ನವದೆಹಲಿ : ದಿನೇ ದಿನೇ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ. ದೇಶದಲ್ಲಿಂದು ಬೆಲೆ ಬೆಲೆ ಐತಿಹಾಸಿ ದಾಖಲೆ ಬರೆದಿದೆ. ಪೆಟ್ರೋಲ್ ಒಂದು ಲೀಟರ್ ಗೆ 105.33 ರೂಪಾಯಿಗೆ ಏರಿಕೆ ಕಂಡ್ರೆ, ಡಿಸೇಲ್ 96.65 ರೂಪಾಯಿಗೆ ಏರಿಕೆಯಾಗಿದೆ.
ದೇಶದ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಲಡಾಖ್ ಸೇರಿದಂತೆ ಕನಿಷ್ಠ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 100 ರೂಪಾಯಿಗೂ ಅಧಿಕ ಬೆಲೆಯಿದೆ.
ಮುಂಬಯಿಯಲ್ಲಿ ಪೆಟ್ರೋಲ್ ಐತಿಹಾಸಿಕ ಗರಿಷ್ಠ 103.36 ರೂ.ಗೆ ಮಾರಾಟವಾಗಿದ್ದರೆ, ಡೀಸೆಲ್ ಬೆಲೆ 95.44 ರೂ. ಇದ್ದರೆ, ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಗೆ 97.22 ಮತ್ತು ಡೀಸೆಲ್ 87.97 ರೂ., ಚೆನ್ನೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 98.40 ರೂ ಮತ್ತು ಡೀಸೆಲ್ 92.58 ರೂ. ಇದ್ದರೆ, ಕೋಲ್ಕತ್ತಾದಲ್ಲಿ ಪೆಟ್ರೋಲ್ ಅನ್ನು ಪ್ರತಿ ಲೀಟರ್ ಗೆ 97.12 ರೂ ಮತ್ತು ಡೀಸೆಲ್ 90.82 ರೂಗಳಿಗೆ ಮಾರಾಟವಾಗಿದೆ. ಇನ್ನು ದೇಶದಲ್ಲಿಯೇ ಭೋಪಾಲ್ ನಲ್ಲಿ ಅತೀ ಹೆಚ್ಚು ಬೆಲೆಗೆ ಪೆಟ್ರೋಲ್ ಮಾರಾಟವಾಗಿದ್ದು, ಪೆಟ್ರೋಲ್ ಲೀಟರ್ ಗೆ 105.33 ರೂ. ಹಾಗೂ ಡಿಸೇಲ್ ಗೆ 96.65 ರೂಪಾಯಿಗೆ ಏರಿಕೆ ಕಂಡಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ವಿದೇಶಿ ವಿನಿಮಯದ ಆಧಾರದ ಮೇಲೆ ತೈಲ ಕಂಪೆನಿಗಳು ತೈಲ ಬೆಲೆಯನ್ನು ಪರಿಷ್ಕರಣೆ ಮಾಡುತ್ತಿವೆ. ಜೊತೆಗೆ ಸ್ಥಳೀಯ ತೆರಿಗೆಗಳಿಂದಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ದುಪ್ಪಟ್ಟು ತೆರಿಗೆಯನ್ನು ವಿಧಿಸುತ್ತಿವೆ. ಪ್ರತೀ ಲೀಟರ್ ಪೆಟ್ರೋಲ್ ಮೇಲೆ ಶೇ.60 ರಷ್ಟು ಹಾಗೂ ಡಿಸೇಲ್ ಬೆಲೆಯ ಮೇಲೆ ಶೇ.54 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿದೆ. ತೈಲ ಮಾರುಕಟ್ಟೆ ಕಂಪೆನಿಗಳು ದಿನೇ ದಿನೇ ದರ ಏರಿಕೆಯನ್ನು ಮಾಡುತ್ತಲೇ ಇವೆ. ಅದ್ರಲ್ಲೂ ದೇಶದಲ್ಲಿಯೇ ರಾಜಸ್ಥಾನದಲ್ಲಿ ಅತೀ ಹೆಚ್ಚು ವ್ಯಾಟ್ ವಿಧಿಸಲಾಗುತ್ತಿದ್ರೆ, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಿವೆ.