ಬೆಂಗಳೂರು :ಬಿಪಿಎಲ್ ಕಾರ್ಡುದಾರರಿಗೆ ರಾಜ್ಯ ಸರಕಾರ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಅದ್ರಲ್ಲೂ ಸ್ವತಃ ಕಾರು ಹೊಂದಿದವರ ಕಾರ್ಡ್ ರದ್ದಾಗಲಿದೆ ಎಂದು ಖುದ್ದು ಸಚಿವ ಕೆ.ಎಚ್.ಮುನಿಯಪ್ಪ (Minister KH Muniappa) ಘೋಷಿಸಿದ್ದರು. ಆದರೆ ದುಡಿಮೆಯ ಸಲುವಾಗಿ ಯೆಲ್ಲೋ ಬೋರ್ಡ್ ಬಾಡಿಗೆ ಕಾರು ಹೊಂದಿದವರ ಬಿಪಿಎಲ್ ಕಾರ್ಡ್ ರದ್ದಾಗುವುದಿಲ್ಲ ಎನ್ನುವ ಮೂಲಕ ಬಿಗ್ ರಿಲೀಫ್ ಕೊಟ್ಟಿದ್ದಾರೆ.
ಸ್ವಂತ ಕಾರು ಹೊಂದಿದವರು ಬಿಪಿಎಲ್ ಕಾರ್ಡ್ ಬಳಕೆದಾರರಾಗಿದ್ದರೆ, ಇನ್ಮುಂದೆ ಅವರಿಗೆ ಬಿಪಿಎಲ್ ಕಾರ್ಡು ಸೌಲಭ್ಯ ದೊರೆಯುವುದಿಲ್ಲ. ಇಂತಹ ಬಿಪಿಎಲ್ ಕಾರ್ಡುದಾರರ ಪತ್ತೆಗೆ ಈಗಾಗಲೇ ಇಲಾಖೆ ಸಜ್ಜಾಗಿದೆ. ಆದರೆ ಯೆಲ್ಲೋ ಬೋರ್ಡ್ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್‌ನ್ನು ಹೊಂದಿರುತ್ತಾರೆ. ಯೆಲ್ಲೋ ಬೋರ್ಡ್ ಹೊಂದಿರುವವರು ದುಡಿಯುವ ಉದ್ದೇಶ ಇರುವುದರಿಂದ ಕಾರು ಖರೀದಿದಾರರಿಗೆ ಬಿಪಿಎಲ್ ಕಾರ್ಡ್ ರದ್ದಾಗಲ್ಲ. ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ : SBI fixed deposit rates : ಎಸ್‌ಬಿಐ ಗ್ರಾಹಕರ ಗಮನಕ್ಕೆ : ಈ ಎಫ್‌ಡಿ ಯೋಜನೆಯಲ್ಲಿ ಶೇ.7.1ರಷ್ಟು ಬಡ್ಡಿದರ ಲಭ್ಯ
ಇದನ್ನೂ ಓದಿ : IndiGo Airlines : ತಾಂತ್ರಿಕ ದೋಷ :ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಯೋಜನೆಯಡಿ ಅನ್ನಭಾಗ್ಯ ಯೋಜನೆಗಾಗಿ ಆಂಧ್ರ ಮತ್ತು ತೆಲಂಗಾಣ ಎರಡು ರಾಜ್ಯಗಳಿಂದ ಅಕ್ಕಿ ಪೂರೈಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮುಂದಿನ ತಿಂಗಳಲ್ಲಿ ಹಣದ ಬದಲು ಪಡಿತರ ಚೀಟಿದಾರರಿಗೆ 10 ಕೆ.ಜಿ ಅಕ್ಕಿ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಆಹಾರ ನಿಗಮದ ದರದಲ್ಲಿ ಅಕ್ಕಿ ನೀಡುವಂತೆ ಮನವು ಮಾಡಿದ್ದೇವೆ ಎಂದು ಹೇಳಿದರು.
The BPL card of those who own a rental car should not be cancelled: Minister KH Muniappa