ಭಾನುವಾರ, ಏಪ್ರಿಲ್ 27, 2025
Homebusinessಗ್ರಾಮ ಸುರಕ್ಷಾ ಯೋಜನೆ : ತಿಂಗಳಿಗೆ 1500 ರೂಪಾಯಿ ಪಾವತಿಸಿ, 34 ಲಕ್ಷ ರೂ. ಪಡೆಯಿರಿ

ಗ್ರಾಮ ಸುರಕ್ಷಾ ಯೋಜನೆ : ತಿಂಗಳಿಗೆ 1500 ರೂಪಾಯಿ ಪಾವತಿಸಿ, 34 ಲಕ್ಷ ರೂ. ಪಡೆಯಿರಿ

Gram Suraksha Yojana : 55 ವರ್ಷಗಳ ಅವಧಿಗೆ ಪಾಲಿಸಿಯನ್ನು ಪಡೆದುಕೊಂಡ್ರೆ ನಿಮಗೆ 31.60 ಲಕ್ಷ ರೂಪಾಯಿ, 58 ವರ್ಷದ ಅವಧಿಗೆ 33.40 ಲಕ್ಷ ರೂಪಾಯಿ ಹಾಗೂ 60 ವರ್ಷ ಅವಧಿಗೆ ಪಾಲಿಸಿಯನ್ನು ಪಡೆದುಕೊಂಡಿದ್ರೆ ನಿಮಗೆ 34.60 ಲಕ್ಷ ರೂಪಾಯಿಯನ್ನು ಪಡೆಯಬಹುದಾಗಿದೆ.

- Advertisement -

Gram Suraksha Yojana : ಭಾರತೀಯ ಅಂಚೆ ಇಲಾಖೆ ಗ್ರಾಹಕರ ಅನುಕೂಲಕ್ಕಾಗಿ ಹಲವು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಅದ್ರಲ್ಲೂ ಈ ಯೋಜನೆಯಡಿಯಲ್ಲಿ ಕನಿಷ್ಠ ಮೊತ್ತವನ್ನು ಪಾವತಿ ಮಾಡಿದ್ರೆ, ಗರಿಷ್ಠ ಮೊತ್ತವನ್ನು ವಾಪಾಸ್‌ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಒಂದೊಮ್ಮೆ ನೀವು ತಿಂಗಳಿಗೆ 1,500 ರೂಪಾಯಿ ಹೂಡಿಕೆ ಮಾಡಿದ್ರೆ, 34 ಲಕ್ಷ ರೂಪಾಯಿಯ ವರೆಗೂ ರಿಟರ್ಸ್‌ ಪಡೆಯಬಹುದಾಗಿದೆ. ಹಾಗಾದ್ರೆ ಈ ಯೋಜನೆ ಯಾವುದು, ಏನೆಲ್ಲಾ ಲಾಭವಿದೆ ಅನ್ನೋದನ್ನು ನೋಡೋಣಾ ಬನ್ನಿ.

Indian Postal Department New Scheme Gram Suraksha Yojana Pay Rs 1500 per month, Rs 34 lakh get in Kannada News
Image Credit to Original Source

ಗ್ರಾಮ ಸುರಕ್ಷಾ ಯೋಜನೆಯನ್ನು ಭಾರತೀಯ ಅಂಚೆ ಇಲಾಖೆ ಪರಿಚಯಿಸಿದೆ. ಈ ಯೋಜನೆಯ ಅಡಿಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಕಂತುಗಳನ್ನು ಪಾವತಿ ಮಾಡಬಹುದಾಗಿದೆ. ವಾರ್ಷಿಕವಾಗಿ ಗರಿಷ್ಠ 10 ಸಾವಿರ ರೂಪಾಯಿಯಿಂದ 10 ಲಕ್ಷ ರೂಪಾಯಿಯ ವರೆಗೂ ಹೂಡಿಕೆ ಮಾಡಬಹುದಾಗಿದೆ. ವಯಸ್ಸಿನ ಆಧಾರದ ಮೇಲೆ ಮಾಸಿಕ ಕಂತುಗಳ ಮೊತ್ತದಲ್ಲಿ ವ್ಯತ್ಯಾಸವಾಗಲಿದೆ.

