RBL Bank Savings account interes : ಭಾರತದ ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಆರ್‌ಬಿಎಲ್ ಬ್ಯಾಂಕ್ (RBL Bank) ತನ್ನ ಗ್ರಾಹಕರಿಗೆ ಉಳಿತಾಯ ಖಾತೆಗಳ ಬಡ್ಡಿದರದಲ್ಲಿ ಇಳಿಕೆ ಮಾಡಲು ಮುಂದಾಗಿದೆ. ಪರಿಷ್ಕೃತ ಬಡ್ಡಿದರಗಳು ಅಕ್ಟೋಬರ್ 1 2024 ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಘೋಷಣೆ ಮಾಡಿದೆ.
ಬ್ಯಾಂಕುಗಳು ಸಾಮಾನ್ಯವಾಗಿ ಉಳಿತಾಯ ಖಾತೆಗಳ ಬಡ್ಡಿದರದಲ್ಲಿ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ಅನುಕೂಲ ಕಲ್ಪಿಸುತ್ತವೆ. ಆದರೆ ಆರ್‌ಬಿಎಲ್ ಬ್ಯಾಂಕ್ ಒಂದು ಲಕ್ಷದ ಒಳಗೆ ಬ್ಯಾಲೆನ್ಸ್ ನಿರ್ವಹಣೆ ಮಾಡುವ ಗ್ರಾಹಕರಿಗೆ ಮಾತ್ರವೇ ಬಡ್ಡಿದರಲ್ಲಿ ಇಳಿಕೆ ಮಾಡುತ್ತಿದೆ. ಪ್ರಸ್ತುತ ಜಾರಿಯಲ್ಲಿರುವ ಬಡ್ಡಿದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಲಾಗುತ್ತಿದೆ ಎಂದು ಘೋಷಿಸಿದೆ.

ಆರ್‌ಬಿಎಲ್ ಬ್ಯಾಂಕಿನ ಹೊಸ ರೂಲ್ಸ್‌ನಿಂದಾಗಿ ಮುಂದಿನ ತಿಂಗಳಿನಿಂದಾಗಿ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರದ ಆದಾಯವನ್ನು ಕಳೆದುಕೊಳ್ಳಲಿದ್ದಾರೆ. RBL ಬ್ಯಾಂಕ್ ಪ್ರಸ್ತುತ 3.75 ಶೇಕಡಾ ಬಡ್ಡಿದರವನ್ನು ಗ್ರಾಹಕರಿಗೆ ಅವರ ಉಳಿತಾಯ ಖಾತೆಯಲ್ಲಿ ರೂ.1 ಲಕ್ಷದವರೆಗೆ ನಗದು ಬ್ಯಾಲೆನ್ಸ್‌ನೊಂದಿಗೆ ನೀಡುತ್ತಿದೆ. ಆದರೆ ಈ ಬಡ್ಡಿದರವು ಅಕ್ಟೋಬರ್ 1 ರಿಂದ ಶೇಕಡಾ 3.50 ಕ್ಕೆ ಇಳಿಕೆಯಾಗಲಿದೆ. ಆರ್ ಬಿಎಲ್ ನ ಈ ದಿಢೀರ್ ನಿರ್ಧಾರ ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ : Ration Card e-KYC : ರೇಷನ್ ಕಾರ್ಡ್‌ಗೆ ಇಕೆವೈಸಿ ಕಡ್ಡಾಯ, ತಪ್ಪಿದ್ರೆ ರದ್ದಾಗುತ್ತೆ ಕಾರ್ಡ್
1 ಲಕ್ಷಕ್ಕಿಂತ ಹೆಚ್ಚಿನ ನಗದು ಹೊಂದಿರುವ ಉಳಿತಾಯ ಖಾತೆಗಳ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬ್ಯಾಂಕ್ ತಿಳಿಸಿದೆ. ಹಾಗಾಗಿ 1 ಲಕ್ಷಕ್ಕಿಂತ ಕಡಿಮೆ ನಗದು ಹಣ ಇಟ್ಟುಕೊಳ್ಳುವವರಿಗೆ ಬಡ್ಡಿ ಆದಾಯ ಕಡಿಮೆಯಾಗಲಿದೆ.

ಉಳಿತಾಯ ಖಾತೆಗಳ ಮೇಲಿನ ಹೊಸ ಬಡ್ಡಿ ದರ :
ಇದನ್ನೂ ಓದಿ : ಭಾಗ್ಯಲಕ್ಷ್ಮಿ ಯೋಜನೆ ಗುಡ್‌ನ್ಯೂಸ್ : ಫಲಾನುಭವಿಗಳ ಖಾತೆಗೆ ಮೆಚ್ಯುರಿಟಿ ಹಣ
ರೂ.1 ಲಕ್ಷಕ್ಕಿಂತ ಕಡಿಮೆ ಬ್ಯಾಲೆನ್ಸ್ ಹೊಂದಿರುವ ಖಾತೆಗಳಿಗೆ ಶೇ.3.50 ಬಡ್ಡಿ ದರ
1 ಲಕ್ಷದಿಂದ ರೂ. 10 ಲಕ್ಷಕ್ಕಿಂತ ಕಡಿಮೆ ಬಾಕಿ ಇದ್ದರೆ ಶೇಕಡಾ 5.50 ಬಡ್ಡಿ
10 ಲಕ್ಷದಿಂದ ರೂ. ಬಾಕಿ 25 ಲಕ್ಷಕ್ಕಿಂತ ಕಡಿಮೆ ಇದ್ದರೆ, ಬಡ್ಡಿ ದರವು 6 ಪ್ರತಿಶತ.
ರೂ. 25 ಲಕ್ಷದಿಂದ ರೂ. 3 ಕೋಟಿಗಿಂತ ಕಡಿಮೆ ಇದ್ದರೆ ಮೇಲಿನ ಬಡ್ಡಿ ದರ 7.50 ಪ್ರತಿಶತ
ರೂ. 3 ಕೋಟಿ ರೂ. 7.5 ಕೋಟಿಗಿಂತ ಕಡಿಮೆ ಬಾಕಿ ಇದ್ದರೆ ಶೇಕಡಾ 6.50 ಬಡ್ಡಿ
ರೂ. 7.5 ಕೋಟಿ ರೂ. 50 ಕೋಟಿಗಿಂತ ಕಡಿಮೆ ಇರುವ ಬ್ಯಾಲೆನ್ಸ್‌ಗೆ ಶೇ.6.25 ಬಡ್ಡಿ ದರ
ರೂ. 50 ಕೋಟಿ ರೂ. 75 ಕೋಟಿಗಿಂತ ಕಡಿಮೆ ಇರುವ ಬ್ಯಾಲೆನ್ಸ್‌ಗೆ ಶೇಕಡಾ 5.25 ಬಡ್ಡಿ.
ರೂ. 75 ಕೋಟಿ ರೂ. 125 ಕೋಟಿಗಿಂತ ಕಡಿಮೆ ಇರುವ ಬ್ಯಾಲೆನ್ಸ್‌ಗೆ ಬಡ್ಡಿ ದರ 7.75 ಪ್ರತಿಶತ
ರೂ. 125 ಕೋಟಿ ರೂ. 200 ಕೋಟಿಗಿಂತ ಕಡಿಮೆ ಬಾಕಿ ಇದ್ದರೆ ಶೇಕಡಾ 6 ಬಡ್ಡಿ ದರ
ರೂ. 200 ಕೋಟಿ ರೂ. 400 ಕೋಟಿಗಿಂತ ಕಡಿಮೆ ಬಾಕಿ ಇದ್ದರೆ ಬಡ್ಡಿ ದರವು 4 ಪ್ರತಿಶತ
ರೂ. 400 ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ 6.75 ಪ್ರತಿಶತ ಬಡ್ಡಿ
ಇದನ್ನೂ ಓದಿ : LIC Plans : ಎಲ್ಐಸಿಯ ಈ ಪಾಲಿಸಿಗಳೆಲ್ಲಾ ಸೆಪ್ಟೆಂಬರ್ 30ಕ್ಕೆ ಅಂತ್ಯ
RBL Bank Savings account interest rate reduction: New rules effect from October 1 2024