Personal loan : ಒಂದಿಲ್ಲ ಒಂದು ಕಾರಣಕ್ಕೆ ವೈಯಕ್ತಿಕ ಸಾಲವನ್ನು ಪ್ರತಿಯೊಬ್ಬರು ಪಡೆದುಕೊಳ್ಳುತ್ತಾರೆ. ಬ್ಯಾಂಕುಗಳು ಕೂಡ ವೈಯಕ್ತಿಕ ಸಾಲವನ್ನು ನೀಡುತ್ತವೆ. ಸುಲಭವಾಗಿ ಸಿಗುತ್ತೆ ಅನ್ನೋ ಕಾರಣಕ್ಕೆ ವೈಯಕ್ತಿಕ ಸಾಲವನ್ನು ಪಡೆದುಕೊಂಡ್ರೆ ಸಮಸ್ಯೆಗೆ ಸಿಲುಕುವ ಸಾಧ್ಯತೆಯಿದೆ. ಅದ್ರಲ್ಲೂ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವ ಕೆಲವೊಂದು ಅಂಶಗಳನ್ನು ನೀವು ತಿಳಿದುಕೊಳ್ಳುವುದು ಬಹುಮುಖ್ಯ.

ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ವೈಯಕ್ತಿಕ ಸಾಲದ ಬಗೆಗಿನ ಮಾಹಿತಿಯನ್ನು ಪಡೆದುಕೊಳ್ಳುವುದು ತೀರಾ ಮುಖ್ಯ. ಬ್ಯಾಂಕ್ ಅಥವಾ ಕ್ರಿಡಿಟ್ ಯೂನಿಯನ್ ಅಥವಾ ಆನ್‌ಲೈನ್ ಮೂಲಕ ಸಾಲ ಪಡೆದುಕೊಳ್ಳುವಾಗ ಮುಖ್ಯವಾಗಿ ನಿಮ್ಮ ಆದಾಯದ ಮಿತಿಯನ್ನು ನಿರ್ಧಾರ ಮಾಡುತ್ತದೆ. ಉದ್ಯೋಗದ ವಿವರ, ಸಾಲದ ಮೊತ್ತದ ಸಂಪೂರ್ಣ ವಿವರವನ್ನು ಅರ್ಜಿಯ ಮೂಲಕ ಸಾಲದಾತರಿಗೆ ಸಲ್ಲಿಕೆ ಮಾಡಬೇಕಾಗುತ್ತದೆ.
ವೈಯಕ್ತಿಕ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿದ ನಂತರದಲ್ಲಿ ಅರ್ಜಿದಾರರು ನಿಮ್ಮ ಅರ್ಜಿಯನ್ನು ಪರಿಶೀಲನೆ ನಡೆಸುತ್ತಾರೆ. ನಿಮ್ಮ ಕ್ರೆಡಿಟ್ ಸ್ಕೋರ್, ಸಾಲದ ಆದಾಯದ ಅನುಪಾತ, ಉದ್ಯೋಗದ ಸಂಪೂರ್ಣ ಮಾಹಿತಿ, ನಿಮ್ಮ ಕ್ರಿಡಿಟ್ ಅರ್ಹತೆಯನ್ನು ಪರಿಶೀಲನೆ ಮಾಡಿ ನಿಮಗೆ ಸಾಲವನ್ನು ನೀಡುತ್ತಾರೆ. ಕೆಲವೊಮ್ಮೆ ಹೆಚ್ಚಿನ ದಾಖಲೆಯನ್ನು ಕೂಡ ಬ್ಯಾಂಕ್ ನಿಮ್ಮಿಂದ ನಿರೀಕ್ಷೆ ಮಾಡಬಹುದಾಗಿದೆ.
ಕೆಲವೊಮ್ಮೆ ನಿಮ್ಮ ಅರ್ಹತೆಯ ಮಾನದಂಡಕ್ಕೆ ಅನುಗುಣವಾಗಿ ಅತ್ಯಂತ ಕಡಿಮೆ ಬಡ್ಡಿಯ ಸಾಲದ ಆಫರ್ ಕೂಡ ನೀಡುವ ಸಾಧ್ಯತೆಯಿದೆ. ಸಾಲವನ್ನು ಪಡೆದುಕೊಳ್ಳುವ ವೇಳೆಯಲ್ಲಿ ನಿಮ್ಮ ಸಾಲದ ಬಡ್ಡಿದರ, ಸಾಲದ ಮೊತ್ತ, ಬಾಕಿ ಪಾವತಿಯ ಕಂತುಗಳ ವಿವರ, ಹೆಚ್ಚುವರಿ ಶುಲ್ಕ ಸೇರಿದಂತೆ ಎಲ್ಲಾ ವಿವರಗಳನ್ನು ಚೆನ್ನಾಗಿ ಓದಿಕೊಂಡ ನಂತರವೇ ಸಾಲದ ಒಪ್ಪಂದ ಪತ್ರಕ್ಕೆ ಸಹಿ ಹಾಕಬೇಕು.
