Union Budget 2024 : ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಚೊಚ್ಚಲ ಬಜೆಟ್ 2024 ಮಂಡಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿದ್ಯಾರ್ಥಿಗಳು, ಯುವಜನತೆಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದಾರೆ. ಇನ್ಮುಂದೆ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂಪಾಯಿ ಸಾಲ ದೊರೆಯಲಿದ್ದು, ಮುದ್ರಾ ಸಾಲದ ಮೊತ್ತವನ್ನು 20 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಏಳನೇ ಬಾರಿಗೆ ಬಜೆಟ್ ಮಂಡನೇ ಮಾಡುವ ಮೂಲಕ ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಭಾರತದ ಮೊದಲ ಹಣಕಾಸು ಸಚಿವೆ ಎನಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸರಕಾರದಿಂದ 10 ಲಕ್ಷ ರೂಪಾಯಿ ಸಾಲ ಸೌಲಭ್ಯ ಒದಗಿಸುವ ಕುರಿತು ಘೋಷಣೆ ಮಾಡಿದ್ದಾರೆ. ಪ್ರತೀ ವರ್ಷ 1 ಲಕ್ಷಕ್ಕೂ ಅಧೀಕ ವಿದ್ಯಾರ್ಥಿಗಳು ೧೦ ಲಕ್ಷ ರೂಪಾಯಿಯ ಸಾಲ ಸೌಲಭ್ಯವನ್ನು ಪಡೆಯಲಿದ್ದಾರೆ.
ಇದನ್ನೂ ಓದಿ : 7ನೇ ವೇತನ ಆಯೋಗದ ಶಿಫಾರಸ್ಸು ಅಗಸ್ಟ್ 1ರಿಂದಲೇ ಜಾರಿ : ಸರಕಾರಿ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್
ಸಣ್ಣ ಮತ್ತು ಮದ್ಯಮ ವ್ಯವಹಾರ ನಡೆಸುವವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಿಜೆಟ್‌ನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಎಂಎಸ್ಎಂಇಗಳಿಗಾಗಿ ಟರ್ಮ್‌ಲೋನ್ ಸುಲಭಗೊಳಿಸಲು ಕ್ರೆಡಿಟ್ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಲಾಗಿತ್ತಿದ್ದು, ಸ್ವಯಂ ಹಣಕಾಸು ಗ್ಯಾರಂಟಿ ನಿಧಿಯು ಪ್ರತೀ ಅರ್ಜಿದಾರರಿಗೆ 100 ಕೋಟಿ ರೂಪಾಯಿ ವರೆಗೂ ಸಹಾಯವನ್ನು ಒದಗಿಸಲಿದೆ.
ಇದನ್ನೂ ಓದಿ : ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಿಗಲಿದೆ 5 ಲಕ್ಷ ರೂ. ಯೋಜನೆ : ಅರ್ಜಿ ಸಲ್ಲಿಸುವುದು ಹೇಗೆ ?
ಮುದ್ರಾ ಯೋಜನೆಯ ತರುಣ್ ಯೋಜನೆಯ ಅಡಿಯಲ್ಲಿ ಸಾಳ ಪಡೆದು ಯಶಸ್ವಿಯಾಗಿ ಮರು ಪಾವತಿ ಮಾಡಿದವರಿಗೆ ಮುದ್ರಾ ಸಾಲದ ಮಿತಿಯನ್ನು ಪ್ರಸ್ತುತ ೧೦ ಲಕ್ಷ ರೂಪಾಯಿಯಿಂದ 20 ಲಕ್ಷಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಅಲ್ಲದೇ ಮಹಿಳಾ ಉದ್ಯೋಗಿಗಳಿಗೆ ಉತ್ತೇಜನ ನೀಡು ಸಲುವಾಗಿ ವಿಶೇಷ ಯೋಜನೆಯನ್ನು ಘೋಷಣೆ ಮಾಡಿದೆ.
ಇದನ್ನೂ ಓದಿ : 7th Pay Commission | ಸರಕಾರಿ ನೌಕರರಿಗೆ ವೇತನ ಹೆಚ್ಚಳ : ಕರ್ನಾಟಕ ಸರಕಾರದಿಂದ ಅಧಿಕೃತ ಆದೇಶ, ವೇತನದಲ್ಲಿ ಎಷ್ಟು ಹೆಚ್ಚಳ ?

1 lakh students will get Rs 10 lakh. Mudra loan amount increased to 20 lakhs