UPI New Rules: ಯುಪಿಐ ಬಳಕೆದಾರರಿಗೆ ಬಿಗ್ ಅಲರ್ಟ್ : ಸೈಬರ್​ ವಂಚನೆ ತಡೆಗೆ NPCI ಹೊಸ ರೂಲ್ಸ್‌

RBI 10 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ವರ್ಗಾವಣೆಗೆ 1 ಗಂಟೆ Waiting period ತರಲು ಯೋಚಿಸುತ್ತಿದೆ. ಬ್ಯಾಂಕುಗಳು Popup Alert ಪದ್ಧತಿಯೇ ಹೆಚ್ಚು ಸೂಕ್ತವೆಂದು ಅಭಿಪ್ರಾಯಪಟ್ಟಿವೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
UPI New Rules NPCI
UPI New Rules NPCI

UPI New Rules: : ದೇಶದಲ್ಲಿ ಡಿಜಿಟಲ್ ನಗದು ವರ್ಗಾವಣೆ ದಿನದಿಂದ ದಿನಕ್ಕೆ ಹೊಸ ದಾಖಲೆ ಬರೆಯುತ್ತಿದ್ದರೂ, ಅದರೊಂದಿಗೆ ಸೈಬರ್ ಅಪರಾಧಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಯುಪಿಐ ಬಳಕೆದಾರರಿಗೆ ಹೊಸ ರೂಲ್ಸ್‌ ಅನ್ನು ಎನ್‌ಪಿಸಿಐ ಜಾರಿ ಮಾಡಿದೆ.

ಈ ಹಿನ್ನೆಲೆಯಲ್ಲಿ ಆನ್‌ಲೈನ್ ಆಪ್‌ಗಳ ಮೂಲಕ ಸಾರ್ವಜನಿಕರ ಹಣ ಲೂಟಿಯಾಗುವುದನ್ನು ತಪ್ಪಿಸಲು ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ಒಟ್ಟಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಎನ್‌ಪಿಸಿಐ ಮಂಡಳಿಗೆ ಮಹತ್ವದ ಹೊಸ ಯೋಜನೆಯೊಂದನ್ನು ಸಿದ್ಧಪಡಿಸಿ ಸಲ್ಲಿಸಿವೆ.

ಬ್ಯಾಂಕುಗಳು ನೀಡಿರುವ ಈ ವಿನೂತನ ಪ್ರಸ್ತಾವನೆಯ ಪ್ರಕಾರ, ಇನ್ಮುಂದೆ ಗ್ರಾಹಕರು ಅಸಹಜ ಅಥವಾ ಸಂಶಯಾಸ್ಪದ ರೀತಿಯಲ್ಲಿ ಹಣ ವರ್ಗಾವಣೆ ಮಾಡಲು ಮುಂದಾದಾಗ ಮೊಬೈಲ್ ಪರದೆಯ ಮೇಲೆ ವಿಶೇಷ ಎಚ್ಚರಿಕೆಯ ಸಂದೇಶವೊಂದು ಮೂಡಲಿದೆ.

ಇದರಲ್ಲಿ ಹಣ ಕಳುಹಿಸುವ ಪ್ರಕ್ರಿಯೆಯನ್ನು ಮುಂದುವರಿಸಲು 'ಹೌದು' ಅಥವಾ 'ಇಲ್ಲ' ಎನ್ನುವ ಎರಡು ಆಯ್ಕೆಗಳು ಇರಲಿವೆ. ಬಳಕೆದಾರರು ಸಮ್ಮತಿ ನೀಡಿದರೆ ಮಾತ್ರ ವಹಿವಾಟು ಪೂರ್ಣಗೊಳ್ಳಲಿದ್ದು, ನಿರಾಕರಿಸಿದರೆ ತಕ್ಷಣವೇ ರದ್ದಾಗಲಿದೆ. ಒಂದು ವೇಳೆ ಯಾವುದೇ ಪ್ರತಿಕ್ರಿಯೆ ನೀಡದಿದ್ದಲ್ಲಿ, ಕಳುಹಿಸಿದ ಮೊತ್ತವು ಸುಮಾರು ಒಂದು ಗಂಟೆಯ ವಿಳಂಬದ ನಂತರ ಎದುರಿನವರ ಖಾತೆಗೆ ಜಮೆಯಾಗಲಿದೆ.

ಇದರಿಂದಾಗಿ ಸಾರ್ವಜನಿಕರು ಅವಸರದಲ್ಲಿ ಅಪರಿಚಿತರ ಖಾತೆಗೆ ಹಣ ಹಾಕಿ ಮೋಸ ಹೋಗುವುದನ್ನು ತಡೆಯಬಹುದಾಗಿದೆ.

ಆರ್​ಬಿಐ ಹತ್ತು ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ವರ್ಗಾವಣೆಗೆ ಒಂದು ಗಂಟೆಯ ಕಾಯುವಿಕೆ ಸಮಯವನ್ನು ತರಲು ಯೋಚಿಸುತ್ತಿದೆಯಾದರೂ, ಬ್ಯಾಂಕುಗಳು ಈ ಪಾಪ್-ಅಪ್ ಅಲರ್ಟ್ ಪದ್ಧತಿಯೇ ಹೆಚ್ಚು ಸೂಕ್ತವೆಂದು ಅಭಿಪ್ರಾಯಪಟ್ಟಿವೆ.

ಈ ಕಟ್ಟುನಿಟ್ಟಿನ ನಿಯಮವು ಸಾಮಾನ್ಯ ದೈನಂದಿನ ಪಾವತಿಗಳಿಗೆ ಅನ್ವಯಿಸುವುದಿಲ್ಲ. ಬದಲಿಗೆ ಹಿಂದೆಂದೂ ಹಣ ಕಳುಹಿಸದ ಅಪರಿಚಿತ ಹೊಸ ಖಾತೆಗಳಿಗೆ ಹಣ ವರ್ಗಾಯಿಸುವಾಗ, ಸೈಬರ್ ವಂಚಕರು ಬಳಸುವ ನಕಲಿ ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಿದಾಗ ಹಾಗೂ ತಡರಾತ್ರಿಯ ಅವಧಿಯಲ್ಲಿ ದೊಡ್ಡ ಮೊತ್ತದ ವಹಿವಾಟು ನಡೆಸುವಾಗ ಮಾತ್ರ ಈ ಭದ್ರತಾ ವ್ಯವಸ್ಥೆಯು ಸಕ್ರಿಯಗೊಳ್ಳಲಿದೆ. ಈ ನೂತನ ತಂತ್ರಜ್ಞಾನವು ಸೈಬರ್ ಜಾಲದ ಕಳ್ಳರಿಗೆ ದೊಡ್ಡ ಮಟ್ಟದ ಬ್ರೇಕ್ ಹಾಕುವ ನಿರೀಕ್ಷೆಯಿದೆ.

Topics

ಸಂಬಂಧಿತ ಸುದ್ದಿಗಳು