NPS, SBI, FASTag, FD, Home Loan Rules Changes : ಕೇವಲ ಒಂದು ದಿನ ಮುಗಿದ್ರೆ ಸಾಕು ಜನವರಿ ತಿಂಗಳು ಮುಗಿದು ಫೆಬ್ರವರಿ ತಿಂಗಳು ಬರಲಿದೆ. ಫೆಬ್ರವರಿ 1, 2024 ರಿಂದ ಈ 6 ಪ್ರಮುಖ ನಿಯಮಗಳಲ್ಲಿ ಬಾರೀ ಬದಲಾವಣೆ ಆಗಲಿದೆ. ಇದು ನಿಮ್ಮ ಜೇಬಿಗೆ ಕತ್ತರಿ ಹಾಕುವುದು ಖಚಿತ. ಹಾಗಾದ್ರೆ ಬದಲಾವಣೆ ಆಗಲಿರುವ ಆ ಆರು ನಿಯಮಗಳು ಯಾವುವು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಹಿಂತೆಗೆದುಕೊಳ್ಳುವ ನಿಯಮಗಳು:
ಜನವರಿ 12 ರಂದು PFRDA ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಖಾತೆದಾರರು ತಮ್ಮ ಪಿಂಚಣಿ ಖಾತೆಯ ಕೊಡುಗೆಯ 25 ಪ್ರತಿಶತವನ್ನು ಮಾತ್ರ ಹಿಂಪಡೆಯಬಹುದು. ಪರಿಶೀಲನೆಯ ನಂತರವೇ, CRA ಭಾಗಶಃ ವಾಪಸಾತಿ ವಿನಂತಿಯನ್ನು ಪ್ರಕ್ರಿಯೆಗೊಳಿಸುತ್ತದೆ.

IMPS ನಿಧಿ ವರ್ಗಾವಣೆಯಲ್ಲಿನ ಬದಲಾವಣೆಗಳು:
ಬ್ಯಾಂಕಿಂಗ್‌ನ ಕೆಲವು ಸೇವೆಗಳಲ್ಲಿಯೂ ಬದಲಾವಣೆ ಆಗಲಿದೆ. ಅದ್ರಲ್ಲೂ ಫೆಬ್ರವರಿ 1 ರಿಂದ ತಕ್ಷಣದ ಪಾವತಿ ಸೇವೆ (IMPS) ನಿಯಮಗಳು ಬದಲಾಗುತ್ತವೆ. ಈ ನಿಯಮದ ಅಡಿಯಲ್ಲಿ, ನೀವು ಈಗ ಫಲಾನುಭವಿಯ ಹೆಸರನ್ನು ಸೇರಿಸದೆಯೇ ಬ್ಯಾಂಕ್ ಖಾತೆಗೆ 5 ಲಕ್ಷದವರೆಗೆ ಹಣವನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ. ಗ್ರಾಹಕರು ಯಾರಿಗೆ ಹಣವನ್ನು ವರ್ಗಾವಣೆ ಮಾಡಲಿದ್ದಾರೆಯೋ ಅವರ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಹೆಸರನ್ನು ನಮೂದಿಸಬೇಕಾಗುತ್ತದೆ.
ಇದನ್ನೂ ಓದಿ : ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ ಬಿಡುಗಡೆ, ನಿಮ್ಮ ಖಾತೆಗೆ ಹಣ ಜಮೆ ಆಗಿದ್ಯಾ, ಚೆಕ್ ಮಾಡೋದು ಹೇಗೆ ?
ಫಾಸ್ಟ್ಯಾಗ್ KYC ಅಪ್‌ಡೇಟ್ :
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) FASTag ನಿಯಮಗಳನ್ನು ಬದಲಾಯಿಸುವ ಮೂಲಕ KYC ಅನ್ನು ಕಡ್ಡಾಯಗೊಳಿಸಿದೆ. FASTTAG KYC ಅನ್ನು ಪೂರ್ಣಗೊಳಿಸದ ವಾಹನಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. FASTAG KYC ನವೀಕರಣಕ್ಕೆ ಕೊನೆಯ ದಿನಾಂಕ 31 ಜನವರಿ 2024 ವಾಗಿದೆ. ಅದಕ್ಕೂ ಮೊದಲೇ ಗ್ರಾಹಕರು ತಮ್ಮ ಕೆವೈಸಿಯನ್ನು ಅಪ್ಡೇಟ್ಸ್ ಮಾಡಿಕೊಳ್ಳಬೇಕಾಗಿದೆ.
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಸ್ಥಿರ ಠೇವಣಿ:
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ವಿಶೇಷ FD ಯೋಜನೆ ಯನ್ನು ಪ್ರಾರಂಭಿಸಿದೆ. ಧನ ಲಕ್ಷ್ಮಿ 444 ದಿನಗಳ FD ಸೌಲಭ್ಯವನ್ನು ಪಡೆಯಲು ಗ್ರಾಹಕರು 31 ಜನವರಿ 2024 ರವರೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಠೇವಣಿಯ ಮೇಲೆ 7.60% ಬಡ್ಡಿದರದ ಲಾಭವನ್ನು ನೀವು ಪಡೆಯುತ್ತೀರಿ.
ಇದನ್ನೂ ಓದಿ : ಸುಕನ್ಯಾ ಸಮೃದ್ದಿ ಹಣ ಅವಧಿಗೂ ಮುನ್ನ ವಾಪಾಸ್ ಪಡೆಯುವುದು ಹೇಗೆ ? ಇಲ್ಲಿದೆ ಹೊಸ ರೂಲ್ಸ್

SBI ಗೃಹ ಸಾಲ ಅಭಿಯಾನ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರ ಅನುಕೂಲಕ್ಕಾಗಿ ವಿಶೇಷ ಗೃಹ ಸಾಲ ಸೌಲಭ್ಯವನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ, ಗ್ರಾಹಕರಿಗೆ ಗೃಹ ಸಾಲಗಳ ಮೇಲೆ 65 bps ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. ಪ್ರಕ್ರಿಯೆ ಶುಲ್ಕ ಮತ್ತು ಸಾಲ ಮನ್ನಾಗೆ ಕೊನೆಯ ದಿನಾಂಕ 31 ಜನವರಿ 2024.
ಚಿನ್ನದ ಬಾಂಡ್ ನಿಯಮದಲ್ಲಿ ಬದಲಾವಣೆ:
ಒಂದೊಮ್ಮೆ ನೀವು ಚಿನ್ನದ ಬಾಂಡ್‌ಗಳಲ್ಲಿ (SGB) ಹೂಡಿಕೆ ಮಾಡಲು ಬಯಸಿದರೆ, ಭಾರತೀಯ ರಿಸರ್ವ್ ಬ್ಯಾಂಕ್ ನಿಮಗೆ ಸುವರ್ಣಾವಕಾಶವನ್ನು ತರುತ್ತಿದೆ. ನೀವು ಫೆಬ್ರವರಿ 12 ರಿಂದ ಫೆಬ್ರವರಿ 16, 2024 ರವರೆಗೆ SGB 2023-24 ಸರಣಿ 4 ರಲ್ಲಿ ಹೂಡಿಕೆ ಮಾಡಬಹುದು.
ಇದನ್ನೂ ಓದಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ : ರೈತರಿಗೆ ಸಿಗಲಿದೆ ದುಪ್ಪಟ್ಟು ಹಣ
NPS, SBI, FASTag, FD, Home Loan : Rules Changes in these 6 important terms from February 1