ಸೋಮವಾರ, ಏಪ್ರಿಲ್ 28, 2025
HomebusinessSEBI Unveils Framework For Gold Exchanges: ಚಿನ್ನದ ವಹಿವಾಟಿಗೆ ಕಾನೂನಿನ ಚೌಕಟ್ಟು ರಚಿಸಿದ ಸೆಬಿ

SEBI Unveils Framework For Gold Exchanges: ಚಿನ್ನದ ವಹಿವಾಟಿಗೆ ಕಾನೂನಿನ ಚೌಕಟ್ಟು ರಚಿಸಿದ ಸೆಬಿ

- Advertisement -

ನವದೆಹಲಿ: ವಿದ್ಯುನ್ಮಾನ ಮಾದರಿಯಲ್ಲಿ ಚಿನ್ನದ ವಹಿವಾಟು (ಇಜಿಆರ್)( Electronic Gold Receipts – EGRs) ನಡೆಸುವಂತೆ ಚಿನ್ನ(Gold)ವಿನಿಯಮ ವ್ಯವಹಾರ ನಡೆಸಲು ಅನುಕೂಲವಾಗುವ ಕಾನೂನಿನ ಚೌಕಟ್ಟನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಪ್ರಾಧಿಕಾರ (ಸೆಬಿ-SEBI) ಸೋಮವಾರ ರಚಿಸಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬಂದಿದೆ.

ಇಜಿಆರ್ ಟ್ರೇಡಿಂಗ್ ಆರಂಭಕ್ಕೆ ಮುನ್ನ ಅನುಮತಿ ಕೋರಿ ಸೆಬಿಗೆ ಅರ್ಜಿ ಸಲ್ಲಿಸಬೇಕು. ಬೇರೆ ಬೇರೆ ಮುಖಬೆಲೆಯಲ್ಲಿ ಇಜಿಆರ್ ಅನ್ನು ಚಿನ್ನಕ್ಕೆ ಅಥವಾ ವಹಿವಾಟಿಗೆ ಬದಲಾಯಿಸುವುದಕ್ಕೆ ಅವಕಾಶವಿದೆ. ಇಡೀ ವಹಿವಾಟನ್ನು ಮೂರು ಹಂತದಲ್ಲಿ ನಡೆಸಬಹುದು. ಅವೆಂದರೆ ಇಜಿಆರ್ ರಚನೆ, ಷೇರುಪೇಟೆಯಲ್ಲಿ ಇಜಿಆರ್ ಟ್ರೇಡಿಂಗ್, ಇಜಿಆರ್ ಅನ್ನು ಭೌತಿಕ ಚಿನ್ನವನ್ನಾಗಿ ಪರಿವತಿರ್ಸುವುದು. ಇದಕ್ಕಾಗಿ ಠೇವಣಿದಾರರು (depositories) ಸಾಮಾನ್ಯ ಇಂಟರ್ಫೇಸ್ ಅನ್ನು ಅಭಿವೃದ್ಧಿಪಡಿಸಬೇಕಾಗಿದೆ. ಈ ಇಂಟರ್ಫೇಸ್ ವಾಲ್ಟ್ಸ್ ವ್ಯವಸ್ಥಾಪಕರು, ಠೇವಣಿದಾರರು, ಷೇರುಪೇಟೆ ಮತ್ತು ಕ್ಲಿಯರಿಂಗ್ ಕಾರ್ಪೊರೇಷನ್‌ಗಳಿಗೆ ಬಳಕೆ ಮಾಡುವುದಕ್ಕೆ ತಕ್ಕಂತೆ ಇರಬೇಕು.

1956ರ ಷೇರುಪೇಟೆ ಗುತ್ತಿಗೆ (ನಿಯಂತ್ರಣ) ಕಾಯ್ದೆ ಅನ್ವಯ ಇಜಿಆರ್ ಅನ್ನು ಷೇರು (ಸೆಕ್ಯುರಿಟೀಸ್) ಎಂದು ಡಿಸೆಂಬರ್ 24ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಡಿ.31ರ ಅಧಿಸೂಚನೆಯಲ್ಲಿ ವಾಲ್ಟ್ಸ್ ವ್ಯವಸ್ಥಾಪಕರು ಗೋಲ್ಡ್ ಎಕ್ಸ್ಚೇಂಜ್ ವಹಿವಾಟು ಆರಂಭಿಸುವುದಕ್ಕೆ ಅಗತ್ಯವಾದ ಸೂಚನೆಯನ್ನು ನೀಡಲಾಗಿದೆ.

ಭೌತಿಕ ಚಿನ್ನವನ್ನೂ ಇಜಿಆರ್ ಆಗಿ ಪರಿವತಿಸಲು ಅವಕಾಶವಿದ್ದು, ಇದು ಹೊಸದಾಗಿ ಮಾಡುವ ಚಿನ್ನದ ಹೂಡಿಕೆ ಅಗಿರುತ್ತದೆ. ಇದನ್ನು ವಾಲ್ಟ್ಸ್ಗೆ ಪಡೆದುಕೊಂಡು ಅಲ್ಲಿಂದ ಷೇರುಪೇಟೆಗೆ ವರ್ಗಾಯಿಸಬೇಕಾಗುತ್ತದೆ. ಈಗಾಗಲೇ ವಾಲ್ಟ್ಸ್‌ನಲ್ಲಿ ಚಿನ್ನದ ಹೂಡಿಕೆ ಹೊಂದಿರುವವರು ಇದನ್ನು ಇಜಿಆರ್‌ಗೆ ನೇರವಾಗಿ ಪರಿವರ್ತಿಸಿಕೊಳ್ಳಬಹುದು. ಆದರೆ, ವಾಲ್ಟ್ಸ್ ವ್ಯವಸ್ಥಾಪಕರು ಚಿನ್ನವನ್ನು ಇಜಿಆರ್‌ಗೆ ಮಾರ್ಪಡಿಸುವ ಮಾನದಂಡವನ್ನು ಪೂರೈಸಬೇಕು.

ಪರಿವರ್ತಿಸಲಾಗುವ ಚಿನ್ನ ಎಲ್‌ಬಿಎಂಎ(LBMA) ಬಂಗಾರ ಡಿಲಿವರಿ ಮಾನಕ ಅಥವಾ ಉತ್ತಮ ಡಿಲಿವರಿ ಮಾನಕ ಅಥವಾ ಸೆಬಿ ಮಾನ್ಯ ಮಾಡಿದ ಇನ್ನಿತರ ಮಾನಕಗಳಿಗೆ ತಕ್ಕಂತೆ ಇರಬೇಕು.

ಕ್ಲಿಯರಿಂಗ್ ಕಾರ್ಪೊರೇಷನ್‌ಗಳು ಚಿನ್ನ ಗುಣಮಟ್ಟವನ್ನು ಪರಿಶೀಲಿಸಿ ದೃಢೀಕರಿಸುವ ಅಧಿಕಾರವನ್ನು ಹೊಂದಿರುತ್ತವೆ. ಹೂಡಿಕೆದಾರರು ವಾಲ್ಟ್ಸ್‌ ನಿಂದ ಇಜಿಆರ್‌ಗೆ ಪರಿವರ್ತಿಸುವ ಸಮಯದಲ್ಲಿ ಅಥವಾ ಹಿಂಪಡೆಯುವ ವೇಳೆ ಇದನ್ನು ಮಾಡಬಹುದಾಗಿದೆ ಎಂದು ಸೆಬಿ ತಿಳಿಸಿದೆ.

ಇದನ್ನೂ ಓದಿ: Golden Bond : ಚಿನ್ನದ ಬಾಂಡ್‌ ಯೋಜನೆ ಸೋಮವಾರದಿಂದ ಮತ್ತೆ ಆರಂಭ: ಘೋಷಿತ ಬೆಲೆಯನ್ನು ಒಮ್ಮೆ ಗಮನಿಸಿ

(SEBI Unveils Framework For Gold Exchanges)

RELATED ARTICLES

Most Popular