ಭಾನುವಾರ, ಏಪ್ರಿಲ್ 27, 2025
HomebusinessPost Office Alert : ಪೋಸ್ಟ್‌ ಆಫೀಸ್‌ ಗ್ರಾಹಕರಿಗೆ, ಅಕ್ಟೋಬರ್ 1ರಿಂದ ಬದಲಾಗುತ್ತೆ ಎಟಿಎಂ ಕಾರ್ಡ್‌...

Post Office Alert : ಪೋಸ್ಟ್‌ ಆಫೀಸ್‌ ಗ್ರಾಹಕರಿಗೆ, ಅಕ್ಟೋಬರ್ 1ರಿಂದ ಬದಲಾಗುತ್ತೆ ಎಟಿಎಂ ಕಾರ್ಡ್‌ ವಹಿವಾಟು ನಿಯಮ

- Advertisement -

ಇಂದಿನ ದಿನಗಳಲ್ಲಿ ಬ್ಯಾಂಕ್‌ ಮಾತ್ರವಲ್ಲ ಪೋಸ್ಟ್‌ ಆಫೀಸ್‌ ಮೂಲಕರು ಜನರು ಹಣದ ವಹಿವಾಟು ನಡೆಸುತ್ತಿದ್ದಾರೆ. ಆದ್ರೆ ಉಳಿತಾಯ ಖಾತೆಗಳನ್ನು ಹೊಂದಿರುವ ಪೋಸ್ಟ್ ಆಫೀಸ್ ಗ್ರಾಹಕರು ಒಂದು ತಿಂಗಳಲ್ಲಿ ಎಟಿಎಂನಲ್ಲಿ ಮಾಡುವ ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳಿಗೆ ಹೊಸ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇಲಾಖೆಯಿಂದ ಹೊರಡಿಸಲಾಗಿರುವ ಸುತ್ತೋಲೆ ಎಟಿಎಂ ಕಾರ್ಡ್ ವಹಿವಾಟಿನ ಮೇಲಿನ ಶುಲ್ಕದಲ್ಲಿ ಅಕ್ಟೋಬರ್ 1 ರಿಂದ ಬದಲಾಗಲಿದೆ ತಿಳಿಸಿದೆ.

ಅಂಚೆ ಕಚೇರಿಯ ಎಟಿಎಂ ಅಥವಾ ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣಾ ಶುಲ್ಕ ರೂ 125 ಮತ್ತು ಜಿಎಸ್‌ಟಿ ಪಾವತಿಸಬೇಕಾಗಿದೆ. ಈ ಶುಲ್ಕಗಳು 1 ಅಕ್ಟೋಬರ್ 2021 ಮತ್ತು 30 ಸೆಪ್ಟೆಂಬರ್ 2022 ರವರೆಗೆ ಅನ್ವಯವಾಗುತ್ತವೆ. ಇಂಡಿಯಾ ಪೋಸ್ಟ್ ಈಗ ಗ್ರಾಹಕರಿಗೆ ಕಳುಹಿಸಿದ ಎಸ್‌ಎಂಎಸ್ ಅಲರ್ಟ್‌ಗಳನ್ನು ಒಳಗೊಂಡಂತೆ ರೂ 12 ಮತ್ತು GST ಅನ್ನು ವಿಧಿಸುತ್ತಿದೆ.

ಇಂಡಿಯಾ ಪೋಸ್ಟ್ ಗ್ರಾಹಕ ಒಂದೊಮ್ಮೆ ತನ್ನ ಎಟಿಎಂ ಕಾರ್ಡ್ ಕಳೆದುಕೊಂಡರೆ, ಇನ್ನೊಂದು ಡೆಬಿಟ್ ಕಾರ್ಡ್ ಪಡೆಯಲು ಅಕ್ಟೋಬರ್ 1 ರಿಂದ 300 ರೂಪಾಯಿ ಮತ್ತು ಜಿಎಸ್ಟಿ ವಿಧಿಸಲಾಗುತ್ತದೆ. ಎಟಿಎಂ ಪಿನ್ ಕಳೆದು ಹೋದರೆ, ಅಕ್ಟೋಬರ್ 1 ರಿಂದ ನಕಲಿ ಪಿನ್‌ಗೆ ಇನ್ಮುಂದೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಲ್ಲದೇ ಗ್ರಾಹಕರು ಪೋಸ್ಟ್‌ ಆಫೀಸಿಗೆ ತೆರಳಿ ಹೊಸ ಪಿನ್‌ ಪಡೆಯಬೇಕಾಗಿದೆ. ಅಲ್ಲದೇ ಈ ವೇಳೆಯಲ್ಲಿ ಗ್ರಾಹಕರಿಗೆ 50 ರೂಪಾಯಿ ಶುಲ್ಕ ಮತ್ತು ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ. ಉಳಿತಾಯ ಖಾತೆಯಲ್ಲಿ ಬ್ಯಾಲೆನ್ಸ್ ಕೊರತೆಯಿಂದಾಗಿ ಎಟಿಎಂ ಅಥವಾ ಪಿಒಎಸ್ ವಹಿವಾಟುಗಳನ್ನು ನಿರಾಕರಿಸಿದರೆ, ಗ್ರಾಹಕರು ಅದಕ್ಕಾಗಿ 20 ರೂಪಾಯಿ ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ಇಷ್ಟೇ ಅಲ್ಲಾ, ಅಂಚೆ ಇಲಾಖೆಯು ಎಟಿಎಂಗಳಲ್ಲಿ ಮಾಡಬಹುದಾದ ಉಚಿತ ವಹಿವಾಟುಗಳ ಸಂಖ್ಯೆಯನ್ನು ಕಡಿಮೆಗೊಳಿಸಿದ್ದು, ಪ್ರತೀ ವಹಿವಾಟಿನ ಮೇಲೆ ಶುಲ್ಕ ಪಾವತಿಗೆ ಮುಂದಾಗಿದೆ. ಇಂಡಿಯಾ ಪೋಸ್ಟ್‌ ಹೊರಡಿಸಿರುವ ಹೊಸ ಸುತ್ತೋಲೆಯ ಪ್ರಕಾರ, ಇಂಡಿಯಾ ಪೋಸ್ಟ್‌ನ ಸ್ವಂತ ಎಟಿಎಮ್‌ಗಳಲ್ಲಿ ಐದು ಉಚಿತ ವಹಿವಾಟುಗಳ ನಂತರ ಹಣಕಾಸು ವಹಿವಾಟುಗಳಿಗೆ ಪ್ರತಿ ವಹಿವಾಟಿಗೆ 10 ರೂಪಾಯಿ ಮತ್ತು ಜಿಎಸ್‌ಟಿ ವಿಧಿಸಲಾಗುತ್ತದೆ.

ಇಂಡಿಯಾ ಪೋಸ್ಟ್‌ನ ಸ್ವಂತ ಎಟಿಎಮ್‌ಗಳಲ್ಲಿ ಹಣಕಾಸೇತರ ವಹಿವಾಟುಗಳಿಗಾಗಿ, ಗ್ರಾಹಕರು ಐದು ಉಚಿತ ವಹಿವಾಟುಗಳ ನಂತರ ಪ್ರತಿ ವಹಿವಾಟಿಗೆ 5 ರೂಪಾಯಿ ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕುಗಳ ಎಟಿಎಂಗಳ ಸಂದರ್ಭದಲ್ಲಿ, ಮೆಟ್ರೋ ನಗರಗಳಲ್ಲಿ ಮೂರು ಉಚಿತ ವಹಿವಾಟುಗಳು ಅಥವಾ ಮೆಟ್ರೋ ಅಲ್ಲದ ನಗರಗಳಲ್ಲಿ ಐದು ಉಚಿತ ವಹಿವಾಟುಗಳ ನಂತರ, ಒಬ್ಬರು 8 ರೂ ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪೋಸ್ಟ್‌ ಆಫೀಸ್‌ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ : TAX PAYERS ಗೆ ಸಿಹಿ ಸುದ್ಧಿ: ʼತೆರಿಗೆ ರಿಟರ್ನ್ಸ್ʼ ಸಲ್ಲಿಸಲು ಅವಧಿ ವಿಸ್ತರಿಸಿದ ಕೇಂದ್ರ ಸರಕಾರ

ಇದನ್ನೂ ಓದಿ : 10 ನಿಮಿಷದಲ್ಲಿ ಉಚಿತವಾಗಿ ಸಿಗುತ್ತೆ ಪಾನ್‌ಕಾರ್ಡ್‌ : ದಾಖಲೆ ಇಲ್ಲದೇ ಪಾನ್‌ ಪಡೆಯೋದು ಹೇಗೆ ಗೊತ್ತಾ ?

( Big Alert for Post Office customer! ATM card transaction rules changing from October 1 )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular