ಮಂಗಳವಾರ, ಏಪ್ರಿಲ್ 29, 2025
Homebusinessಚಿನ್ನ ಖರೀದಿದಾರರಿಗೆ ಶಾಕಿಂಗ್‌ ನ್ಯೂಸ್‌ : ಮತ್ತೆ ಚಿನ್ನ, ಬೆಳ್ಳಿ ದರದಲ್ಲಿ ಬಾರೀ ಏರಿಕೆ

ಚಿನ್ನ ಖರೀದಿದಾರರಿಗೆ ಶಾಕಿಂಗ್‌ ನ್ಯೂಸ್‌ : ಮತ್ತೆ ಚಿನ್ನ, ಬೆಳ್ಳಿ ದರದಲ್ಲಿ ಬಾರೀ ಏರಿಕೆ

- Advertisement -

ನವದೆಹಲಿ : ಮಾರುಕಟ್ಟೆಯಲ್ಲಿ ಚಿನ್ನದ ದರ ನಿರಂತರವಾಗಿ ಏರಿಕೆ ಆಗುತ್ತಲೇ ಇದ್ದು, ಚಿನ್ನ ಖರೀದಿದಾರರಿಗೆ ಬೆಲೆ ಏರಿಕೆಯಿಂದ (Today Gold Prices Hike) ಬರೆ ಎಳೆದಂತೆ ಆಗಿದೆ. ಪ್ರತಿದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆ ಎಂದು ತಿಳಿಯುವ ಕುತೂಹಲ ಎಲ್ಲರಲ್ಲೂ ಇರುತ್ತದೆ. ಜನರು ಹೆಚ್ಚಾಗಿ ತಮ್ಮ ಆದಾಯದ ಸ್ವಲ್ಪ ಭಾಗವನ್ನು ಹೂಡಿಕೆಗಾಗಿ ಮೀಸಲಿಡುತ್ತಾರೆ. ಅದರಲ್ಲೂ ಚಿನ್ನ ಮೇಲೆ ಹೂಡಿಕೆ ಮಾಡಲು ಹೆಚ್ಚು ಆಸಕ್ತರಾಗಿರುತ್ತಾರೆ. ಇದೀಗ ಮದುವೆ ಸೀಸನ್‌ ಆರಂಭವಾಗಿದ್ದರಿಂದ, ಆಭರಣದ ಅಂಗಡಿಗಳಲ್ಲಿ ಜನ ಮುಗಿ ಬಿದ್ದಿದ್ದಾರೆ.

ಗುಡ್‌ ರಿಟರ್ನ್ಸ್‌ ಪ್ರಕಾರ, ಹಳದಿ ಲೋಹದ ಬೆಲೆ ಇಳಿಕೆಯಾದ ನಂತರ ಶುಕ್ರವಾರ, ಏಪ್ರಿಲ್‌ 21, 2023 ರಂದು ಚಿನ್ನದ ದರಗಳು ಏರಿಕೆಯಾಗಿದೆ. ಭಾರತದಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನ 56,050 ರೂ.ಗೆ ನಿನ್ನೆಯಿದ್ದ 55,850 ರೂ.ಗೆ ಮತ್ತು ಇಂದು 24 ಕ್ಯಾರೆಟ್ ಚಿನ್ನದ ಹತ್ತು ಗ್ರಾಂ ನಿನ್ನೆ 60,930 ರೂ.ಗೆ 61,150 ರೂ. ಆಗಿರುತ್ತದೆ.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ವಿವರ :

ನಗರದ ಹೆಸರು 22 ಕ್ಯಾರೆಟ್ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನದ ಬೆಲೆ

  • ಚೆನ್ನೈ ರೂ. 56,650 ರೂ. 61,800
  • ಮುಂಬೈ ರೂ. 56,050 ರೂ. 61,150
  • ದೆಹಲಿ ರೂ. 56,200 ರೂ. 61,310
  • ಕೋಲ್ಕತ್ತಾ ರೂ. 56,050 ರೂ. 61,150
  • ಬೆಂಗಳೂರು ರೂ. 56,100 ರೂ. 61,200
  • ಹೈದರಾಬಾದ್ ರೂ. 56,050 ರೂ. 61,150
  • ಸೂರತ್ ರೂ. 56,100 ರೂ. 61,200
  • ಪುಣೆ ರೂ. 56,050 ರೂ. 61,150
  • ವಿಶಾಖಪಟ್ಟಣಂ ರೂ. 56,050 ರೂ. 61,150

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ) :

  • ಬೆಂಗಳೂರು : ರೂ. 8,100
  • ಚೆನ್ನೈ : ರೂ. 8,100
  • ಮುಂಬೈ : ರೂ. 7,740
  • ದೆಹಲಿ : ರೂ. 7,740
  • ಕೋಲ್ಕತಾ : ರೂ. 7,740
  • ಕೇರಳ : ರೂ. 8,100
  • ಅಹ್ಮದಾಬಾದ್ : ರೂ. 7,740
  • ಜೈಪುರ್ : ರೂ. 7,740
  • ಲಕ್ನೋ : ರೂ. 7,740
  • ಭುವನೇಶ್ವರ್: ರೂ. 8,100

ಇದನ್ನೂ ಓದಿ : ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನದ ದರದಲ್ಲಿ ಬಾರೀ ಇಳಿಕೆ

ಇದನ್ನೂ ಓದಿ : ವಿಂಡ್ ಫಾಲ್ ತೆರಿಗೆ ಏರಿಕೆ : ಪೆಟ್ರೋಲ್, ಡಿಸೇಲ್ ದರಕ್ಕೂ ತಟ್ಟುತ್ತಾ ಎಫೆಕ್ಟ್ ?

ಸ್ಥಳೀಯ ಬೆಲೆಗಳು ಇಲ್ಲಿ ತೋರಿಸಿದ್ದಕ್ಕಿಂತ ಭಿನ್ನವಾಗಿರಬಹುದು. ಪಟ್ಟಿಮಾಡಲಾದ ಕೋಷ್ಟಕವು TDS, GST ಮತ್ತು ಇತರ ತೆರಿಗೆಗಳನ್ನು ಸೇರಿಸದೆಯೇ ಡೇಟಾವನ್ನು ತೋರಿಸುತ್ತದೆ. ಮೇಲೆ ತಿಳಿಸಿದ ಪಟ್ಟಿಯು ಭಾರತದಾದ್ಯಂತ ವಿವಿಧ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನ ಮತ್ತು 24-ಕ್ಯಾರೆಟ್ ಚಿನ್ನಕ್ಕೆ ದಿನದ ಚಿನ್ನದ ಬೆಲೆಗಳು ಆಗಿದೆ.

Today Gold Prices Hike: Shocking News for Gold Buyers: Again the price of gold and silver has increased

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular