ನವದೆಹಲಿ : ಇಷ್ಟು ದಿನ 10 ಸಂಖ್ಯೆಯ ಮೊಬೈಲ್ ನಂಬರ್ ಬಳಕೆ ಮಾಡಲಾಗುತ್ತಿದೆ. ಆದ್ರೀಗ ಮೊಬೈಲ್ ಸಂಖ್ಯೆಯನ್ನು 11ಕ್ಕೆ ಏರಿಕೆ ಮಾಡುವಂತೆ ಟ್ರಾಯ್ ( ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ) ಶಿಫಾರಸ್ಸು ಮಾಡಿದೆ.

ಟ್ರಾಯ್ ಮಾಡಿರುವ ಶಿಫಾರಸ್ಸಿನಿಂದಾಗಿ ಈಗಿರುವ ಸಂಖ್ಯೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಆದರೆ ಸ್ಥಿರ ದೂರವಾಣಿಯಿಂದ ಯಾವುದೇ ಮೊಬೈಲ್ ಗೆ ಕರೆ ಮಾಡುವ ಮೊದಲು ಮೊಬೈಲ್ ಸಂಖ್ಯೆಗೆ ಸೊನ್ನೆಯನ್ನು ಸೇರಿಸಿಕೊಳ್ಳಬೇಕಿದೆ.

ಆದರೆ ಮೊಬೈಲ್ ನಿಂದ ಮೊಬೈಲ್ ಗೆ ಹಾಗೂ ಮೊಬೈಲ್ ನಿಂದ ಸ್ಥಿರದೂರವಾಣಿಗೆ ಕರೆ ಮಾಡುವಾಗ ಯಾವುದೇ ಬದಲಾವಣೆಗಳಾಗುವುದಿಲ್ಲ.

ಮುಂದಿನ ದಿನಗಳಲ್ಲಿ ಎಲ್ಲಾ ಕಂಪೆನಿಗಳ ಮೊಬೈಲ್ ಸಂಖ್ಯೆ 11ಕ್ಕೆ ಏರಿಕೆಯಾಗಲಿದೆ. ಈ ಕುರಿತು ಮೊಬೈಲ್ ಸೇವೆಯನ್ನು ನೀಡುತ್ತಿರುವ ಕಂಪೆನಿಗಳು ಗ್ರಾಹಕರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ. ಸದ್ಯಕ್ಕೆ ಸ್ಥಿರ ದೂರವಾಣಿಯಿಂದ ಕರೆ ಮಾಡುವಾಗ ಸೊನ್ನೆಯನ್ನು ಬಳಕೆ ಮಾಡುವುದರಿಂದ ಸೇವೆಯನ್ನು ಪಡೆಯಬಹುದಾಗಿದೆ.