ಇದನ್ನೂ ಓದಿ : ಪ್ರತೀ ಕುಟುಂಬಕ್ಕೆ ಸಿಗಲಿದೆ 5000 ರೂ. : ಕಾಂಗ್ರೆಸ್‌ನಿಂದ ಮತ್ತೊಂದು ಗ್ಯಾರಂಟಿ ಘೋಷಣೆ
ವೈಯಕ್ತಿಕ ಸಾಲದ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ ನಂತರದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಸಾಲದ ಮೊತ್ತವನ್ನು ಸಾಲದಾತರು ವರ್ಗಾವಣೆ ಮಾಡುತ್ತಾರೆ. ನೀವು ಸಾಲ ಪಡೆದ ಮರು ಕ್ಷಣದಿಂದಲೇ ಬಡ್ಡಿವಿಧಿಸಲು ಆರಂಭಿಸುತ್ತಾರೆ. ಕೆಲವೊಮ್ಮೆ ಬ್ಯಾಂಕುಗಳ ಬಡ್ಡಿಪಾವತಿಗೆ ಹೆಚ್ಚುವರಿ ಕಾಲಾವಕಾಶವನ್ನು ನೀಡುವ ಸಾಧ್ಯತೆಯೂ ಇದೆ. ವೈಯಕ್ತಿಕ ಸಾಲವನ್ನು ಮಾಸಿಕ ಕಂತುಗಳ ಮೂಲಕ ನೀವು ಮರುಪಾವತಿ ಮಾಡಬಹುದಾಗಿದೆ.
ಸಾಲವನ್ನು ನೀಡುವ ವೇಳೆಯಲ್ಲಿ ಸಾಲದಾತರು ಕಡ್ಡಾಯವಾಗಿ ಪ್ರೊಸೆಸಿಂಗ್ ಫೀಸ್ ಪಡೆದುಕೊಳ್ಳುತ್ತಾರೆ. ಆದರೆ ಈ ಮೊತ್ತ ಎಷ್ಟು ಅನ್ನೋ ಮಾಹಿತಿಯನ್ನು ನೀವು ಸರಿಯಾಗಿ ಪಡೆದುಕೊಂಡಿರಬೇಕು. ಬ್ಯಾಂಕ್ ಹಾಗೂ ಆನ್‌ಲೈನ್ ನಿಂದ ಪಡೆಯುವ ಸಾಲಕ್ಕೆ ವ್ಯತ್ಯಾಸ ಇರುತ್ತದೆ. ಆನ್‌ಲೈನ್ ನಿಂದ ಸಾಲ ಪಡೆಯುವ ಕಂಪೆನಿಗಳು ದುಬಾರಿ ಮೂಲ ಶುಲ್ಕವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ.

ವೈಯಕ್ತಿಕ ಸಾಲವನ್ನು ಪಡೆದುಕೊಂಡ ನಂತರದಲ್ಲಿ ನಿಮಗೆ ಸಾಲದ ಅಗತ್ಯ ಇಲ್ಲಾ ಅಂತ ಅನಿದ್ರೆ ನೀವು ಸಾಲದ ಸಂಪೂರ್ಣ ಮೊತ್ತವನ್ನು ಮರುಪಾವತಿ ಮಾಡಬಹುದಾಗಿದೆ. ಈ ಕುರಿತ ಮಾಹಿತಿಯನ್ನು ಸಾಲ ಪಡೆಯುವ ವೇಳೆಯಲ್ಲಿ ತಿಳಿದುಕೊಳ್ಳುವುದು ತೀರಾ ಮುಖ್ಯ. ಅವಧಿಗೂ ಮೊದಲೇ ಸಾಲ ಮರುಪಾವತಿ ಮಾಡಿದ್ರೆ ಕೆಲವೊಂದು ಕಂಪೆನಿಗಳು ನಿರ್ಧಿಷ್ಟ ಬಡ್ಡಿದರವನ್ನು ವಿಧಿಸುತ್ತವೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಅತ್ತೆಯ ಜೊತೆ ಸೊಸೆಗೂ ಸಿಗುತ್ತಾ ? ಗುಡ್‌ನ್ಯೂಸ್ ಕೊಟ್ಟ ಕರ್ನಾಟಕ ಸರಕಾರ
ಸಾಲ ಪಡೆದ ನಂತರದಲ್ಲಿ ಮಾಸಿಕವಾಗಿ ಸರಿಯಾದ ಸಮಯಕ್ಕೆ ಸಾಲವನ್ನು ಮರು ಪಾವತಿ ಮಾಡದೇ ಇದ್ರೆ ಅಂತಹ ಸಂದರ್ಭದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಲಿದೆ. ಅಷ್ಟೇ ಅಲ್ಲದೇ ವಿಳಂಭ ಶುಲ್ಕದ ಜೊತೆಗೆ ಸಿಬಿಎಲ್ ಸ್ಕೋರ್‌ನಲ್ಲಿ ಇಳಿಕೆಯಾಗಲಿದೆ. ನಿರಂತರವಾಗಿ ವಿಳಂಭ ಮಾಸಿಕ ಕಂತು ಪಾವತಿ ಮಾಡಿದ್ರೆ ಭವಿಷ್ಯದಲ್ಲಿ ನಿಮಗೆ ಸಾಲ ಸಿಗುವ ಸಾಧ್ಯತೆ ಕೂಡ ಕಡಿಮೆ.
