ನವದೆಹಲಿ : ದೇಶದಲ್ಲಿ ತೈಲ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಅದ್ರಲ್ಲೂ ಜುಲೈನಲ್ಲಿ ಇಂಧನದ ಬೆಲೆ 7 ನೇ ಬಾರಿಗೆ ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆ 35 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ 26 ಪೈಸೆ ಏರಿಕೆ ಕಂಡಿದೆ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಗೊತ್ತಾ ತೈಲ ಬೆಲೆ.

ಕಳೆದ ಕೆಲ ತಿಂಗಳಿನಿಂದಲೂ ಪೆಟ್ರೋಲ್, ಡಿಸೇಲ್ ದರದಲ್ಲಿ ಏರಿಕೆಯಾಗುತ್ತಿದೆ. ಈಗಾಗಲೇ ನೂರರ ಗಡಿದಾಟಿರುವ ತೈಲ ಬೆಲೆ ವಾಹನ ಸವಾರರ ಜೇಬಿಗೆ ಕತ್ತರಿ ಹಾಕುತ್ತಿದೆ. ಸದ್ಯದ ಸ್ಥಿತಿಯನ್ನು ನೋಡಿದ್ರೆ ಸದ್ಯಕ್ಕೆ ಇಂಧನ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಭೋಪಾಲ್ನಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 109.24 ರೂ.ಗೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಬೆಲೆ 98.67 ರೂ. ಮೇ ತಿಂಗಳಲ್ಲಿ ಭೋಪಾಲ್ ಪೆಟ್ರೋಲ್ ಬೆಲೆಯಲ್ಲಿ 100 ರೂ.ಗಳನ್ನು ದಾಟಿದ ಭಾರತದ ಮೊದಲ ನಗರವಾಗಿದ್ರೆ, ನಂತರದ ಸ್ಥಾನದಲ್ಲಿ ರ ಜೈಪುರ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಇದೆ.

ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಪೆಟ್ರೋಲ್ನ ಚಿಲ್ಲರೆ ಮಾರಾಟದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತಿದೆ. ತೈಲ ಬೆಲೆಯ 60% ಮತ್ತು ಡೀಸೆಲ್ನ 54% ಕ್ಕಿಂತ ಹೆಚ್ಚ ತೆರಿಗೆಯನ್ನು ವಿಧಿಸಲಾಗುತ್ತಿದೆ. ಕೇಂದ್ರ ಸರಕಾರವು ಪೆಟ್ರೋಲ್ಗೆ ಪ್ರತಿ ಲೀಟರ್ ಅಬಕಾರಿ ಸುಂಕಕ್ಕೆ 32.90 ರೂ. ಮತ್ತು ಡೀಸೆಲ್ಗೆ 31.80 ರೂ. ವ್ಯಾಟ್ ಅಥವಾ ಸರಕು ಸಾಗಣೆ ಶುಲ್ಕದಂತಹ ಸ್ಥಳೀಯ ತೆರಿಗೆಗಳ ಕಾರಣದಿಂದಾಗಿ ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ.

ಭಾರತದಲ್ಲಿ ರಾಜಸ್ಥಾನದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರದ ಮೇಲೆ ಅತೀ ಹೆಚ್ಚು ವ್ಯಾಟ್ ವಿಧಿಸಲಾಗುತ್ತಿದೆ. ನಂತರದಲ್ಲಿ ರಾಜಸ್ಥಾನ ಹೊರತು ಪಡಿಸಿ ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿಧಿಸಲಾಗುತ್ತಿದೆ.