ಭಾನುವಾರ, ಏಪ್ರಿಲ್ 27, 2025
Homebusinessಪಡಿತರ ಚೀಟಿ ತಿದ್ದುಪಡಿಗೆ ಇಂದೇ ಕೊನೆಯ ದಿನ : ಮಿಸ್‌ ಮಾಡಿದ್ರೆ ಸಿಗಲ್ಲ ಗೃಹಲಕ್ಷ್ಮೀ ಹಣ

ಪಡಿತರ ಚೀಟಿ ತಿದ್ದುಪಡಿಗೆ ಇಂದೇ ಕೊನೆಯ ದಿನ : ಮಿಸ್‌ ಮಾಡಿದ್ರೆ ಸಿಗಲ್ಲ ಗೃಹಲಕ್ಷ್ಮೀ ಹಣ

- Advertisement -

ಬೆಂಗಳೂರು : ಗೃಹಲಕ್ಷ್ಮೀ ಯೋಜನೆ  (Gruha Lakshmi Scheme) ಸೌಲಭ್ಯ ರಾಜ್ಯದಲ್ಲಿ ಲಕ್ಷಾಂತರ ಮಹಿಳೆಯರಿಗೆ ಇನ್ನೂ ಸಿಕ್ಕಿಲ್ಲ. ಇಂತಹ ವಂಚಿತರಿಗೆ ಸೌಲಭ್ಯ ದೊರಕಿಸಿಕೊಡುವ ಸಲುವಾಗಿ ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿ ತಿದ್ದುಪಡಿಗೆ (Ration Card Updates) ಅವಕಾಶ ಕಲ್ಪಿಸಿದೆ. ಪಡಿತರ ನವೀಕರಣಕ್ಕೆ ಇಂದೇ ಕೊನೆಯ ದಿನ.

ಪಡಿತ ಚೀಟಿಗೆ ಹೊಸದಾಗಿ ಸದಸ್ಯರನ್ನು ಸೇರ್ಪಡೆ ಮಾಡಲು, ಸದಸ್ಯರ ಹೆಸರನ್ನು ಡಿಲೀಟ್‌ ಮಾಡಲು, ಕಾರ್ಡ್‌ ವಿಳಾಸ ತಿದ್ದುಪಡಿ, ಸದಸ್ಯರ ಹೆಸರು ತಿದ್ದುಪಡಿ ಸೇರಿದಂತೆ ಪಡಿತರ ಚೀಟಿಯಲ್ಲಿನ ಎಲ್ಲಾ ರೀತಿಯ ತಿದ್ದುಪಡಿಗೆ ರಾಜ್ಯ ಸರಕಾರ ಅವಕಾಶ ಕಲ್ಪಿಸಿತ್ತು.

ಈ ಹಿಂದೆ ಸೆಪ್ಟೆಂಬರ್‌ 1 ರಿಂದ 10 ರ ವರೆಗೆ ಅವಕಾಶವಿದ್ದು, ಇದೀಗ ಅವಧಿಯನ್ನು ಸೆಪ್ಟೆಂಬರ್‌ 14 ರ ವರೆಗೆ ವಿಸ್ತರಣೆ ಮಾಡಿದೆ. ಇಂದು ಸಂಜೆಯ ಒಳಗಾಗಿ ಪಡಿತರ ತಿದ್ದುಪಡಿ ಕಾರ್ಯವನ್ನು ಮುಗಿಸಿಕೊಳ್ಳಬೇಕಾಗಿದೆ. ಆದರೆ ರಾಜ್ಯ ಸರಕಾರ ತಿದ್ದುಪಡಿ ಅವಧಿಯನ್ನು ವಿಸ್ತರಣೆ ಮಾಡಲಿದ್ಯಾ ಅನ್ನೋ ಬಗ್ಗೆ ಯಾವುದೇ ಘೋಷಣೆ ಇದುವರೆಗೂ ಆಗಿಲ್ಲ.

Ration Card Updates Today Is Last Chance, if miss Gruha Lakshmi Scheme amount not transfer
Image Credit To Original Source

ಪಡಿತರ ಕಾರ್ಡ್‌ನಲ್ಲಿ ಮನೆಯ ಯಜಮಾನ ಪುರುಷ ಆಗಿದ್ದಲ್ಲಿ, ಅಂತಹ ಕುಟುಂಬದ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಕ್ಕಿಲ್ಲ. ಇಂತಹ ಲಕ್ಷಾಂತರ ಮಂದಿ ಪಡಿತರ ತಿದ್ದಪಡಿಗೆ ರಾಜ್ಯ ಸರಕಾರವನ್ನು ಆಗ್ರಹಿಸಿದ್ದರು. ಇನ್ನು ಪಡಿತರ ಚೀಟಿಯಲ್ಲಿನ ಗೊಂದಲದಿಂದಾಗಿ ಅನ್ನಭಾಗ್ಯ ಯೋಜನೆ ಯೂ ಸಿಕ್ಕಿರಲಿಲ್ಲ.

ಪಡಿತರ ಚೀಟಿ ತಿದ್ದುಪಡಿಯನ್ನು ಮಾಡದೇ ಇರುವವರು ಇಂದು ಸಂಜೆಯ ಒಳಗಾಗಿ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ. ನಿಮ್ಮ ಬಳಿಯಲ್ಲಿ ಇರುವ ಪಡಿತರ ಚೀಟಿಗಳಲ್ಲಿ ಹೆಸರು ಸೇರ್ಪಡೆ/ತೆರವು, ವಿಳಾಸ ಬದಲಾವಣೆ, ಸದಸ್ಯರ ಹೆಸರು ತಿದ್ದುಪಡಿಗೆ ಸಾಫ್ಟ್‌ವೇರ್‌ನಲ್ಲಿ ಇಂದು ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಕರ್ನಾಟಕ ಒನ್, ಗ್ರಾಂ ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸ ಬಹುದಾಗಿದೆ. , ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Ration Card Updates Today Is Last Chance, if miss Gruha Lakshmi Scheme amount not transfer
Image credit to Original Source

ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ ಯೋಜನೆಗಳಿಗೆ ಪಡಿತರ ಚೀಟಿಯನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುವ ವೇಳೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಗೃಹಲಕ್ಷ್ಮೀ,  ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಶಕ್ತಿ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಿದೆ.

ಗೃಹಜ್ಯೋತಿ ಯೋಜನೆಯ ಮೂಲಕ ಎಪಿಎಲ್‌ ಹಾಗೂ ಬಿಪಿಎಲ್‌ ಕುಟುಂಬಸ್ಥರು ಪ್ರತೀ ತಿಂಗಳು 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ಪಡೆಯ ಬಹುದಾಗಿದೆ. ವಾರ್ಷಿಕ ಸರಾಸರಿ 200 ಯೂನಿಟ್‌ಗಿಂತ ಅಧಿಕ ವಿದ್ಯುತ್‌ ಬಳಕೆ ಮಾಡಿದವರು ಮಾತ್ರವೇ ವಿದ್ಯುತ್‌ ಹೆಚ್ಚುವರಿ ಬಿಲ್‌ ಪಾವತಿಸಬೇಕಾಗಿದೆ. ಈ ಯೋಜನೆ ಈಗಾಗಲೇ ಕರ್ನಾಟಕದಲ್ಲಿ ಜಾರಿಗೆ ಬಂದಿದೆ.

