Ration Card ekyc : ಭಾರತ ಸರಕಾರ ಹಾಗೂ ರಾಜ್ಯ ಸರಕಾರ ಪಡಿತರ ಸಾಮಗ್ರಿಗಳನ್ನು ವಿತರಿಸಲು ರೇಷನ್ ಕಾರ್ಡ್ (Ration Card) ವ್ಯವಸ್ಥೆ ಜಾರಿಯಲ್ಲಿದೆ. ಎಪಿಎಲ್ (APL), ಬಿಪಿಎಲ್ (BPL) ಹಾಗೂ ಅಂತ್ಯೋದಯ ಕಾರ್ಡು (Anthyodhya Cards) ಗಳ ಮೂಲಕ ಸರಕಾರಿ ಸವಲತ್ತುಗಳನ್ನು ನೀಡುತ್ತಿದೆ. ಆದ್ರೆ ಪಡಿತರ ಕಾರ್ಡುದಾರರು ಜೂನ್ 30ರ ಒಳಗಾಗಿ ಈ ಕೆಲಸ ಮಾಡದೇ ಇದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದು ಖಚಿತ.
ನಕಲಿ ಬಿಪಿಎಲ್ ಕಾರ್ಡು (Fake BPL Card) ದಾರರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗಾಗಲೇ ಕರ್ನಾಟಕ ಸರಕಾರ ಲಕ್ಷಾಂತರ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಿದೆ. ಇದೇ ಕಾರಣದಿಂದಲೇ ಪಡಿತರ ಕಾರ್ಡುದಾರರು ಇಕೆವೈಸಿ ಕಾರ್ಯವನ್ನು ನಡೆಸುವಂತೆ ಸರಕಾರ ಸೂಚನೆಯನ್ನು ನೀಡಿತ್ತು. ಕಳೆದ ಎಪ್ರಿಲ್ 30 ಇಕೆವೈಸಿ ಮಾಡಿಸಲು ಕೊನೆಯ ದಿನವಾಗಿತ್ತು. ಆದ್ರೀಗ ದಿನಾಂಕವನ್ನು ಜೂನ್ 30ರ ವರೆಗೆ ವಿಸ್ತರಣೆ ಮಾಡಿದೆ.
ಜೂನ್ 30ರ ಒಳಗಾಗಿ ಪಡಿತರ ಕಾರ್ಡುದಾರರು ತಪ್ಪದೇ ತಮ್ಮ ಪಡಿತರ ಚೀಟಿಯನ್ನು ಆಧಾರ್ ಜೊತೆಗೆ ಲಿಂಕ್ ಮಾಡಬೇಕು. ಈಗಾಗಲೇ ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಆಗಿರುವ ಕಾರಣಕ್ಕೆ ಇದೀಗ ರೇಷನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಇಕೆವೈಸಿ ಮಾಡಿಸಿದ್ರೆ ನಕಲಿ ಬಿಪಿಎಲ್ ಕಾರ್ಡುದಾರರ ಪತ್ತೆಗೆ ಸಹಕಾರಿಯಾಗಲಿದೆ. ಇದೇ ಕಾರಣದಿಂದಲೇ ಕಳೆದೊಂದು ವರ್ಷದ ಹಿಂದೆಯೇ ಸರಕಾರಗಳು ಇಕೆವೈಸಿ ಮಾಡಿಸುವಂತೆ ಪಡಿತರ ಕಾರ್ಡ್ ದಾರರಿಗೆ ಸೂಚನೆ ನೀಡಿದ್ದವು.
Also Read : Lakhpati Didi Yojana : ಬಡ್ಡಿಯಿಲ್ಲದೇ ಮಹಿಳೆಯರಿಗೆ 5 ಲಕ್ಷ ರೂ ಸಾಲ : ಕೇಂದ್ರ ಸರಕಾರದ ಹೊಸ ಯೋಜನೆ ಜಾರಿ
Ration Card ekyc : ಇಕೆವೈಸಿ ಮಾಡಿಸದೇ ಇದ್ರೆ ರೇಷನ್ ಕಾರ್ಡ್ ರದ್ದು..!
ರಾಜ್ಯ ಸರಕಾರ ರೇಷನ್ ಕಾರ್ಡ್‌ದಾರರಿಗೆ ಇಕೆವೈಸಿ ಮಾಡಿಸಲು ಅಂತಿಮ ಗಡುವು ನೀಡಿ ಎರಡು ತಿಂಗಳುಗಳೇ ಕಳೆದಿದೆ. ಇದೀಗ ಮತ್ತೆ ಎರಡು ತಿಂಗಳ ಕಾಲ ಇಕೆವೈಸಿ ಮಾಡಿಸುವ ಗಡುವನ್ನು ವಿಸ್ತರಣೆ ಮಾಡಿದೆ. ಒಂದೊಮ್ಮೆ ಜೂನ್ 30ರ ಒಳಗಾಗಿ ಇಕೆವೈಸಿ ಮಾಡಿಸದೇ ಇರುವ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸುವುದಾಗಿ ಸರಕಾರ ಎಚ್ಚರಿಕೆಯನ್ನು ನೀಡಿದೆ.
Ration Card ekyc : ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದು
ಕರ್ನಾಟಕ ಸರಕಾರ ನಕಲಿ ರೇಷನ್ ಕಾರ್ಡ್ ಪತ್ತೆ ಹೆಚ್ಚುವ ಕಾರ್ಯವನ್ನು ನಡೆಸುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಕ ನಕಲಿ ಬಿಪಿಎಲ್ ಕಾರ್ಡುದಾರರನ್ನು ಪತ್ತೆ ಹಚ್ಚಿ, ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತೆ ಇಲ್ಲದ ಕುಟುಂಬಗಳಿಗೆ ಎಪಿಎಲ್ ಕಾರ್ಡುಗಳನ್ನು ವಿತರಣೆ ಮಾಡುತ್ತಿದೆ. ಕಳೆದ ಸಾಲಿನಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡುಗಳನ್ನು ಸರಕಾರ ರದ್ದು ಪಡಿಸಿದೆ.
ಆನ್‌ಲೈನ್ ಮೂಲಕ ಪಡಿತರ ಚೀಟಿ ಇಕೆವೈಸಿ ಮಾಡಿಸುವುದು ಹೇಗೆ ?
ಪಡಿತರ ಚೀಟಿ ಹೊಂದಿರುವ ಗ್ರಾಹಕರು ಸಾರ್ವಜನಿಕ ವಿತರಣಾ ವ್ಯವಸ್ಥೆ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಇಕೆವೈಸಿ ಮಾಡಿಸಬಹುದಾಗಿದೆ. ವೆಬ್ಸೈಟ್‌ನ ಹೋಮ್ ಪೇಜ್‌ನಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಸಂಖ್ಯೆಯನ್ನು ಭರ್ತಿ ಮೂಲಕ ಮೂಲಕ ಓಟಿಪಿ ಪಡೆಯುತ್ತೀರಿ. ನಂತರ ಒಟಿಪಿಯಲ್ಲಿ ಸಂಖ್ಯೆಯನ್ನು ನಮೂದಿಸುವ ಮೂಲಕ ಇಕೆವೈಸಿಯನ್ನು ಪೂರ್ಣಗೊಳಿಸಬಹುದು.
Also Read : ಪಿಎಂ ಕಿಸಾನ್ 20ನೇ ಕಂತು ಬಿಡುಗಡೆ : ಹೊಸ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶ, ಇಲ್ಲಿದೆ ಮಾಹಿತಿ
ಸಿಎಸ್‌ಸಿ ಕೇಂದ್ರಗಳಲ್ಲಿಯೂ ಇಕೆವೈಸಿ
ಪಡಿತರ ಚೀಟಿಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ನೀಡುವ ಮೂಲಕ ನಿಮ್ಮ ಬೆರಳಚ್ಚು ನೀಡಿ ಇಕೆವೈಸಿಯನ್ನು ಪೂರ್ಣಗೊಳಿಸಬಹುದು. ಇಕೆವೈಸಿ ಕಾರ್ಯ ಪೂರ್ಣಗೊಂಡ ನಂತರದಲ್ಲಿ ಧೃಢೀಕರಣದ ಪ್ರತಿಯನ್ನು ತಪ್ಪದೇ ಪಡೆದುಕೊಳ್ಳಿ.
Ration Card ekyc June 30 last day If you don’t do this, your ration card will be cancelled in Kannada News