Personal Loan : ನೀವೇನಾದ್ರೂ ವೈಯಕ್ತಿಕ ಸಾಲ ಪಡೆಯಲು ಯೋಚನೆ ಮಾಡುತ್ತಿದ್ರೆ ಕೆಲವೊಂದು ವಿಚಾರಗಳನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಲೇ ಬೇಕು. ಮೊದಲನೆಯದಾಗಿ ನಿಮ್ಮ ಹಣಕಾಸು ಕ್ರಮಬದ್ದವಾಗಿದೆಯೇ ಅನ್ನೋದನ್ನು ಖಚಿತ ಪಡಿಸಿಕೊಳ್ಳಲೇ ಬೇಕು. ಅಷ್ಟೇ ಅಲ್ಲ ನಿಮ್ಮ ಹಣಕಾಸಿನ ಬಜೆಟ್ ಲೆಕ್ಕಾಚಾರ ಹಾಕಿಕೊಳ್ಳಿ. ಇನ್ನು ವೈಯಕ್ತಿಕ ಸಾಲ ಪಡೆಯುವ ಮುನ್ನ ಇಎಂಐ ಲೆಕ್ಕ ಹಾಕಬೇಕು.

ವೈಯಕ್ತಿಕ ಸಾಲವನ್ನು ಪಡೆಯುವ ವೇಳೆಯಲ್ಲಿ ಹಲವು ವಿಚಾರವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಯಾವುದೇ ಸಾಲ ಪಡೆಯುವ ಮೊದಲು ನಿಮ್ಮ ಮಾಸಿಕ ಹಣಕಾಸಿನ ಲೆಕ್ಕಾಚಾರಗಳನ್ನು ಗಮನದಲ್ಲಿ ಇರಬೇಕು. ಪರ್ಸನಲ್ ಲೋನ್ EMI ಮೇಲೆ ಮೂರು ವಿಚಾರಗಳು ಪರಿಣಾಮವನ್ನು ಬೀರುತ್ತದೆ. ಅಸ್ಥಿರ ಸಾಲದ ಮೊತ್ತ, ಸಾಲದ ಅವಧಿ ಮತ್ತು ಬಡ್ಡಿಯ ದರ. ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಸಾಲ ಮರುವಾವತಿಯನ್ನು ಲೆಕ್ಕಾಚಾರ ಹಾಕಬಹುದಾಗಿದೆ.
ನೀವು ಶೇಕಡಾ 10 ಬಡ್ಡಿಯಲ್ಲಿ ಮೂರು ವರ್ಷಗಳವರೆಗೆ ₹10 ಲಕ್ಷ ವೈಯಕ್ತಿಕ ಸಾಲವನ್ನು ಪಡೆಯಲು ಯೋಚಿಸಿದ್ದರೆ, ನೀವು ಸಾಲದ EMI ಅನ್ನು ಖಚಿತಪಡಿಸಿಕೊಳ್ಳಬಹುದು. ಒಂದೊಮ್ಮೆ ನಿಮಗೆ ಮಾಸಿಕ ಇಎಂಐ ರೂ.32,267 ಆಗಿದ್ದು, ನಿಮ್ಮ ಮಾಸಿಕ ಹಣಕಾಸಿನ ಲಭ್ಯತೆ ಗರಿಷ್ಠ 25,000 ರೂ. ಆಗಿದ್ದರೆ ನೀವು ಏನು ಮಾಡುತ್ತೀರಿ ? ಆಗ ನೀವು ಸಾಲದ ಅವಧಿಯನ್ನು ವಿಸ್ತರಿಸುವುದು ನಿಮ್ಮಲ್ಲಿರುವ ಏಕೈಕ ಆಯ್ಕೆಯಾಗಿದೆ.