ಇನ್ನು ರಾಜ್ಯದಲ್ಲಿನ ಎಲ್ಲಾ ಮಹಿಳೆಯರಿಗಾಗಿ ರಾಜ್ಯ ಸರಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಸಾರಿಗೆ ಇಲಾಖೆಯ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಹಾಗೂ ನೈರುತ್ಯ ಕರ್ನಾಟಕದ ರಸ್ತೆ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಖಾಶ ನೀಡಲಾಗಿದೆ. ಸಾಮಾನ್ಯ ಬಸ್ಸುಗಳಲ್ಲಿ ಮಹಿಳೆಯರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಗೃಹಲಕ್ಷ್ಮೀ ಯೋಜನೆಯ ಮೂಲಕ ಮನೆಯ ಯಜಮಾನಿಗೆ ಪ್ರತೀ ತಿಂಗಳು 2 ಸಾವಿರ ರೂಪಾಯಿ ಹಣವನ್ನು ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಪಡಿತರ ಕಾರ್ಡುಗಳಲ್ಲಿ ಯಾರಲ್ಲಿ ಮನೆಯ ಯಜಮಾನಿ ಎಂದು ನಮೂದಾಗಿರುತ್ತದೆಯೋ ಅಂತಹ ಮಹಿಳೆಯ ಖಾತೆಗಳಿಗೆ ಪ್ರತೀ ತಿಂಗಳು ಎರಡು ಸಾವಿರ ರೂಪಾಯಿಯನ್ನು ಸರಕಾರ ನೇರವಾಗಿ ವರ್ಗಾವಣೆ ಮಾಡಲಿದೆ.

Ration Card Updates Today Is Last Chance, if miss Gruha Lakshmi Scheme amount not transfer
Image Credit to Original Source

ಅನ್ನಭಾಗ್ಯ ಯೋಜನೆಯಲ್ಲಿಯೂ ರಾಜ್ಯ ಸರಕಾರ ಬಂಪರ್‌ ಆಫರ್‌ ನೀಡಿದೆ. ಪ್ರತೀ ಕುಟುಂಬದ ಪ್ರತೀ ಸದಸ್ಯರಿಗೆ ತಲಾ 20 ಕೆಜಿ ಅಕ್ಕಿಯನ್ನು ಪ್ರತೀ ತಿಂಗಳು ನೀಡಲಾಗುತ್ತಿದ್ದು, ಇದೀಗ ಅಕ್ಕಿಯ ಲಭ್ಯತೆಯ ಕೊರತೆಯಿಂದಾಗಿ ಹಣವನ್ನು ಪಡಿತರ ಖಾತೆದಾರರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದೆ.

ಇಷ್ಟೇ ಅಲ್ಲದೇ ರಾಜ್ಯ ಸರಕಾರ ಇದೀಗ ಮತ್ತೊಂದು ಉಚಿತ ಯೋಜನೆಯನ್ನು ಘೋಷಣೆ ಮಾಡಿದೆ. ಕರ್ನಾಟಕದ ಜನತೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಮನೆ ಬಾಗಿಲಿಗೆ ಉಚಿತ ಔಷಧ, ಚಿಕಿತ್ಸೆಯನ್ನು ನೀಡುವುದಾಗಿ ಘೋಷಣೆ ಮಾಡಿದೆ. ಈ ಯೋಜನೆ ಸದ್ಯದಲ್ಲಿಯೇ ಜಾರಿಗೆ ಬರಲಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಮನೆ ಆರೋಗ್ಯ ಯೋಜನೆ ಜಾರಿಗೊಳಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸಲು ಗೃಹ ಆರೋಗ್ಯ ಯೋಜನೆಯನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಮುಂದಾಗಿದೆ.

ಈ ಯೋಜನೆಯಲ್ಲಿ ಹೃದಯ, ಕಿಡ್ನಿ, ಕ್ಯಾನ್ಸರ್, ಬಿಪಿ, ಮಧುಮೇಹ, ಇಸಿಜಿ ಸೇರಿದಂತೆ ಎಲ್ಲ ರೀತಿಯ ಆರೋಗ್ಯ ತಪಾಸಣೆ ನಡೆಸಿ ಆಯ್ದ ಸಮಸ್ಯೆಗಳಿಗೆ ಅಗತ್ಯವಿರುವ ಔಷಧಗಳನ್ನು ಸ್ಥಳದಲ್ಲಿಯೇ ಉಚಿತವಾಗಿ ನೀಡಲು ಉದ್ದೇಶಿಸಲಾಗಿದೆ.

Ration Card Updates Today Is Last Chance, if miss Gruha Lakshmi Scheme amount not transfer

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular