ಶನಿವಾರ, ಏಪ್ರಿಲ್ 26, 2025
Homebusinessಮಹಿಳಾ ಸಮೃದ್ಧಿ ಯೋಜನೆ : ಮಹಿಳೆಯರಿಗೆ ಪ್ರತೀ ತಿಂಗಳು ಸಿಗಲಿದೆ 2500 ರೂ.

ಮಹಿಳಾ ಸಮೃದ್ಧಿ ಯೋಜನೆ : ಮಹಿಳೆಯರಿಗೆ ಪ್ರತೀ ತಿಂಗಳು ಸಿಗಲಿದೆ 2500 ರೂ.

ಭಾರತೀಯ ಜನತಾ ಪಾರ್ಟಿ ಚುನಾವಣೆಯ ಪೂರ್ವದಲ್ಲಿ ಮಹಿಳಾ ಸಮೃದ್ದಿ ಯೋಜನೆಯನ್ನು ಘೋಷಣೆ ಮಾಡಿದೆ. ಮಹಿಳೆಯರಿಗಾಗಿಯೇ ಇದೀಗ 2500 ರೂಪಾಯಿ ಆರ್ಥಿಕ ಸಹಾಯ ನೀಡುವ ಯೋಜನೆಯನ್ನು ರೂಪಿಸಿದೆ.

- Advertisement -

Mahila Samriddhi Yojana : ಕರ್ನಾಟಕದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿಯಲ್ಲಿದೆ. ಗೃಹಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತೀ ತಿಂಗಳು 2000 ರೂಪಾಯಿಯನ್ನು ನೇರ ವರ್ಗಾವಣೆ ಮಾಡಲಾಗುತ್ತಿದೆ. ಆದ್ರೀಗ ಮಹಿಳೆಯರಿಗಾಗಿಯೇ ಮಹಿಳಾ ಸಮೃದ್ದಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ಪ್ರತೀ ತಿಂಗಳು 2500 ರೂಪಾಯಿ ದೊರೆಯಲಿದೆ.

ಅಂದ ಹಾಗೆ ಈ ಯೋಜನೆ ಜಾರಿ ಆಗ್ತಾ ಇರೋದು ದೆಹಲಿಯಲ್ಲಿ. ದೆಹಲಿಯಲ್ಲಿ ಬಿಜೆಪಿ ಸರಕಾರ ಜಾರಿಗೆ ಬರುತ್ತಿದ್ದಂತೆಯೇ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮಹಿಳಾ ಸಮೃದ್ದಿ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನ. ಇದೇ ದಿನದಂದು ಮಹಿಳಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಲಿದ್ದಾರೆ.

ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರೇಖಾಗುಪ್ತ ಹಲವು ಯೋಜನೆಯನ್ನು ಜಾರಿ ಮಾಡುತ್ತಿದ್ದಾರೆ. ಇಂದು ಮಹಿಳಾ ಸಮೃದ್ದಿ ಯೋಜನೆ ಅಧಿಕೃತ ಘೋಷಣೆಯಾದ ಬೆನ್ನಲ್ಲೇ ಈ ಯೋಜನೆ ಜಾರಿಗೆ ಬರಲಿದೆ. ಈ ಯೋಜನೆಯ ಮೂಲಕ ಮಹಿಳೆಯರು ಪ್ರತೀ ತಿಂಗಳೂ 2500 ರೂಪಾಯಿಯನ್ನು ಪಡೆಯಲಿದ್ದಾರೆ.

Also Read : ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆ ಆಗಿದ್ಯಾ ? ಹೀಗೆ ಚೆಕ್‌ ಮಾಡಿ

ಭಾರತೀಯ ಜನತಾ ಪಾರ್ಟಿ ಚುನಾವಣೆಯ ಪೂರ್ವದಲ್ಲಿ ಮಹಿಳಾ ಸಮೃದ್ದಿ ಯೋಜನೆಯನ್ನು ಘೋಷಣೆ ಮಾಡಿದೆ. ಮಹಿಳೆಯರಿಗಾಗಿಯೇ ಇದೀಗ 2500 ರೂಪಾಯಿ ಆರ್ಥಿಕ ಸಹಾಯ ನೀಡುವ ಯೋಜನೆಯನ್ನು ರೂಪಿಸಿದೆ. ಆದ್ರೆ ಈ ಕುರಿತು ಅಧಿಕೃತ ಅಧಿಸೂಚನೆ ಇನ್ನಷ್ಟೆ ಹೊರ ಬೀಳಲಿದೆ.