ಕ್ರೆಡಿಟ್ ಸ್ಕೋರ್, ಸಾಲವನ್ನು ಪಡೆಯುವ ವೇಳೆಯಲ್ಲಿ ಬಹುಮುಖ್ಯವಾದ ಅಂಶವನ್ನು ಹೊಂದಿರುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಬ್ಯಾಂಕುಗಳು ಸಾಲ ಪಡೆಯಲು ಆಫರ್ ಮಾಡುತ್ತವೆ. ಸಾಲ ನೀಡುವ ಸಾಲದಾತರು ಕ್ರೆಡಿಟ್ ಸ್ಕೋರ್ ಲೆಕ್ಕಾಚಾರವನ್ನು ಹಾಕುತ್ತಾರೆ.
ಇದನ್ನೂ ಓದಿ : Aadhaar Card Free Update: ಆಧಾರ್ ಕಾರ್ಡ್ ಉಚಿತ ಅಪ್ಡೇಟ್ಸ್‌ಗೆ ಮಾರ್ಚ್ 14 ಕೊನೆಯ ದಿನ
ನೀವು ಎಷ್ಟು ಸಾಲವನ್ನು ಪಡೆಯಲು ಉದ್ದೇಶಿಸಿದ್ದೀರಿ ಅನ್ನೋ ಲೆಕ್ಕಾಚಾರವನ್ನು ನೀವು ಮೊದಲೇ ನಿರ್ಧಾರ ಮಾಡಿಕೊಳ್ಳಬೇಕು. ಸಾಲದ ಮೇಲೆ ವಿಧಿಸುವ ಬಡ್ಡಿದರಗಳ ಆಧಾರದ ಮೇಲೆ ನೀವು ಸಾಲವನ್ನು ಪಡೆದುಕೊಳ್ಳುವುದು ಉತ್ತಮ. ಇನ್ನು ನಿಮ್ಮ ಆದಾಯದ ಆಧಾರದ ಮೇಲೆ ನಿಮಗೆ ಸಾಲದಾತರು ಸಾಲದ ಆಫರ್ ನೀಡುತ್ತಾರೆ. ಅದ್ರಲ್ಲೂ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ, ಕೆಲವೇ ಗಂಟೆಗಳಲ್ಲಿ ನಿಮಗೆ ವೈಯಕ್ತಿಕ ಸಾಲ ದೊರೆಯುತ್ತದೆ.
ಪರ್ಸನಲ್ ಲೋನ್‌ಗಳು ಕೆಲವೊಮ್ಮೆ ನಿಮಗೆ ಸಮಸ್ಯೆಗಳನ್ನು ತಂದೊಡ್ಡಲಿದೆ ಅನ್ನೋದನ್ನು ನೀವು ಗಮನದಲ್ಲಿ ಇರಿಸಿಕೊಳ್ಳಬೇಕು. ಕ್ರೆಡಿಟ್ ಕಾರ್ಡ್ ಬಡ್ಡಿದರಗಳಿಗೆ ಹೋಲಿಕೆ ಮಾಡಿದ್ರೆ ಸಂಭಾವ್ಯವಾಗಿ ಕಡಿಮೆಯಿದ್ದರೂ, ಗೃಹ ಸಾಲಗಳಂತಹ ಪರ್ಯಾಯ ಸಾಲದ ಆಯ್ಕೆಗಳಿಗೆ ಹೋಲಿಸಿದರೆ ವೈಯಕ್ತಿಕ ಸಾಲಗಳು ತುಲನಾತ್ಮಕವಾಗಿ ಹೆಚ್ಚಿನ-ಬಡ್ಡಿ ದರಗಳನ್ನು ಹೊಂದಿರಬಹುದು.
personal loan Tips : You must know these points before applying for a personal loan