News Next Kannada Desk : ವಿಶ್ವದ ಪ್ರಮುಖ ಸಾಮಾಜಿಕ ಜಾಲತಾಣ ಟ್ವೀಟರ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಕೋಟ್ಯಾಂತರ ಮಂದಿ ಟ್ವಿಟರ್ ಬಳಕೆ ಮಾಡುತ್ತಿದ್ದು, ಖಾತೆಯನ್ನು ಹೊಂದಿದ್ದಾರೆ. ಆದ್ರೀಗ ಟ್ವಿಟರ್ ಹ್ಯಾಕ್ (Twitter hacked) ಆಗಿದ್ದು, ಬರೋಬ್ಬರಿ , 200 ಮಿಲಿಯನ್ ಬಳಕೆದಾರರ ಇಮೇಲ್ ವಿಳಾಸ ಸೋರಿಕೆಯಾಗಿದೆ ಅನ್ನೋ ವಿಷಯ ಬಹಿರಂಗವಾಗಿದೆ.
ಟ್ವಿಟರ್ ಹ್ಯಾಕ್ ಆಗಿರುವ ಕುರಿತು ಇಸ್ರೇಲಿ ಸೈಬರ್ ಸೆಕ್ಯುರಿಟಿ-ಮೇಲ್ವಿಚಾರಣಾ ಸಂಸ್ಥೆ ಹಡ್ಸನ್ ರಾಕ್‌ನ ಸಹ-ಸಂಸ್ಥಾಪಕ ಅಲೋನ್ ಗಾಲ್ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ನಾನು ನೋಡಿದ ಅತ್ಯಂತ ಮಹತ್ವದ ಸೋರಿಕೆಗಳಲ್ಲಿ ಒಂದಾಗಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಯಾವಾಗ ಈ ರೀತಿಯ ಹ್ಯಾಕ್ ನಡೆದಿದೆ ಅನ್ನೋ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ.
ಡಿಸೆಂಬರ್ 24 ರಂದು ಸಾಮಾಜಿಕ ಮಾಧ್ಯಮದಲ್ಲಿ ಗಾಲ್ ಮೊದಲ ಬಾರಿಗೆ ಪೋಸ್ಟ್ ಮಾಡಿದ ವರದಿಯ ಬಗ್ಗೆ ಟ್ವಿಟರ್ ಯಾವುದೇ ರೀತಿಯಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಯಾವ ದಿನಾಂಕದಿಂದ ಉಲ್ಲಂಘನೆ ಆಗಿದೆ ಅನ್ನುವ ಕುರಿತು ಪ್ರತಿಕ್ರಿಯಿಸಿಲ್ಲ. ಒಂದೊಮ್ಮೆ ಹ್ಯಾಕ್ ಆಗಿದ್ದರೆ, ತನ್ನ ಖಾತೆದಾರರ ಭದ್ರತೆಗಾಗಿ ಯಾವ ಕ್ರಮವನ್ನು ಕೈಗೊಂಡಿದೆ ಎಂಬ ಬಗ್ಗೆಯೂ ಮಾಹಿತಿಯನ್ನು ನೀಡಿಲ್ಲ. ಆದರೆ ಬುಧವಾರ ಡೇಟಾ ಕಾಣಿಸಿಕೊಂಡ ಹ್ಯಾಕರ್ ಫೋರಂನ ಸ್ಕ್ರೀನ್‌ಶಾಟ್‌ಗಳು ಆನ್‌ಲೈನ್‌ನಲ್ಲಿ ಪ್ರಸಾರವಾಗಿವೆ.
ಉಲ್ಲಂಘನೆಯ ಹಿಂದೆ ಹ್ಯಾಕರ್ ಅಥವಾ ಹ್ಯಾಕರ್‌ಗಳ ಗುರುತು ಅಥವಾ ಸ್ಥಳದ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.ಇದು 2021 ರ ಹಿಂದೆಯೇ ನಡೆದಿರಬಹುದು, ಇದು ಕಳೆದ ವರ್ಷ ಎಲೋನ್ ಮಸ್ಕ್ ಕಂಪನಿಯ ಮಾಲೀಕತ್ವವನ್ನು ತೆಗೆದುಕೊಳ್ಳುವ ಮೊದಲು ನಡೆದಿರಬಹುದು ಎನ್ನಲಾಗುತ್ತಿದೆ.
400 ಮಿಲಿಯನ್ ಇಮೇಲ್ ವಿಳಾಸಗಳು ಮತ್ತು ಫೋನ್ ಸಂಖ್ಯೆಗಳನ್ನು ಕಳವು ಮಾಡಲಾಗಿದೆ ಎಂದು ಹೇಳಲಾಗಿದೆ. ಅಲ್ಲದೇ ಹ್ಯಾಕ್ ಯಾವ ಮಟ್ಟದಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಟ್ವಿಟರ್ ತನ್ನ ಯುರೋಪಿಯನ್ ಪ್ರಧಾನ ಕಛೇರಿಯನ್ನು ಹಾಗೂ ಐರ್ಲೆಂಡ್‌ನಲ್ಲಿರುವ ಡೇಟಾ ಪ್ರೊಟೆಕ್ಷನ್ ಕಮಿಷನ್ ಮತ್ತು U.S. ಫೆಡರಲ್ ಟ್ರೇಡ್ ಕಮಿಷನ್ ಕ್ರಮವಾಗಿ ಯುರೋಪಿಯನ್ ಡೇಟಾ ಸಂರಕ್ಷಣಾ ನಿಯಮಗಳು ಮತ್ತು U.S. ಒಪ್ಪಿಗೆಯ ಆದೇಶದ ಅನುಸರಣೆಗಾಗಿ ಎಲೋನ್ ಮಸ್ಕ್-ಮಾಲೀಕತ್ವದ ಕಂಪನಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.
ಇದನ್ನೂ ಓದಿ : ಮತ್ತೆ ಏರಿಕೆ ಕಂಡ ಅಡಿಕೆ ಬೆಲೆ: ಮಾರುಕಟ್ಟೆಯಲ್ಲಿ ಇಂದಿನ ದರವೆಷ್ಟು ಗೊತ್ತಾ?
ಇದನ್ನೂ ಓದಿ : Amazon mass lay off: ಬಿಗ್ ಶಾಕ್ ನೀಡಿದ ಅಮೆಜಾನ್: ಬರೋಬ್ಬರಿ 18,000 ಉದ್ಯೋಗಿಗಳ ವಜಾ
Twitter hacked 200 million Twitter users email addresses leaked