ಭಾನುವಾರ, ಏಪ್ರಿಲ್ 27, 2025
HomebusinessSBI fixed deposit rates : ಎಸ್‌ಬಿಐ ಗ್ರಾಹಕರ ಗಮನಕ್ಕೆ : ಈ ಎಫ್‌ಡಿ ಯೋಜನೆಯಲ್ಲಿ...

SBI fixed deposit rates : ಎಸ್‌ಬಿಐ ಗ್ರಾಹಕರ ಗಮನಕ್ಕೆ : ಈ ಎಫ್‌ಡಿ ಯೋಜನೆಯಲ್ಲಿ ಶೇ.7.1ರಷ್ಟು ಬಡ್ಡಿದರ ಲಭ್ಯ

- Advertisement -

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಯಮಿತ ಅವಧಿಯ ಠೇವಣಿ ಆಯ್ಕೆಯನ್ನು (SBI fixed deposit rates) ಹೊರತುಪಡಿಸಿ ವಿವಿಧ ವಿಶೇಷ ಎಫ್‌ಡಿ ಯೋಜನೆಗಳನ್ನು ಗ್ರಾಹಕರಿಗಾಗಿ ಪ್ರಸ್ತುತಪಡಿಸಿದೆ. ದೇಶದಾದ್ಯಂತ ಇರುವ ಹೆಚ್ಚಿನ ಬ್ಯಾಂಕ್‌ಗಳು ನೀಡುವ ಕೆಲವು ಯೋಜನೆಗಳೆಂದರೆ ಹಿರಿಯ ನಾಗರಿಕರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವುದು ಆಗಿದೆ. ಇದೀಗ ಎಸ್‌ಬಿಐ ಹಿರಿಯ ನಾಗರಿಕರಿಗಾಗಿ ಅಮೃತ್ ಕಲಾಶ್ ಎಫ್‌ಡಿ ಯೋಜನೆಯಡಿ, ಹೆಚ್ಚಿನ ಬಡ್ಡಿ ದರಗಳನ್ನು ನೀಡುವ ಸೀಮಿತ ಅವಧಿಯ ಯೋಜನೆಯಲ್ಲಿ ವಿಶೇಷ ಬಡ್ಡಿದರವನ್ನು ನೀಡುತ್ತಿದೆ.

ಎಸ್‌ಬಿಐ ಎಫ್‌ಡಿಗಳ ಇತ್ತೀಚಿನ ಬಡ್ಡಿ ದರಗಳ ವಿವರ :
ಎಸ್‌ಬಿಐ ಬ್ಯಾಂಕ್‌ 7 ದಿನಗಳಿಂದ 10 ವರ್ಷಗಳ ನಡುವಿನ ಎಸ್‌ಬಿಐ ಎಫ್‌ಡಿಗಳು ಸಾಮಾನ್ಯ ಗ್ರಾಹಕರಿಗೆ ಶೇ.3 ರಿಂದ ಶೇ. 7.1 ವರೆಗೆ ನೀಡುತ್ತದೆ. ಹಿರಿಯ ನಾಗರಿಕರು ಈ ಠೇವಣಿಗಳ ಮೇಲೆ 50 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಹೆಚ್ಚುವರಿಯಾಗಿ ಪಡೆಯುತ್ತಾರೆ.

  • 7 ದಿನಗಳಿಂದ 45 ದಿನಗಳು : ಶೇ. 3
  • 46 ದಿನಗಳಿಂದ 179 ದಿನಗಳು : ಶೇ. 4.5
  • 180 ದಿನಗಳಿಂದ 210 ದಿನಗಳು : ಶೇ. 5.25
  • 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ : ಶೇ. 5.75
  • 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ : ಶೇ. 6.8
  • 2 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ : ಶೇ. 7.00
  • 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ : ಶೇ. 6.5
  • 5 ವರ್ಷಗಳು ಮತ್ತು 10 ವರ್ಷಗಳವರೆಗೆ : ಶೇ. 6.5
  • 400 ದಿನಗಳು (ವಿಶೇಷ ಯೋಜನೆ ಅಂದರೆ “ಅಮೃತ ಕಲಶ”) ಶೇ. 7.10

ಎಸ್‌ಬಿಐ ಅಮೃತ್ ಕಲಶ ಠೇವಣಿ ಯೋಜನೆ
ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಫೆಬ್ರವರಿಯಲ್ಲಿ “400 ದಿನಗಳ” (ಅಮೃತ್ ಕಲಶ) ನಿರ್ದಿಷ್ಟ ಅವಧಿಯ ಯೋಜನೆಯನ್ನು ಪ್ರಾರಂಭಿಸಿತು. ಈ ವಿಶೇಷ ಎಫ್‌ಡಿ ಹಿರಿಯ ನಾಗರಿಕರಿಗೆ 7.6 ಶೇಕಡಾ ಮತ್ತು ಇತರರಿಗೆ 7.1 ಶೇಕಡಾ ಬಡ್ಡಿದರವನ್ನು ನೀಡುತ್ತದೆ. 400 ದಿನಗಳ ಅವಧಿಗೆ ಇದು ಆಗಸ್ಟ್ 15 ರಂದು ಕೊನೆಗೊಳ್ಳಲಿದೆ.

ಇದನ್ನೂ ಓದಿ : IndiGo Airlines‌ : ತಾಂತ್ರಿಕ ದೋಷ :ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಇದನ್ನೂ ಓದಿ : LIC Jeevan Saral Policy : ಎಲ್‌ಐಸಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿ : ನಿವೃತ್ತಿಯ ನಂತರ ಉತ್ತಮ ಲಾಭ ಪಡೆಯಿರಿ

ಎಸ್‌ಬಿಐ ವಿಕೇರ್ ಠೇವಣಿ ಯೋಜನೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹಿರಿಯ ನಾಗರಿಕರಿಗಾಗಿ ತನ್ನ ವಿಶೇಷ ನಿಶ್ಚಿತ ಠೇವಣಿ ಯೋಜನೆಯನ್ನು ವಿಸ್ತರಿಸಿದೆ. ಎಸ್‌ಬಿಐ ವಿಕೇರ್, ಇದು 5 ವರ್ಷದಿಂದ 10 ವರ್ಷಗಳ ನಡುವಿನ ಅವಧಿಗೆ ಹಿರಿಯರಿಗೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ. ಎಸ್‌ಬಿಐ ವಿಕೇರ್ ಅನ್ನು ಸೆಪ್ಟೆಂಬರ್ 30, 2023 ರವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯು ತಾಜಾ ಠೇವಣಿಗಳು ಮತ್ತು ಮೆಚುರಿಂಗ್ ಠೇವಣಿಗಳ ನವೀಕರಣದ ಮೇಲೆ ಲಭ್ಯವಿದೆ. ಎಸ್‌ಬಿಐ ವಿಕೇರ್ ನಲ್ಲಿ ನೀಡಲಾಗುವ ಬಡ್ಡಿ ದರವು ಶೇ. 7.50ರಷ್ಟು ಆಗಿದೆ.

SBI fixed deposit rates: Attention SBI customers: Interest rate of 7.1 percent is available in this FD scheme.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular