Pradhan Mantri Matru Vandana Yojana (PMMVY) : ಗೃಹಲಕ್ಷ್ಮೀ (Gruha Lakshmi) , ಕೃಷಿ ಸಮ್ಮಾನ್ ಯೋಜನೆ ( Kissan Samman Yojana) ಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಮಹಿಳೆಯರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಸರಕಾರ ಮಹಿಳೆಯರಿಗೆ 5000 ರೂ.ನೀಡುವ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಈ ಹೊಸ ಯೋಜನೆಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೇಂದ್ರ ಸರ್ಕಾರ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದ್ರಲ್ಲೂ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುತ್ತಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (Pradhan Mantri Matru Vandana Yojana (PMMVY) ಯು ಒಂದಾಗಿದೆ. ಈ ಯೋಜನೆಯ ಮೂಲಕ ಮಹಿಳೆಯರು ನೇರವಾಗಿ ಆರ್ಥಿಕ ಪ್ರಯೋಜವನ್ನು ಪಡೆದುಕೊಳ್ಳಬಹುದಾಗಿದೆ.
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿಯಲ್ಲಿ ಮಹಿಳೆಯರಿಗೆ 5,000 ರೂ. ದೊರೆಯಲಿದೆ. ಮಾತೃ ವಂದನಾ ಯೋಜನೆಯಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ 5,000 ರೂಪಾಯಿ ಆರ್ಥಿಕ ನೆರವು ದೊರೆಯುತ್ತಿದೆ. ಕೇಂದ್ರ ಸರಕಾರ ಈ ಯೋಜನೆಯನ್ನು ಕೇಂದ್ರ ಸರಕಾರವು 2017 ರಲ್ಲಿ ಆರಂಭ ಮಾಡಿತ್ತು. ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರಿಗಾಗಿ ಈ ಮೊತ್ತವನ್ನು ಸರಕಾರ ಮೂರು ಕಂತುಗಳಲ್ಲಿ ಪಾವತಿ ಮಾಡಲಿದೆ.
ಇದನ್ನೂ ಓದಿ : 40 ವರ್ಷ ಮೇಲ್ಪಟ್ಟವರಿಗೆ ಪ್ರತೀ ತಿಂಗಳು ಸಿಗಲಿದೆ 12,000 ರೂಪಾಯಿ !
ಮಾತೃ ವಂದನಾ ಯೋಜನೆಯಡಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲನೆ ನಡೆಸಿದ ನಂತರದಲ್ಲಿ ಗರ್ಭಿಣಿ ಮಹಿಳೆಯರ ಖಾತೆಗೆ ಮೊದಲ ಕಂತಿನಲ್ಲಿ 1,000 ರೂಪಾಯಿಯನ್ನು ವರ್ಗಾವಣೆ ಮಾಡಲಾಗುತ್ತದೆ. ನಂತರ 6 ತಿಂಗಳ ಗರ್ಭಿಣಿ ಆಗಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಎರಡನೇ ಕಂತಿನಲ್ಲಿ ರೂ.2,000 ವರ್ಗಾವಣೆ ಮಾಡುತ್ತಾರೆ. ಮಗು ಜನನ ಆದ ನಂತರದಲ್ಲಿ ಮೂರನೇ ಕಂತಿನಲ್ಲಿ ಮತ್ತೆ ರೂ.2,000 ರೂಪಾಯಿಯನ್ನು ವರ್ಗಾವಣೆ ಮಾಡಲಾಗುತ್ತದೆ.

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು 19 ವರ್ಷ ಮೇಲ್ಪಟ್ಟವರಾಗಿರಬೇಕು. ಇಲಾಖೆಯ ಅಧಿಕೃತ ವೆಬ್‌ಸೈಟ್ https://pmmvy.wcd.gov.in/ಗೆ ಭೇಟಿ ನೀಡಿ ನಂತರದಲ್ಲಿ ನಾಗರೀಕ ಲಾಗಿನ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ಲಾಗಿನ್, ಪಾಸ್‌ವರ್ಡ್ ರಚಿಸಿಕೊಂಡು, ನಂತರದಲ್ಲಿ ಡೇಟಾ ಎಂಟ್ರಿ ಕ್ಲಿಕ್ ಮಾಡಬೇಕು. ಅಂತಿಮವಾಗಿ ಫಲಾನುಭವಿಗಳ ನೋಂದಣಿ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಭರ್ಜರಿ ಗುಡ್‌ನ್ಯೂಸ್: ಮತ್ತೆ 12 ಜಿಲ್ಲೆಗಳಿಗೆ ಬಿಡುಗಡೆ ಆಯ್ತು ಹಣ
ಅರ್ಜಿಯಲ್ಲಿ ನೀವು ಮೊದಲ ಮಗುವಿಗೆ ಜನನ ನೀಡುತ್ತಿದ್ದೀರೋ ? ಇಲ್ಲಾ ಎರಡನೇ ಮಗುವಿಗೆ ಜನ್ಮ ನೀಡುತ್ತಿದ್ದೀರೋ ಅನ್ನೂದನ್ನು ಸ್ಪಷ್ಟವಾಗಿ ನಮೂದಿಸಬೇಕು. ಆಧಾರ್ ಕಾರ್ಡ್ ಸಂಖ್ಯೆ, ಹುಟ್ಟಿದ ದಿನಾಂಕ, ವಯಸ್ಸು ಮತ್ತು ವರ್ಗವನ್ನು ಭರ್ತಿ ಮಾಡಬೇಕು. ಇಷ್ಟೇ ಅಲ್ಲದೇ ವಿಳಾಸ ಪುರಾವೆ, ಐಡಿ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನೀವು ಅರ್ಜಿಯಲ್ಲಿ ಸಲ್ಲಿಕೆ ಮಾಡಬೇಕು.

ಮಾತೃ ವಂದನಾ ಯೋಜನೆಯ ಅಡಿಯಲ್ಲಿ ನೀವು ಸಲ್ಲಿಕೆ ಮಾಡಿರುವ ಎಲ್ಲಾ ಮಾಹಿತಿಗಳು ಸರಿಯಾಗಿದೆಯೇ ಅನ್ನೋದನ್ನು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ. ನಿಮ್ಮ ಅರ್ಜಿ ಸರಿಯಾಗಿ ಇದ್ದರೆ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಒಂದೊಮ್ಮೆ ನೀವು ಗ್ರಾಮೀಣ ಪ್ರದೇಶದವರು ಆಗಿದ್ದರೆ, ನಿಮ್ಮ ಸಮೀಪದ ಅಂಗನವಾಡಿ ಕೇಂದ್ರದ ಮೇಲ್ವಿಚಾರಕರಲ್ಲಿ ಈ ಕುರಿತು ಮಾಹಿತಿ ಪಡೆಯಬಹುದಾಗಿದೆ.
ಇದನ್ನೂ ಓದಿ : PM Awas Yojana : ಹೊಸ ಮನೆ ಕಟ್ಟಿಸುವವರಿಗೆ ಕೇಂದ್ರ ಸರಕಾರದಿಂದ ಸಿಗಲಿದೆ 30 ಲಕ್ಷ ರೂಪಾಯಿ
Pradhan Mantri Matru Vandana Yojana (PMMVY) Updates Women will get Rs 5000