ಭಾನುವಾರ, ಏಪ್ರಿಲ್ 27, 2025
Homebusinessಪ್ಯಾನ್ ಆಧಾರ್ ಲಿಂಕ್ ಉಚಿತ : ಈ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ ಸರಕಾರ

ಪ್ಯಾನ್ ಆಧಾರ್ ಲಿಂಕ್ ಉಚಿತ : ಈ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ ಸರಕಾರ

- Advertisement -

ನವದೆಹಲಿ : ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ತೆರಿಗೆದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ಯಾನ್ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಲಿಂಕ್‌ (PAN Aadhaar link is free) ಮಾಡಲು ನೀಡಿದ್ದ ಕಾಲಾವಕಾಶ ಈಗಾಗಲೇ ಮುಗಿದಿದೆ. ಆದರೆ ಇದೀಗ ದಂಡ ಪಾವತಿಸಿ ಲಿಂಕ್‌ ಮಾಡಲು ಮೂರು ತಿಂಗಳ ಕಾಲಾವಕಾಶವನ್ನು ನೀಡಿದೆ. ಪ್ಯಾನ್ ಆಧಾರ್ ಲಿಂಕ್ ಉಚಿತ ಎಂದು ಗಾಳಿ ಸುದ್ದಿ ಹರಡಿದ್ದು, ಈ ಕುರಿತಂತೆ ಕೇಂದ್ರ ಸರಕಾರದ ಇದೀಗ ಸ್ಪಷ್ಟನೆಯನ್ನು ನೀಡಿದೆ.

ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಆಧಾರ್ ಪ್ಯಾನ್ ಲಿಂಕ್ ಮಾಡುವಾಗ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಮನಗಂಡ ಸರಕಾರ ಇನ್ನೂ 3 ತಿಂಗಳು ಕಾಲಾವಕಾಶ ನೀಡಿದೆ. ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಈಗ 1000 ರೂಪಾಯಿ ದಂಡ ವಿಧಿಸಲಾಗುತ್ತದೆ. ಆದರೆ 3 ತಿಂಗಳವರೆಗೆ ಪ್ಯಾನ್-ಆಧಾರ್ ಲಿಂಕ್ ಮಾಡಲು 1000 ದಂಡವಿಲ್ಲ ಮತ್ತು ಅದನ್ನು ಉಚಿತವಾಗಿ ಮಾಡಬಹುದು. ಈ ರೀತಿಯ ಪೋಸ್ಟ್‌ಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪ್ಯಾನ್-ಆಧಾರ್ ಲಿಂಕ್ ಮಾಡಲು ಕೇಂದ್ರ ಸರಕಾರ ವಿನಾಯಿತಿ ನೀಡಿದೆ ಎಂದು ಕೆಲವರು ಈ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಈ ಸುದ್ದಿ ಸುಳ್ಳು ಆಗಿರುತ್ತದೆ. ಪ್ಯಾನ್-ಆಧಾರ್ ಕಾರ್ಡ್ ಮಾಡಲು ಕೇಂದ್ರ ಸರಕಾರ ಯಾವುದೇ ವಿನಾಯಿತಿ ನೀಡಿಲ್ಲ. ಪ್ಯಾನ್-ಆಧಾರ್ ಲಿಂಕ್ಗಾಗಿ 1000 ರೂಪಾಯಿ ದಂಡ ವಿಧಿಸಿ ಮಾಡಬೇಕಾಗಿದೆ.

ಇದನ್ನೂ ಓದಿ : ಆರ್‌ಬಿಐಗೆ ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೀರಜ್ ನಿಗಮ್ ನೇಮಕ

ಇದನ್ನೂ ಓದಿ : ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಬಿಗ್‌ ಅಪ್‌ಡೇಟ್‌ ನೀಡಿದ ಎಸ್‌ಬಿಐ : ನಿಯಮಗಳಲ್ಲಿ ಮಹತ್ವದ ಬದಲಾವಣೆ

ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಕೇಂದ್ರ ಸರಕಾರ ಹೇಳಿದೆ. ಈ ಹಿಂದೆ, 1,000 ರೂಪಾಯಿ ದಂಡದೊಂದಿಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಮಾರ್ಚ್ 31, 2023 ರವರೆಗೆ ಸಮಯ ನೀಡಲಾಗಿತ್ತು. ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕೇಂದ್ರ ಸರಕಾರದ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿದೆ. ಇದರ ನಂತರ, ಈ ದಿನಾಂಕದ ಗಡುವನ್ನು ವಿಸ್ತರಿಸಲಾಗಿದೆ. ನೀವು ಇದನ್ನು ಇನ್ನೂ ಮಾಡದಿದ್ದರೆ, ಹೊಸ ಗಡುವಿನ ಮೊದಲು ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕಾಗಿದೆ.

PAN Aadhaar link is free: Central government has clarified this

RELATED ARTICLES

Most Popular