ಮಂಗಳವಾರ, ಏಪ್ರಿಲ್ 29, 2025
HomebusinessBanking Frauds : ಭಾರತದಲ್ಲಿ 2020-2021ರಲ್ಲಿ ಪ್ರತಿದಿನ 229 ಬ್ಯಾಂಕಿಂಗ್ ವಂಚನೆ; ವಂಚನೆಗೊಳಗಾದ ಒಟ್ಟು ಮೊತ್ತ...

Banking Frauds : ಭಾರತದಲ್ಲಿ 2020-2021ರಲ್ಲಿ ಪ್ರತಿದಿನ 229 ಬ್ಯಾಂಕಿಂಗ್ ವಂಚನೆ; ವಂಚನೆಗೊಳಗಾದ ಒಟ್ಟು ಮೊತ್ತ 1.38 ಲಕ್ಷ ಕೋಟಿ!

- Advertisement -

ಬ್ಯಾಂಕ್ ವಂಚನೆ (Banking Frauds in India) ಇತ್ತೀಚಿನ ದಿನಗಳಲ್ಲಿ ಹೇಗೆಲ್ಲ ನಡೆಯುತ್ತಿದೆ ಎಂದು ಗೊತ್ತೇ ಆಗುವುದಿಲ್ಲ. ವಿಜಯ ಮಲ್ಯ (Vijay Mallya) ಅಥವಾ ಇನ್ನಾರೋ ಬಹುದೊಡ್ಡ ಸೆಲೆಬ್ರಿಟಿಯಿಂದ ವಂಚನೆ ನಡೆದರೆ ಮಾತ್ರ ಅದು ದೊಡ್ಡ ಸುದ್ದಿಯಾಗುತ್ತಿದೆ. ಆದರೆ ಭಾರತದಲ್ಲಿ ನಡೆಯುತ್ತಿರುವ ಬ್ಯಾಂಕಿಂಗ್ ವಂಚನೆಗಳ ಮಾಹಿತಿಯೊಂದು ಆರ್‌ಟಿಐ ಅರ್ಜಿಯೊಂದರಿಂದ (RTI) ಬಹಿರಂಗಗೊಂಡಿದ್ದು ಎಂಥವರೂ ಅವಕ್ಕಾಗುವಂತಾಗಿದೆ.

ಕಳೆದ ಆರ್ಥಿಕ ವರ್ಷದಲ್ಲಿ, ಅಂದರೆ 2020-2021ರಲ್ಲಿ ಒಟ್ಟು 83,000 ಬ್ಯಾಂಕಿಂಗ್ ವಂಚನೆ ನಡೆದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಂದರೆ ದಿನವೊಂದಕ್ಕೆ ನಡೆದ ಬ್ಯಾಂಕಿಂಗ್ ವಂಚನೆಯ ಸಂಖ್ಯೆ 229. ಅಂದಹಾಗೆ ಕಳೆದ ವರ್ಷ ಬ್ಯಾಂಕಿಂಗ್ ವಂಚನೆಗೆ ಒಳಗಾದ ಒಟ್ಟು ಮೊತ್ತ 1.38 ಲಕ್ಷ ಕೋಟಿ ! ಆದರೆ ಇದರಲ್ಲಿ ಮರು ಪಾವತಿಯಾದ ಹಣ 1 ಸಾವಿರ ಕೋಟಿ ಮಾತ್ರ. ಭಾರತದಲ್ಲಿ ನಡೆಯುತ್ತಿರುವ ಬ್ಯಾಂಕಿಂಗ್ ವಂಚನೆಯ ಅಗಾಧ ವ್ಯಾಪ್ತಿ ಅರ್ಥವಾಗಲು ಈ ಸಂಖ್ಯೆಗಳೇ ಸಾಕೇನೋ.

ಆ ಲೆಕ್ಕದಲ್ಲಿ ನೋಡುವುದಾದರೆ ಕಳೆದ ವರ್ಷ ಬ್ಯಾಂಕಿಂಗ್ ವಂಚನೆಯ ಪ್ರಮಾಣಸದಲ್ಲಿ ಕೊಂಚ ಇಳಿಮುಖವಾಗಿದೆ ಎನ್ನಬಹುದು. 2019-2020ರಲ್ಲಿ ದಿನವೊಂದಕ್ಕೆ  231 ಬ್ಯಾಂಕಿಂಗ್ ವಂಚನೆ ಪ್ರಕರಣಗಳು ನಡೆಯುತ್ತಿದ್ದವಂತೆ ಎನ್ನುತ್ತದೆ ಆರ್‌ಟಿಐ ಅರ್ಜಿಯಿಂದ ಬಹಿರಂಗಗೊಂಡ ಮಾಹಿತಿ. 2019-20ರಲ್ಲಿ 1.85 ಲಕ್ಷ ಕೋಟಿ ಹಣ ವಂಚನೆಯಾಗಿತ್ತು. ಅದರಲ್ಲಿ ಬ್ಯಾಂಕ್‌ಗಳಿಗೆ ಮರು ವಶಪಡಿಸಿಕೊಂಡ ಹಣ ಶೇಕಡಾ 8.7 ಮಾತ್ರ. ಇಂಡಿಯಾ ಟುಡೇ ಸಂಸ್ಥೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸಲ್ಲಿಸಿದ್ದ ಆರ್‌ಟಿಐ ಅರ್ಜಿ ಈ ದಂಗುಬಡಿಸುವಂತಹ ಮಾಹಿತಿಯನ್ನು ಬಹಿರಂಗಪಡಿಸಿದೆ.

ಇದೇ ಅರ್ಜಿಯಿಂದ ತಿಳಿದುಬಂದ ಇನ್ನೊಂದು ಮಾಹಿತಿ ಹೀಗಿದೆ- 2014-15 ರಿಂದ 2020-21ರವರೆಗೆ, ಅಂದರೆ ನರೇಂದ್ರ ಮೋದಿ ಪ್ರಧಾನಿಯಾಗಿರುವ ಅವಧಿಯಲ್ಲಿ 5.99 ಲಕ್ಷ ಕೋಟಿ ಬ್ಯಾಂಕ್ ವಂಚನೆಗೀಡಾಗಿದೆ. ಅದರಲ್ಲಿ 49,000 ಕೋಟಿ, ಅಂದರೆ ಶೇಕಡಾ 9.8ರಷ್ಟು ಹಣವನ್ನು ಮಾತ್ರ ಬ್ಯಾಂಕ್‌ಗಳಿಂದ ವಶಪಡಿಸಿಕೊಳ್ಳಲಾಗಿದೆ.

ಅದೇ ರೀತಿ 2007-08 ರಿಂದ 2013-14ರವರೆಗೆ, ಅಂದರೆ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ 29,451 ಬ್ಯಾಂಕಿಂಗ್ ವಂಚನೆ ಪ್ರಕರಣಗಳು ನಡೆದಿವೆ. ಅವುಗಳಿಂದ 31,674 ಕೋಟಿ ಹಣ ವಂಚನೆಗೊಳಗಾಗಿದ್ದು, 7493 ಕೋಟಿ, ಅಥವಾ ಶೇಕಡಾ 23.7ರಷ್ಟು ಹಣವನ್ನು ಮಾತ್ರ ಮರುವಶಪಡಿಸಿಕೊಳ್ಳಲಾಗಿದೆ

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

ಇದನ್ನೂ ಓದಿ:Perfume City : ಒಂದಾನೊಂದು ಕಾಲದಲ್ಲಿ ಭಾರತದ ಈ ನಗರದ ಚರಂಡಿಯಲ್ಲೂ ಸುಗಂಧ ದ್ರವ್ಯ ಹರಿಯುತ್ತಿತ್ತಂತೆ!

ಇದನ್ನೂ ಓದಿ : Asus Chromebook CX1101 : ವರ್ಕ್ ಫ್ರಂ ಹೋಂ ಮಾಡುವವರಿಗೆ ಕೇವಲ 19,999 ರೂ. ಬೆಲೆಯ ಉತ್ತಮ ಲ್ಯಾಪ್‌ಟಾಪ್ ಇಲ್ಲಿದೆ

( RBI RTI reply 229 banking frauds a day in 2020-21 recovery rate below 1)

RELATED ARTICLES

Most Popular