ಭಾನುವಾರ, ಏಪ್ರಿಲ್ 27, 2025
HomebusinessNew BPL Ration Card : ಬಿಪಿಎಲ್ ಕಾರ್ಡ್ ಗೆ ಹೊಸದಾಗಿ ಅರ್ಜಿ ಸಲ್ಲಿಸಲು ಜೂನ್...

New BPL Ration Card : ಬಿಪಿಎಲ್ ಕಾರ್ಡ್ ಗೆ ಹೊಸದಾಗಿ ಅರ್ಜಿ ಸಲ್ಲಿಸಲು ಜೂನ್ 1ರಿಂದ ಅವಕಾಶ

- Advertisement -

ಬೆಂಗಳೂರು : ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್‌ ಕಾರ್ಡ್‌ಗೆ (New BPL Ration Card) ಅರ್ಜಿ ಸಲ್ಲಿಸುವವರಿಗೆ ಜೂನ್ 1ರಿಂದ ಅವಕಾಶ ಕಲ್ಪಿಸಲಾಗಿದೆ. ಕಾಂಗ್ರೆಸ್‌ ಸರಕಾರ ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದ್ದು, ಈ ಎಲ್ಲಾ ಐದು ಗ್ಯಾರಂಟಿ ಯೋಜನೆಗಳಿಗೆ ಮುಖ್ಯವಾಗಿ ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಮಾತ್ರ ಎನ್ನಲಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಬಿಪಿಎಲ್‌ ಕಾರ್ಡ್‌ಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಜನರು ಸರಕಾರದ ಪ್ರಯೋಜನ ಪಡೆಯಲು ಬಿಪಿಎಲ್‌ ರೇಷನ್‌ ಕಾರ್ಡ್‌ಗಾಗಿ ಮುಗಿ ಬಿದ್ದಿದ್ದಾರೆ.

ಅದು ಅಲ್ಲದೇ ಹೊಸ ಪಡಿತರ ಚೀಟಿಗಾಗಿ ಅರ್ಜಿ ಪ್ರಕ್ರಿಯನ್ನು ಆಹಾರ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರಿಂದ, ಸರಕಾರದ ಉಚಿತ ಕೊಡುಗೆಗಳ್ನು ಪಡೆಯಲು ಮುಂದಾಗಿದ್ದು, ಕೆಲವು ಜನರಿಗೆ ನಿರಾಶೆಯಾಗಿತ್ತು. ಆದರೆ, ಬಿಪಿಎಲ್‌ ಕಾರ್ಡ್‌ ನಿರೀಕ್ಷೆಯಲ್ಲಿ ಇದ್ದವರಿಗೆ ಇದೀಗ ಮತ್ತೆ ಬಿಪಿಎಲ್‌ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಜೂನ್‌ 1 ರಿಂದ ಅವಕಾಶ ಕಲ್ಪಿಸಲು ಆಹಾರ ಇಲಾಖೆ ತೀರ್ಮಾನ ಮಾಡಿದೆ.

ಬಿಪಿಎಲ್‌ ಪಡಿತರ ಚೀಟಿ ಅರ್ಜಿ ಸಲ್ಲಿಸಲು ದಾಖಲಾತಿಗಳ ವಿವರ :

  • ಆಧಾರ್‌ ಕಾರ್ಡ್‌
  • ಜಾತಿ ಮತ್ತು ಆದಾಯ
  • ರೇಷನ್‌ ಕಾರ್ಡ್‌ ಸಂಖ್ಯೆ
  • ಜನನ ಪ್ರಮಾಣ ಪತ್ರ (ಆರು ವರ್ಷದ ಒಳಗೆ ಮಕ್ಕಳು ಇದ್ದರೆ ಮಾತ್ರ )

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ :

  • ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಆದ https://ahara.kar.nic.in/ ಗೆ ಲಾಗ್‌ ಇನ್‌ ಆಗಬೇಕು. ನಂತರ ಇ-ಸೇವೆಗಳು ()ಟ್ಯಾಬ್‌ ಮೇಲೆ ಕ್ಲಿಕ್‌ ಮಾಡಬೇಕು.
  • ಇ-ರೇಷನ್‌ ಕಾರ್ಡ್‌ನಿಂದ ಹೊಸ ಪಡಿತರ ಚೀಟಿಯನ್ನು ಆಯ್ಕೆ ಮಾಡಬೇಕು. New Ration card request ಮೇಲೆ ಕ್ಲಿಕ್‌ ಮಾಡಬೇಕು.
  • ನಂತರ ಬಿಪಿಎಲ್‌ ಕಾರ್ಡ್‌ ಅರ್ಜಿ ಸಲ್ಲಿಸಲು ಆದ್ಯತಾ ಹೌಸ್‌ಹೋಲ್ಡ್‌ ಪಡಿತರ ಚೀಟಿ ಮೇಲೆ ಕ್ಲಿಕ್‌ ಮಾಡಬೇಕು.
  • ನಂತರ ನಿಮ್ಮ ಆಧಾರ್‌ ಸಂಖ್ಯೆಯನ್ನು ಟೈಪ್‌ ಮಾಡಿ, ಗೋ ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು. ನಂತರ ಒಟಿಪಿ ಅಥವಾ ಫಿಂಗರ್‌ಪ್ರಿಂಟ್‌ ಪರಿಶೀಲನೆಯನ್ನು ಬಳಸಿಕೊಂಡು ಯಶಸ್ವಿ ದೃಢೀಕರಣ ಮಾಡಬೇಕು.
  • ಅರ್ಜಿದಾರರು ಓಟಿಪಿಯನ್ನು ಆಯ್ಕೆ ಮಾಡಿದರೆ, ನೊಂದಾಯಿತ ಮೊಬೈಲ್‌ ಫೋನ್‌ಗೆ ಎಸ್‌ಎಮ್‌ಎಸ್‌ ಕಳುಹಿಸಲಾಗುತ್ತದೆ. ಓಟಿಪಿಯನ್ನು ನಮೂದಿಸಿದ ನಂತರ ಗೋ ಬಟನ್‌ ಕ್ಲಿಕ್‌ ಮಾಡಬೇಕು. ಯಶಸ್ವಿ ಪರಿಶಿಲನೆಯ ನಂತರ ಆಧಾರ್‌ ಡೇಟಾವನ್ನು ತೋರಿಸಲಾಗುತ್ತದೆ. ನಂತರ ಸೇರಿಸು ಬಟನ್‌ ಕ್ಲಿಕ್‌ ಮಾಎಉವ ಮೂಲಕ ಅಪ್ಲಿಕೇಶನ್‌ ಸಂಖ್ಯೆ ಕ್ರಿಯೇಟ್‌ ಆಗುತ್ತದೆ.
  • ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್‌ ಮಾಡಬೇಕು. ಪೂರ್ಣಗೊಳಿಸಿದ ನಂತೆ ನಿಮ್ಮ ಅರ್ಜಿಯನ್ನು ಕಳುಹಿಸಲು ಸಲ್ಲಿಸು ಬಟನ್‌ ಮೇಲೆ ಕ್ಲಿಕ್‌ ಮಾಡು ಅರ್ಜಿ ಪೂರ್ಣಗೊಳಿಸಬೇಕು.

ಇದನ್ನೂ ಓದಿ : FD Scheme for Senior Citizens : ಹಿರಿಯ ನಾಗರಿಕರ ಈ ಎಫ್‌ಡಿ ಯೋಜನೆಯನ್ನು ಜುಲೈ 7ವರೆಗೆ ವಿಸ್ತರಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್‌

ಈ ರೀತಿಯಾಗಿ ನೀವು ಮೇಲೆ ತಿಳಿಸಿರುವ ಎಲ್ಲಾ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ CSC ಸೆಂಟರ್ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರದಲ್ಲಿ ಅಥವಾ ಸೈಬರ್ ಸೆಂಟರ್ ಗಳಿಗೆ ಹೋಗಬಹುದು. ನಾವೇ ಸ್ವತಃ ಮೊಬೈಲ್ ಫೋನ್ ಮೂಲಕ ಅರ್ಜಿ ಸಲ್ಲಿಸಲು Secugen ಬಯೋಮೆಟ್ರಿಕ್ ನ ಅವಶ್ಯಕತೆ ಇರುವುದರಿಂದ, ಹತ್ತಿರದ ಸೈಬರ್ ಸೆಂಟರ್ ಸಿಎಸ್ಸಿ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ದಯವಿಟ್ಟು ಭೇಟಿ ನೀಡಿ ತಮ್ಮ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

New BPL Ration Card: Opportunity to apply for BPL card from June 1

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular