Musk gets Twitter : ವಿಶ್ವದ ಶ್ರೀಮಂತ ಉದ್ಯಮಿ ಹಾಗೂ ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿ ಮಾಲೀಕ ಎಲಾನ್ ಮಸ್ಕ್ ಕೊನೆಗೂ ವಿಶ್ವದ ಪ್ರಮುಖ ಜಾಲತಾಣವಾದ ಟ್ವಿಟರ್ ಕಂಪನಿಯನ್ನು (Musk gets Twitter) ತನ್ನ ತೆಕ್ಕೆಗೆ ಉರುಳಿಸಿಕೊಂಡಿದ್ದಾರೆ. ಸರಿ ಸುಮಾರು 44 ಬಿಲಿಯನ್ ಡಾಲರ್ (3.36 ಲಕ್ಷ ಕೋಟಿ ರೂಪಾಯಿ)ಗಳಿಗೆ ಎಲಾನ್ ಮಸ್ಕ್ ಟ್ವಿಟರ್ ಮಾಲೀಕತ್ವವನ್ನು ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಎಲಾನ್ ಮಸ್ಕ್ ಟ್ವಿಟರ್ನ ಪ್ರತಿ ಷೇರಿಗೆ 54.20 ಡಾಲರ್ಗಳನ್ನು ನೀಡಿದಂತಾಗಿದೆ.
ಟ್ವಿಟರ್ನ್ನು ಖರೀದಿ ಮಾಡಲು ಮುಂದಾಗಿದ್ದ ಎಲಾನ್ ಮಸ್ಕ್ ಕಂಪನಿಯ ಎದುರು ಪ್ರತಿ ಷೇರಿಗೆ 54.20 ಡಾಲರ್ಗಳನ್ನು ನೀಡುವ ಬಗ್ಗೆ ಪ್ರಸ್ತಾಪವನ್ನು ಇಟ್ಟಿದ್ದರು. ಈ ಹಿಂದೆ ಎಲಾನ್ ಮಸ್ಕ್ ಟ್ವಿಟರ್ನಲ್ಲಿ ಶೇಕಡಾ 9.2ರಷ್ಟು ಪಾಲನ್ನು ಹೊಂದಿದ್ದರು. ಇದಾದ ಬಳಿಕ ಸಾಕಷ್ಟು ಚರ್ಚೆಗಳು ನಡೆದಿದ್ದು ಕೊನೆಗೂ ಎಲಾನ್ ಮಸ್ಕ್ ಟ್ವಿಟರ್ ಕಂಪನಿಯ ಮಾಲೀಕತ್ವವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ವ್ಯಾಪಾರ ಒಪ್ಪಂದಕ್ಕೂ ತೆರೆ ಎಳೆದಂತಾಗಿದೆ.
2013ರಿಂದ ಟ್ವಿಟರ್ ಕಂಪನಿಯು ಸಾರ್ವಜನಿಕ ಷೇರುಗಳ ಮೂಲಕ ಹೂಡಿಕೆಯ ಕಂಪನಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಇದೀಗ ಎಲಾನ್ ಮಸ್ಕ್ ಸಂಪೂರ್ಣ ಷೇರುಗಳಿಗೆ 3.36 ಲಕ್ಷ ಕೋಟಿ ರೂಪಾಯಿಗಳನ್ನು ನೀಡಿ ಖರೀದಿ ಮಾಡಿದ್ದಾರೆ. ಕಂಪನಿಯು ಇದೀಗ ಸಂಪೂರ್ಣ ಎಲಾನ್ ಮಸ್ಕ್ ಪಾಲಾಗಿರುವುದರಿಂದ ಇನ್ಮುಂದೆ ಟ್ವಿಟರ್ ಖಾಸಗಿ ಕಂಪನಿಯಾಗಿ ಕಾರ್ಯ ನಿರ್ವಹಿಸಲಿದೆ.
ಟ್ವಿಟರ್ನ್ನು ಖರೀದಿ ಮಾಡುವ ಅಭಿಲಾಷೆಯನ್ನು ಹೊಂದಿದ್ದ ಎಲಾನ್ ಮಸ್ಕ್ ಏಪ್ರಿಲ್ 14ರಂದು ತಾವು ಟ್ವಿಟರ್ ಖರೀದಿ ಮಾಡಲು ಬಯಸಿರುವುದಾಗಿ ಹೇಳಿದ್ದರು. ಟ್ವಿಟರ್ನಲ್ಲಿ ಹೆಚ್ಚಿನ ಷೇರುಗಳನ್ನು ಹೊಂದಿದ್ದ ಎಲಾನ್ ಮಸ್ಕ್ ಪ್ರಸ್ತಾಪವನ್ನು ಮೊದಲು ಟ್ವಿಟರ್ ಕಂಪನಿ ಒಪ್ಪಿಕೊಂಡಿರಲಿಲ್ಲ. ಆದರೆ ಇದೀಗ ಸಾಕಷ್ಟು ಚರ್ಚೆಗಳ ಬಳಿಕ ಎಲಾನ್ ಮಸ್ಕ್ ತಾವಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಎಲಾನ್ ಮಸ್ಕ್ ಯೆಸ್ ಎಂದು ಬರೆದುಕೊಂಡಿದ್ದಾರೆ.
ಈ ವಿಚಾರವಾಗಿ ಹೇಳಿಕೆ ನೀಡಿರುವ ಎಲಾನ್ ಮಸ್ಕ್ ಟ್ವಿಟರ್ ಎಂಬ ಡಿಜಿಟಲ್ ವೇದಿಕೆಯಲ್ಲಿ ಮನುಷ್ಯನ ಭವಿಷ್ಯದ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಟ್ವಿಟರ್ನ್ನು ಎಲ್ಲರಿಗೂ ತಲುಪುವಂತೆ ಮಾಡಬೇಕು. ಟ್ವಿಟರ್ಗೆ ಇನ್ನೂ ಬೆಳೆಯುವ ಸಾಮರ್ಥ್ಯವಿದೆ. ಇದೊಂದು ಪ್ರಜಾಪ್ರಭುತ್ವದ ತಳಹದಿಯಾಗಿದೆ. ಟ್ವಿಟರ್ ಎಲ್ಲರನ್ನೂ ತಲುಪುವಂತೆ ಮಾಡಲು ನಾನು ಬಳಕೆದಾರರೊಂದಿಗೆ ಕೆಲಸ ಮಾಡುತ್ತೇನೆ. ಅಲ್ಲದೇ ನನ್ನ ತೀರಾ ಕೆಟ್ಟದಾಗಿ ಟೀಕಿಸುವವರೂ ಕೂಡ ಟ್ವಿಟರ್ನಲ್ಲಿ ಉಳಿಯಬೇಕು. ವಾಕ್ ಸ್ವಾತಂತ್ರ್ಯ ಅಂದರೆ ಅದೇ ಅಲ್ಲವೇ ಎಂದು ಹಿತ ಶತ್ರುಗಳಿಗೆ ಟಾಂಗ್ ನೀಡಿದ್ದಾರೆ.
ಇದನ್ನು ಓದಿ : Bank holidays in May 2022 : ಗ್ರಾಹಕರ ಗಮನಕ್ಕೆ, ಮೇನಲ್ಲಿ 14 ದಿನ ಬ್ಯಾಂಕ್ ರಜೆ
ಇದನ್ನೂ ಓದಿ : Aadhaar PAN link : ನಿಮ್ಮ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಆಗಿದೆಯಾ ? ಮೊಬೈಲ್‌ನಲ್ಲೇ ಚೆಕ್ ಮಾಡಿ
Musk gets Twitter for $44 billion, to cheers and fears of ‘free speech’ plan