ಮಂಗಳವಾರ, ಏಪ್ರಿಲ್ 29, 2025
HomebusinessSwiggy Company : 2023 ಹೊಸ ವರ್ಷದ ಆಚರಣೆ : 3.50 ಲಕ್ಷ ಬಿರಿಯಾನಿ, 61...

Swiggy Company : 2023 ಹೊಸ ವರ್ಷದ ಆಚರಣೆ : 3.50 ಲಕ್ಷ ಬಿರಿಯಾನಿ, 61 ಸಾವಿರ ಪಿಜ್ಜಾ ಡೆಲಿವರಿ ಮಾಡಿದ ಸ್ವಿಗ್ಗಿ ಕಂಪೆನಿ

- Advertisement -

ನವದೆಹಲಿ : ಪ್ರಪಂಚದಾದ್ಯಂತ ಜನರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಹೊಸ ವರ್ಷಕ್ಕೆ ಪಾರ್ಟಿ ಮೋಜುಗಳಿಗಾಗಿ ಹೆಚ್ಚಿನ ಜನರು ಫುಡ್‌ ಡೆಲಿವೆರಿ ಕಂಪೆನಿನಿಂದ ತಮಗೆ ಇಷ್ಟವಾದ ಆಹಾರವನ್ನು ತರಿಸಿಕೊಂಡು ಸವಿದಿದ್ದಾರೆ. ಹೆಸರಾಂತ ಫುಡ್ ಡೆಲಿವರಿ ಕಂಪೆನಿ ಸ್ವಿಗ್ಗಿ (Swiggy Company) ಶನಿವಾರ (ಡಿಸೆಂಬರ್ 31) 3.50 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ವಿತರಿಸಿದೆ. ಹಾಗೇ ರಾತ್ರಿ 10.25 ರ ಒಳಗೆ ಸ್ವಿಗ್ಗಿ ಫುಡ್‌ ಡೆಲಿವರಿ ಕಂಪೆನಿ ದೇಶಾದ್ಯಂತ 61,000 ಪಿಜ್ಜಾಗಳನ್ನು ರವಾನಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.‌

ಟ್ವಿಟರ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಹೈದರಾಬಾದಿ ಬಿರಿಯಾನಿಗೆ ಶೇಕಡಾ 75.4 ರಷ್ಟು ಆರ್ಡರ್‌ಗಳು ಬಂದಿರುತ್ತದೆ. ನಂತರ ಲಕ್ನೋವಿ ಶೇಕಡಾ 14.2 ಮತ್ತು ಕೋಲ್ಕತ್ತಾ 10.4 ಶೇಕಡಾದಷ್ಟು ಬಿರಿಯಾನಿ ಆರ್ಡರ್‌ಗಳು ಸ್ವಿಗ್ಗಿಗೆ ಬಂದಿರುತ್ತದೆ. ಅಷ್ಟೇ ಅಲ್ಲದೇ 3.50 ಲಕ್ಷ ಆರ್ಡರ್‌ಗಳೊಂದಿಗೆ, ಅಗ್ರ ಐಟಂ ಬಿರಿಯಾನಿಯನ್ನು ವಿತರಿಸಲಾಗಿದೆ ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

ಸ್ವಿಗ್ಗಿ ಕಂಪೆನಿ ಶನಿವಾರ ಸಂಜೆ 7.20ಕ್ಕೆ 1.65 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ತಲುಪಿಸಿರುತ್ತದೆ. ಹೈದರಾಬಾದ್‌ನ ಟಾಪ್ ಬಿರಿಯಾನಿ ಮಾರಾಟದ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಬವರ್ಚಿ, 2021 ರ ಹೊಸ ವರ್ಷದ ಮೊದಲ ದಿನದಂದು ನಿಮಿಷಕ್ಕೆ ಎರಡು ಬಿರಿಯಾನಿಗಳನ್ನು ವಿತರಿಸಿದ್ದು, ಡಿಸೆಂಬರ್ 31, 2022 ಕ್ಕೆ ಬೇಡಿಕೆಯನ್ನು ಪೂರೈಸಲು 15 ಟನ್ ರುಚಿಯಾದ ಬಿರಿಯಾನಿ ಪದಾರ್ಥವನ್ನು ಸಿದ್ಧಪಡಿಸಿರುತ್ತದೆ.

“ಡೊಮಿನೋಸ್‌ ಸುಮಾರು 61,287 ಪಿಜ್ಜಾಗಳನ್ನು ವಿತರಿಸಲಾಗಿದೆ. ಅವರೊಂದಿಗೆ ಹೋಗುವ ಓರೆಗಾನೊ ಪ್ಯಾಕೆಟ್‌ಗಳ ಸಂಖ್ಯೆಯನ್ನು ಮಾತ್ರ ನಾವು ಊಹಿಸಬಹುದು” ಎಂದು ಸ್ವಿಗ್ಗಿ ಕಂಪೆನಿ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಶನಿವಾರ ಸಂಜೆ 7 ಗಂಟೆಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ 1.76 ಲಕ್ಷ ಪ್ಯಾಕೆಟ್‌ಗಳ ಚಿಪ್‌ಗಳನ್ನು ಆರ್ಡರ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಹೊಸ ವರ್ಷದ ಮೊದಲ ದಿನದಂದು ರಾತ್ರಿ 9.18 ರ ಹೊತ್ತಿಗೆ ಭಾರತದಾದ್ಯಂತ ಸುಮಾರು 12,344 ಜನರು ಖಿಚಡಿಯನ್ನು ಆರ್ಡರ್ ಮಾಡಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ : ಹೊಸ ವರ್ಷದಂದು ಗ್ರಾಹಕರಿಗೆ ಬ್ಯಾಡ್‌ ನ್ಯೂಸ್ : ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ

ಇದನ್ನೂ ಓದಿ : Bank Holidays January 2023 : ಗ್ರಾಹಕರೇ ಗಮನಿಸಿ : ಜನವರಿ ತಿಂಗಳಲ್ಲಿ 15 ದಿನ ಬ್ಯಾಂಕ್‌ ರಜೆ

ಇದನ್ನೂ ಓದಿ : PAN Card Update News : ಇನ್ಮುಂದೆ ಹಣಕಾಸಿನ ವಹಿವಾಟಿಗೆ ಪಾನ್‌ ಕಾರ್ಡ್ ಅಗತ್ಯವಿಲ್ಲ

“ಈಗಾಗಲೇ ಸ್ವಿಗ್ಗಿ ವೇಗದ ಪ್ರಾರಂಭವಾಗಿದೆ. ನಾವು ಈಗಾಗಲೇ 1.3 ಮಿಲಿಯನ್ ಆರ್ಡರ್‌ಗಳನ್ನು ತಲುಪಿಸಿದ್ದೇವೆ ಮತ್ತು ಎಣಿಕೆ ಮಾಡಿದ್ದೇವೆ. ನಮ್ಮ ಫ್ಲೀಟ್ ಮತ್ತು ರೆಸ್ಟೋರೆಂಟ್ ಪಾಲುದಾರರು ಈ ಎನ್‌ವೈಇ ಅನ್ನು ಅವಿಸ್ಮರಣೀಯವಾಗಿಸಲು ಸಜ್ಜಾಗಿದ್ದಾರೆ. ಪ್ರೊ-ಟಿಪ್ ವಿಪರೀತವನ್ನು ಸೋಲಿಸಲು ಬೇಗ ಆರ್ಡರ್ ಮಾಡಿ” ಎಂದು ಶ್ರೀಹರ್ಷ ಮೆಜೆಟಿ ಸ್ವಿಗ್ಗಿ ಸಿಇಒ ನಿನ್ನೆ ಸಂಜೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Swiggy Company: 2023 New Year Celebration: Swiggy Company Delivered 3.50 Lakh Biryani, 61 Thousand Pizza

RELATED ARTICLES

Most Popular