ಇದನ್ನೂ ಓದಿ : BPL Card Holders Alert : ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್
ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು, ನೀವು ಲೋನ್ ಅವಧಿಯನ್ನು 36 ರಿಂದ 48 ತಿಂಗಳವರೆಗೆ ವಿಸ್ತರಿಸಿದರೆ, ಶೇ. 10 ರ ಬಡ್ಡಿದರದಲ್ಲಿ ನಿಮ್ಮ ಮಾಸಿಕ EMI ರೂ.32,267 ರಿಂದ ರೂ.25,362 ಕ್ಕೆ ಇಳಿಕೆಯಾಗಲಿದೆ. ಒಂದೊಮ್ಮೆ ನಿಮಗೆ ಸಾಲ ನೀಡುವ ಸಂಸ್ಥೆಗಳು ನಿಮಗೆ 11.25ರ ಬಡ್ಡಿದರದಲ್ಲಿ 10 ಲಕ್ಷ ರೂಪಾಯಿ ಹಣವನ್ನು ನೀಡಿ, ಆ ಹಣವನ್ನು ಮೂರು ವರ್ಷಗಳಲ್ಲಿ ಮರುಪಾವತಿ ಮಾಡುವುದಾದ್ರೆ ನೀವು ಮಾಸಿಕ 32,857 ರೂಪಾಯಿ ಮಾಸಿಕ ಕಂತಗಳನ್ನು ಪಾವತಿಸಬೇಕಾಗಿದೆ.
ಇದನ್ನೂ ಓದಿ : 1.78 ಲಕ್ಷ ಮಹಿಳೆಯರಿಗೆ ಇನ್ಮುಂದೆ ಸಿಗಲ್ಲ ಗೃಹಲಕ್ಷ್ಮೀ ಹಣ : ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ?
ಇನ್ನು ಸಾಲದಾತರು ನಿಮಗೆ 10.75 ಶೇಕಡಾ ಬಡ್ಡಿಯ ದರದಲ್ಲಿ ಸಾಲ ನೀಡುತ್ತಿದ್ದು, 10 ಲಕ್ಷ ಸಾಲ ಪಡೆದುಕೊಂಡದ್ರೆ ಮೂರು ವರ್ಷಗಳ ಮರುಪಾವತಿಯ ಅವಧಿಗೆ ನೀವು ಮಾಸಿಕ ರೂಪಾಯಿ 32,620 ಇಎಂಐ ಪಾವತಿ ಮಾಡಬೇಕಾಗಿದೆ. ಸಾಲವನ್ನು ಪಡೆಯುವ ವೇಳೆಯಲ್ಲಿ ಪ್ರತಿಯೊಬ್ಬರು ಕೂಡ ಸಾಲ ಮರುಪಾವತಿ ಅವಧಿ, ಬಡ್ಡಿದರ, ಮರು ಪಾವತಿಯ ಮಾಸಿಕ ಕಂತುಗಳ ಕುರಿತು ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಲೇ ಬೇಕು.

ಇದನ್ನೂ ಓದಿ : ಉಳಿತಾಯ ಖಾತೆಯ ಬಡ್ಡಿ ದರ ಇಳಿಕೆ : ಅಕ್ಟೋಬರ್ 1ರಿಂದ ಹೊಸ ರೂಲ್ಸ್ ಜಾರಿ
ನೀವು ಈಗಾಗಲೇ ಸಾಲವನ್ನು ಪಡೆದುಕೊಂಡಿದ್ದು ಮಾಸಿಕ ಕಂತುಗಳು ಅಧಿಕವಾಗಿದ್ದರೆ ನೀವು ಇಎಂಐ ಮೊತ್ತವನ್ನು ಕಡಿಮೆ ಮಾಡಿಕೊಳ್ಳ ಬಹುದು. ಆದರೆ ಸಾಲದಾತರು ನಿಮಗೆ ಗರಿಷ್ಠ ಮೂರು ಸಾವಿರ ರೂಪಾಯಿಯ ವರೆಗೆ ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತಾರೆ. ಆದರೆ ಇಎಂಐ ಕಂತುಗಳ ಅವಧಿಯನ್ನು ಹೆಚ್ಚಳ ಮಾಡಿದ್ರೆ ವೈಯಕ್ತಿಕ ಸಾಲ ಪಡೆದವರು ಹೆಚ್ಚುವರಿ ಹಣವನ್ನು ಸಾಲದ ಮರುಪಾವತಿಯ ವೇಳೆಯಲ್ಲಿ ನೀಡಬೇಕಾಗುತ್ತದೆ.
personal loan Why should EMI be calculated in EMI Calculator before taking a loan?