ಪಡಿತರ ಕಾರ್ಡ್ (Ration Card) ಹೊಂದಿರುವ ಗ್ರಾಹರಿಗೆ ರಾಜ್ಯ ಸರಕಾರ ಮಹತ್ವದ ಆದೇಶ ಹೊರಡಿಸಿದೆ. ರೇಷನ್ ಕಾರ್ಡ್ ಹೊಂದಿದ್ದು, ಇಕೆವೈಸಿ (eKYC) ಮಾಡಿಸದೇ ಇರುವ ಗ್ರಾಹಕರು ಕಡ್ಡಾಯವಾಗ ಕೂಡಲೇ ಮಾಡಿಸುವಂತೆ ಆದೇಶಿಸಿದೆ. ಪಡಿತರ ಕಾರ್ಡ್‌ಗೆ ಇಕೆವೈಸಿ (Ration Card e-KYC) ಮಾಡಿಸದೇ ಇರುವ ಗ್ರಾಹಕರಿಗೆ ಅಗಸ್ಟ್ ತಿಂಗಳ ಪಡಿತರ ಸಾಮಗ್ರಿಗಳನ್ನು ನೀಡಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ಪಡಿತರ ಕಾರ್ಡ್‌ದಾರರು ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ನ್ಯಾಯ ಬೆಲೆ ಅಂಗಡಿಗೆ ತೆರಳಿ ಇಕೆವೈಸಿ ಮಾಡಿಸಬೇಕಾಗದೆ. ಈಗಾಗಲೇ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವಂತೆ ಸರಕಾರ ಸೂಚಿಸಿತ್ತು. ಬಹುತೇಕ ಕಾರ್ಡ್‌ದಾರರು ಅಧಾರ್ ಕಾರ್ಡ್ ಜೊತೆಗೆ ಇಕೆವೈಸಿ ಮಾಡಿಸಿಕೊಂಡಿದ್ದರು. ಆದರೆ ಪಡಿತರ ಚೀಟಿಯಲ್ಲಿ ಇರುವ ಎಲ್ಲರೂ ಕೂಡ ಇಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 4000 ರೂ. ಯಾವಾಗ ಸಿಗುತ್ತೆ ? ಇಲ್ಲಿದೆ ಬಿಗ್ ಅಪ್ಟೇಟ್ಸ್
ಅಂತ್ಯೋದಯ, ಬಿಪಿಎಲ್, ಎಪಿಎಲ್ ಕಾರ್ಡ್‌ದಾರರು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯಲು ಇಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಆಹಾರ ಇಲಾಖೆಯ ಉಪನಿರ್ದೇಶಕರು ಸೂಚಿಸಿದ್ದಾರೆ. ಇಕೆವೈಸಿ ಮಾಡಿಸದೇ ಇರುವ ಗ್ರಾಹಕರಿಗೆ ಆಹಾರ ಧಾನ್ಯ ಸ್ಥಗಿತವಾಗಲಿದ್ದು ನಗದು ವರ್ಗಾವಣೆಯನ್ನು ತಾತ್ಕಾಲಕ ಸ್ಥಗಿತವಾಗಲಿದೆ.

ರೇಷನ್ ಕಾರ್ಡ್ ಇಕೆವೈಸಿ ಮಾಡಿಸುವುದು ಹೇಗೆ ? (How to make eKYC for ration card ?)
ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಅನ್ನು ಆನ್‌ಲೈನ್ ಮೂಲಕವೇ ಲಿಂಕ್ ಮಾಡಿಸಬಹುದಾಗಿದೆ. ನಿಮ್ಮ ಕಾರ್ಡ್‌ಗೆ ಈಗಾಗಲೇ ಇಕೆವೈಸಿ ಮಾಡಿಸಲಾಗಿದೆಯೇ ಅನ್ನೋದನ್ನು ಪರಿಶೀಲನೆ ನಡೆಸಲು ಈ ಕೆಳಗಿನ ಹಂತಗಳನ್ನು ಪರಿಶೀಲಿಸಿ.
ಇದನ್ನೂ ಓದಿ : ಮಹಿಳೆಯರಿಗೆ ಸಿಗಲಿದೆ 5000 ರೂ. ; ಹೊಸ ಯೋಜನೆ ಘೋಷಿಸಿದ ಪ್ರಧಾನ ನರೇಂದ್ರ ಮೋದಿ
- ಆಹಾರ, ನಾಗರಿಕ ಸರಬರಾಜು ಇಲಾಖೆಯ ವೆಬ್‌ಸೈಟ್‌ಗೆ Click ಮಾಡಿ
- ಪಡಿತರ ಚೀಟಿ ವಿಭಾಗದ ಮೇಲೆ ಕ್ಲಿಕ್ ಮಾಡಿ.ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
- ನಂತರ ವಿತ್ ಓಟಿಪಿ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಿದ ನಂತರದಲ್ಲಿ ರೇಷನ್ ಕಾರ್ಡ್‌ನ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.
ಆಧಾರ್ ಕಾರ್ಡ್- ರೇಷನ್ ಕಾರ್ಡ್ ಲಿಂಕ್ (Aadhar Card- Ration Card Link) ಮಾಡುವುದು ಹೇಗೆ ?
- ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ಇ-ಸೇವೆಗಳು ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಇ-ಪಡಿತರ ಚೀಟಿಯಲ್ಲಿ ಯುಐಡಿ ಲಿಂಕ್ ಆಯ್ಕೆ ಮಾಡಿ
- ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ, ಯುಐಡಿ ಲಿಂಕಿಂಗ್ ಫಾರ್ ಆರ್‌ಸಿ ಮೆಂಬರ್ಸ್ ಕ್ಲಿಕ್ ಮಾಡಿ
- ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
- ನೋಂದಾಯಿತ ಮೊಬೈಲ್ ನಂಬರಿಗೆ ಬರುವ ಒಟಿಪಿಯನ್ನು ನಮೂದಿಸಿ
- ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
- ನಂತರದಲ್ಲಿ ನಿಮಗೆ ಇಕೆವೈಸಿ ಆಗಿರುವ ಲಿಂಕ್ ನಿಮಗೆ ದೊರೆಯಲಿದೆ
Ration Card e-KYC is mandatory, if not the Ration and amount will Not Credit Account