ನವದೆಹಲಿ : ತೈಲ ಮಾರುಕಟ್ಟೆಯಲ್ಲಿ ತೈಲ ಕಂಪೆನಿಗಳು ಎಲ್‌ಪಿಜಿ ಸಿಲಿಂಡರ್ (LPG Cylinder Price ) ದರವನ್ನು ಏರಿಕೆ ಮಾಡಿವೆ. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 6 ರೂಪಾಯಿ ಹೆಚ್ಚಳವಾಗಿದೆ. ಯಾವ ನಗರದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟಿದೆ ಅನ್ನೋದನ್ನು ನೋಡೋಣಾ ಬನ್ನಿ.
ಮಾರ್ಚ್ ತಿಂಗಳು ಆರಂಭದಲ್ಲಿಯೇ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ಇದೀಗ ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆಯ ನಂತರ, 19 ಕೆಜಿ ವಾಣಿಜ್ಯ LPG ಸಿಲಿಂಡರ್‌ನ ಬೆಲೆಯನ್ನು 1,797 ರೂಪಾಯಿಯಿಂದ 1,803ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
OMC ಯ LPG ಬೆಲೆ ಪರಿಷ್ಕರಣೆ ಮಾಡಿದ್ರೂ ಕೂಡ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಆಗಸ್ಟ್ 2024 ರಿಂದ 14.2-ಕೆಜಿ ದೇಶೀಯ LPG ಸಿಲಿಂಡರ್‌ಗಳ ದರಗಳು ಬದಲಾಗಿಲ್ಲ. ಭಾರತದ ಪ್ರಮುಖ ಗ್ಯಾಸ್ ತಯಾರಿಕಾ ಕಂಪೆನಿ ಇಂಡಿಯನ್ ಆಯಿಲ್ 19 ಕೆಜಿ ವಾಣಿಜ್ಯ LPG ಸಿಲಿಂಡರ್‌ನ ಬೆಲೆಯನ್ನು 6 ರೂ. ಹೆಚ್ಚಿಸಿದೆ.
Also Read : Ujjwala Yojana : ಒಂದು ಕುಟುಂಬಕ್ಕೆ 2 ಉಚಿತ ಗ್ಯಾಸ್ ಸಿಲಿಂಡರ್ : ಅಪ್ಲೈ ಮಾಡೋದು ಹೇಗೆ ?

ಫೆಬ್ರವರಿಯಲ್ಲಿ 1,797 ರೂ.ಗಳಿಗೆ ಲಭ್ಯವಾಗುತ್ತಿದ್ದ ಗ್ಯಾಸ್ ಸಿಲಿಂಡರ್ ಇದೀಗ 1,803 ರೂ.ಗಳಿಗೆ 19 ಕೆಜಿ ವಾಣಿಜ್ಯ LPG ಸಿಲಿಂಡರ್ ಲಭ್ಯವಿದೆ. ಫೆಬ್ರವರಿಯಲ್ಲಿ 1,907 ರೂ.ಗಳಿಂದ ಕೋಲ್ಕತ್ತಾದಲ್ಲಿ 1,913 ರೂ.ಗಳಿಗೆ ಏರಿಕೆಯಾಗಿದೆ. ಮುಂಬೈನಲ್ಲಿ, ಈ ಸಿಲಿಂಡರ್ ಈಗ 1,755.50 ರೂ.ಗಳಿಗೆ ಲಭ್ಯವಿದೆ.
ಫೆಬ್ರವರಿಯಲ್ಲಿ ಇದರ ಬೆಲೆ 1,749.50 ರೂ.ಗಳಷ್ಟಿತ್ತು. ದೇಶೀಯ 14 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸದ್ಯ ರೂ.803ಗೆ ಲಭ್ಯವಿದೆ.
Also Read : ಗೃಹಲಕ್ಷ್ಮೀ, ಶಕ್ತಿ ಯೋಜನೆ , ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗೆ ಹೊಸ ರೂಲ್ಸ್ ..!
ಭಾರತದ ಮಹಾನಗರಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟಿದೆ ತಿಳಿಯೋಣಾ
ಲಕ್ನೋ: ರೂ 840.50
ಕೋಲ್ಕತ್ತಾ: ರೂ 829
ಮುಂಬೈ: ರೂ 802.50
ಚೆನ್ನೈ: ರೂ 818.50
ಎಲ್‌ಪಿಜಿ ಬೆಲೆ ಸಿಲಿಂಡರ್‌ಗೆ ರೂ 6 ರಷ್ಟು ಏರಿಕೆ:
ಮಾರ್ಚ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇದು ಅತ್ಯಂತ ಕಡಿಮೆ ಏರಿಕೆಯಾಗಿದೆ. ಕಳೆದ ವರ್ಷ, ಮಾರ್ಚ್ 1, 2024 ರಂದು, ಒಮ್ಮೆ 26 ರೂ. ಈ ಬಾರಿ ಫೆಬ್ರವರಿಯಲ್ಲಿ 7 ರೂ.ಗಳ ಅಲ್ಪ ಪರಿಹಾರವನ್ನು ಮತ್ತೆ 6 ರೂ.ಗೆ ಹೆಚ್ಚಳವಾಗಿದೆ.

ಪ್ರಮುಖ ನಗರಗಳಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ ಇಲ್ಲಿದೆ :
ನವದೆಹಲಿ – ರೂ 803.00
ಮುಂಬೈ – ರೂ 802.50
ಗುರಗಾಂವ್ – ರೂ 811.50
ಬೆಂಗಳೂರು – ರೂ 805.50
ಚಂಡೀಗಢ – ರೂ 812.50
ಜೈಪುರ – ರೂ 806.50
ಪಾಟ್ನಾ – ರೂ 892.50
ಕೋಲ್ಕತ್ತಾ – ರೂ 829.00
ಚೆನ್ನೈ – ರೂ 818.50
ನೋಯ್ಡಾ – ರೂ 800.50
ಭುವನೇಶ್ವರ – ರೂ 829.00
ಹೈದರಾಬಾದ್ – ರೂ 855.00
ಲಕ್ನೋ – ರೂ 840.50
ತಿರುವನಂತಪುರ – ರೂ 812.00.
LPG Price hike by Rs 6 per cylinder