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಮಹಿಳಾ ಸಮೃದ್ದಿ ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ. ತದನಂತರದಲ್ಲಿ ಈ ಯೋಜನೆ ಅಧಿಕೃತವಾಗಿ ಜಾರಿಗೆ ಬರಲಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ವಾರ್ಷಿಕ 3 ಲಕ್ಷ ರೂ.ಗಳಿಗಿಂತ ಕಡಿಮೆ ಮನೆಯ ಆದಾಯ ಹೊಂದಿರುವ ತೆರಿಗೆ ಮುಕ್ತ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಹರು.

18 ರಿಂದ 60 ವರ್ಷದ ಒಳಗಿನ ಮಹಿಳೆಯರು ಈ ಯೋಜನೆ ಲಾಭವನ್ನು ಪಡೆಯಲಿದ್ದಾರೆ. ಮಹಿಳಾ ಸಮೃದ್ದಿ ಯೋಜನೆಯ ಫಲಾನುಭವಿಗಳಿಗೆ ನೇರ ವರ್ಗಾವಣೆಯ ಮೂಲಕ ಹಣ ಸಂದಾಯ ಮಾಡಲಾಗುತ್ತದೆ. ಆದರೆ ಸರಕಾರಿ ನೌಕರರನ್ನು ಹೊರತು ಪಡಿಸಿ ಉಳಿದ ಎಲ್ಲಾ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.

Also Read : ಪಡಿತರ ಕಾರ್ಡ್‌ ಇಕೆವೈಸಿ ಮಾಡಿಸಿದಿದ್ರೆ ರದ್ದಾಗುತ್ತೆ ನಿಮ್ಮ ಕಾರ್ಡ್‌

ಮಹಿಳಾ ಸಮೃದ್ದಿ ಯೋಜನೆಗೆ ಅರ್ಜಿ ಸಲ್ಲಿಸಲು ವೆಬ್ಸೈಟ್‌ ಹಾಗೂ ಮೊಬೈಲ್‌ ಆಪ್‌ ಸಿದ್ದಪಡಿಸಿದ್ದು, ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಮಹಿಳಾ ಸಮೃದ್ದಿ ಯೋಜನೆಗೆ ಯಾರು ಅರ್ಹರು ?

  • ಅರ್ಜಿದಾರರು ದೆಹಲಿಯ ನಾಗರಿಕರಾಗಿರಬೇಕು ಮತ್ತು ಸರ್ಕಾರಿ ನೌಕರರು ಅಥವಾ ನಿವೃತ್ತ ಉದ್ಯೋಗಿಗಳಾಗಿರಬಾರದು.
  • ಈ ಯೋಜನೆ ಬಡ ಮಹಿಳೆಯರಿಗೆ ಮಾತ್ರ.
  • ಮಹಿಳೆ ಬಡತನ ರೇಖೆಗಿಂತ ಕೆಳಗಿನವರು (ಬಿಪಿಎಲ್) ಅಥವಾ ಇಡಬ್ಲ್ಯೂಎಸ್ ವರ್ಗದ ಅಡಿಯಲ್ಲಿ ಬರಬೇಕು.
  • ಮಹಿಳೆಯರ ಕುಟುಂಬದ ವಾರ್ಷಿಕ ಆದಾಯ 2.5 -3 ಲಕ್ಷ ಮೀರುವಂತೆ ಇಲ್ಲ.
  • 18 ರಿಂದ 60 ವರ್ಷದ ಒಳಗಿನ ಮಹಿಳೆಯರು ಅರ್ಹರು

ಮಹಿಳಾ ಸಮೃದ್ದಿ ಯೋಜನೆಗೆ ಈ ದಾಖಲೆಗಳು ಕಡ್ಡಾಯ

  • ಆಧಾರ್ ಕಾರ್ಡ್
  • ದೆಹಲಿಯ ನಿವಾಸಿ ಎಂದು ಪ್ರಮಾಣಪತ್ರ
  • ಬಿಪಿಎಲ್ ಕಾರ್ಡ್
  • ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ಸಂಖ್ಯೆ
  • ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ
  • ಆದಾಯದ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಗಾತ್ರದ ಫೋಟೋ.

Mahila Samriddhi Yojana launch After Gruhalakshmi Scheme womens get Rs 2500 monthly Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular