನು ಸ್ಥಗಿತಗೊಳಿಸಿದೆ. ಆದ್ರೀಗ ಕೇಂದ್ರ ಸರಕಾರ ಉಜ್ವಲ ಯೋಜನೆಯ ಫಲಾನುಭವಿಗಳ ಖಾತೆಗೆ ಸಬ್ಸಿಡಿ ಹಣ ಪಾವತಿ ಮಾಡುತ್ತಿದೆ.
ಉಜ್ವಲ ಯೋಜನೆಯ (Ujwala Yojana) ಮೂಲಕ ಪ್ರತೀ ಮನೆಗೆ ಉಚಿತ ಸಿಲಿಂಡರ್ (Free Gas) ವ್ಯವಸ್ಥೆಯನ್ನು ಕೇಂದ್ರ ಸರಕಾರ ಕಲ್ಪಿಸುತ್ತಿದೆ. ಈಗಾಗಲೇ ಲಕ್ಷಾಂತರ ಮಂದಿ ಈ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಂಪರ್ಕವನ್ನು ಪಡೆದುಕೊಂಡಿದ್ದಾರೆ. ಉಜ್ವಲ ಯೋಜನೆಯ ಮೂಲಕ ಗ್ರಾಹಕರು ೧೦೦ ರೂಪಾಯಿ ಸಬ್ಸಿಡಿಯನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಸುಕನ್ಯಾ ಸಮೃದ್ದಿ ಹಣ ಅವಧಿಗೂ ಮುನ್ನ ವಾಪಾಸ್ ಪಡೆಯುವುದು ಹೇಗೆ ? ಇಲ್ಲಿದೆ ಹೊಸ ರೂಲ್ಸ್
ಆದರೆ ಗ್ತಾಸ್ ಸಿಲಿಂಡರ್ ಖರೀದಿ ಮಾಡುವ ವೇಳೆಯಲ್ಲಿ ಗ್ರಾಹಕರು ಸಂಪೂರ್ಣ ಹಣವನ್ನು ಪಾವತಿ ಮಾಡಬೇಕಾಗಿದೆ. ಸಂಪೂರ್ಣ ಹಣವನ್ನು ನೀಡಿ ಸಿಲಿಂಡರ್ ಖರೀದಿ ಮಾಡಿದ ನಂತರದಲ್ಲಿ ಖಾತೆದಾರರ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇಕೆವೈಸಿ ಮಾಡಿಸುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಒಂದೊಮ್ಮೆ ಇಕೆವೈಸಿ ಮಾಡಿಸದೇ ಇರುವ ಗ್ರಾಹಕರಿಗೆ ಸಬ್ಸಿಡಿ ಹಣವನ್ನು ನೀಡಲಾಗುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಸರಕಾರದ ನಿರ್ದೇಶನದ ಪ್ರಕಾರ ಸಬ್ಸಿಡಿಯನ್ನು ಪಡೆಯಬೇಕಾದ್ರೆ ಗ್ರಾಹಕರು ತಮ್ಮ ಗ್ಯಾಸ್ ಖಾತೆಯನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಬೇಕಾಗಿದೆ.
ಇದನ್ನೂ ಓದಿ : ಯುವನಿಧಿ ಯೋಜನೆಗೆ ಹೊಸ ರೂಲ್ಸ್ : ಈ ದಾಖಲೆ ಸಲ್ಲಿಸದಿದ್ರೆ ಸಿಗಲ್ಲ ಯುವನಿಧಿ ಯೋಜನೆಯ ಹಣ
ಗ್ಯಾಸ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ (aadhaar Card Link) ಮಾಡದೇ ಇದ್ರೆ ಅಂತವರಿಗೆ ಸಬ್ಸಿಡಿ ಹಣ ದೊರೆಯುವುದಿಲ್ಲ. ಇನ್ನು ಕೇಂದ್ರ ಸರಕಾರ ಗ್ಯಾಸ್ ಸಬ್ಸಿಡಿ ಹಣ ಬಿಡುಗಡೆ ಗೊಳಿಸಿದ್ದರೂ ಕೂಡ ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ, ಆಗಿಲ್ಲ ಅನ್ನೋ ಮಾಹಿತಿಯನ್ನು ನೀವು ಮನೆಯಲ್ಲಿಯೇ ಕುಳಿತು ಪಡೆದುಕೊಳ್ಳಬಹುದಾಗಿದೆ.
ನೀವು https://www.mylpg.in/ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆಯೇ ಗ್ಯಾಸ್ ಕಂಪೆನಿಗಳ ಹೆಸರನ್ನು ತೋರಿಸುತ್ತದೆ. ನೀವು ಯಾವ ಕಂಪೆನಿಯ ಗ್ಯಾಸ್ ಸಂಪರ್ಕ ಹೊಂದಿದ್ದೀರೋ, ಆ ಹೆಸರನ್ನು ಕ್ಲಿಕ್ ಮಾಡುತ್ತಿದ್ದಂತೆಯೇ ನಿಮ್ಮ ಖಾತೆಯ ವಿವರವನ್ನು ಸಲ್ಲಿಸುವ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ಅನ್ನೋದನ್ನು ಪತ್ತೆ ಹಚ್ಚಬಹುದಾಗಿದೆ.
ಇದನ್ನೂ ಓದಿ : NPS To OPS : ಹಳೇ ಪಿಂಚಣಿ ಯೋಜನೆ ಜಾರಿ : ಕರ್ನಾಟಕ ಸರಕಾರದಿಂದ ಅಧಿಕೃತ ಆದೇಶ
LPG gas subsidy money release, has the money been deposited in your account, how to check ?