ನಿಮ್ಮ ವಯಸ್ಸು 19 ವರ್ಷ ಎಂದು ತಿಳಿದುಕೊಳ್ಳಿ. ನೀವು ಪ್ರತೀ ತಿಂಗಳು 10 ಲಕ್ಷ ರೂಪಾಯಿ ಹಣವನನ್ನು ಹೂಡಿಕೆ ಮಾಡಲು ಬಯಸಿದ್ರೆ 55 ವರ್ಷಗಳ ಅವಧಿಗೆ ಮಾಸಿಕ 1,515 ರೂಪಾಯಿ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಇನ್ನು 58 ವರ್ಷಗಳ ಅವಧಿಗೆ ಮಾಡಿದ್ರೆ 1,463 ರೂಪಾಯಿ ಪ್ರೀಮಿಯಂ ಹಾಗೂ 60 ವರ್ಷಗಳಿಗೆ ಹೂಡಿಕೆ ಮಾಡಿದ್ರೆ, 1,411 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 4000 ರೂ. ಯಾವಾಗ ಸಿಗುತ್ತೆ ? ಇಲ್ಲಿದೆ ಬಿಗ್‌ ಅಪ್ಟೇಟ್ಸ್‌

55 ವರ್ಷಗಳ ಅವಧಿಗೆ ಪಾಲಿಸಿಯನ್ನು ಪಡೆದುಕೊಂಡ್ರೆ ನಿಮಗೆ 31.60 ಲಕ್ಷ ರೂಪಾಯಿ, 58 ವರ್ಷದ ಅವಧಿಗೆ 33.40 ಲಕ್ಷ ರೂಪಾಯಿ ಹಾಗೂ 60 ವರ್ಷ ಅವಧಿಗೆ ಪಾಲಿಸಿಯನ್ನು ಪಡೆದುಕೊಂಡಿದ್ರೆ ನಿಮಗೆ 34.60 ಲಕ್ಷ ರೂಪಾಯಿಯನ್ನು ಪಡೆಯಬಹುದಾಗಿದೆ. ಗ್ರಾಮೀಣ ಜನರಿಗಾಗಿ ಅಂಚೆ ಇಲಾಖೆ ಜಾರಿಗೆ ತಂದಿರುವ ಈ ಯೋಜನೆಯಲ್ಲಿ ಸುಲಭವಾಗಿ ಎಲ್ಲರೂ ಕೂಡ ಹೂಡಿಕೆ ಮಾಡಬಹುದಾಗಿದೆ.

Indian Postal Department New Scheme Gram Suraksha Yojana Pay Rs 1500 per month, Rs 34 lakh get in Kannada News
Image Credit to Original Source

ಇದನ್ನೂ ಓದಿ : Ration Card e-KYC : ರೇಷನ್‌ ಕಾರ್ಡ್‌ಗೆ ಇಕೆವೈಸಿ ಕಡ್ಡಾಯ, ತಪ್ಪಿದ್ರೆ ರದ್ದಾಗುತ್ತೆ ಕಾರ್ಡ್‌

ಭಾರತೀಯ ಅಂಚೆ ಇಲಾಖೆಯಲ್ಲಿ ಕೇವಲ ಗ್ರಾಮ ಸುರಕ್ಷಾ ಯೋಜನೆ ಮಾತ್ರವಲ್ಲದೇ ಇನ್ನಷ್ಟು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಹಕರಿಗಾಗಿ ಅಂಚೆ ಇಲಾಖೆ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಮೀಪದಲ್ಲಿರುವ ಅಂಚೆ ಇಲಾಖೆಗೆ ಭೇಟಿ ನೀಡಿ ಅಥವಾ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್‌ ಆಗಿ.

ಇದನ್ನೂ ಓದಿ : ಮಹಿಳೆಯರಿಗೆ ಸಿಗಲಿದೆ 5000 ರೂ. ; ಹೊಸ ಯೋಜನೆ ಘೋಷಿಸಿದ ಪ್ರಧಾನ ನರೇಂದ್ರ ಮೋದಿ

Indian Postal Department New Scheme Gram Suraksha Yojana Pay Rs 1500 per month, Rs 34 lakh get in Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular