ಭಾನುವಾರ, ಏಪ್ರಿಲ್ 27, 2025
HomebusinessUPI Payment In Gulf Countries : ಗಲ್ಫ್ ರಾಷ್ಟ್ರಗಳಿಗೂ ವಿಸ್ತರಣೆಯಾಗಲಿದೆ UPI ಪಾವತಿ :...

UPI Payment In Gulf Countries : ಗಲ್ಫ್ ರಾಷ್ಟ್ರಗಳಿಗೂ ವಿಸ್ತರಣೆಯಾಗಲಿದೆ UPI ಪಾವತಿ : ಅನಿವಾಸಿಗರಿಗೆ ಹಣ ಪಾವತಿ ಇನ್ನು ಸುಲಭ

- Advertisement -

ನವದೆಹಲಿ : (UPI Payment In Gulf Countries) ವಿದೇಶಗಳಲ್ಲಿರುವ ಭಾರತೀಯರಿಗೆ ಸ್ವದೇಶಕ್ಕೆ ಹಣ ವರ್ಗಾವಣೆ ಮಾಡುವುದು ದುಸ್ಸಾಹಸ. ತಮ್ಮ ದುಡಿಮೆಯ ಹಣ ಕಳುಹಿಸಬೇಕಾದ್ರೂ ಕೂಡ ನಿಗದಿತ ಶುಲ್ಕ ಪಾವತಿ ಮಾಡಬೇಕಾಗಿದೆ. ಆದ್ರೆ ಅನಿವಾಸಿ ಭಾರತೀಯರಿಗೆ ಗುಡ್‌ನ್ಯೂಸ್‌ ಇಲ್ಲಿದೆ. ಭಾರತ ಸರಕಾರ ತನ್ನ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಸೇವೆಯನ್ನು ಗಲ್ಪ್‌ ರಾಷ್ಟ್ರಗಳಿಗೆ ವಿಸ್ತರಣೆ ಮಾಡಲು ಮುಂದಾಗಿದೆ. ಈಗಾಗಲೇ ಬಹ್ರೇನ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಮಧ್ಯಪ್ರಾಚ್ಯದ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಸದ್ಯ ಚರ್ಚೆಗಳು ಆರಂಭಿಕ ಹಂತದಲ್ಲಿದ್ದು, ಹಲವು ರಾಷ್ಟ್ರಗಳು ಮಾತುಕತೆಗೆ ಒಲವು ತೋರಿವೆ ಎಂದು ರಾಷ್ಟ್ರೀಯ ದೈನಿಕ ಮಿಂಟ್‌ ವರದಿ ಮಾಡಿದೆ.

ಲಕ್ಷಾಂತರ ಮಂದಿ ಭಾರತೀಯರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅದ್ರಲ್ಲೂ ಅರಬ್‌ ದೇಶಗಳಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮವು (NPCI) ಗಡಿಯಾಚೆಗಿನ ರವಾನೆಗಾಗಿ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವರ್ಗಾವಣೆ ವ್ಯವಸ್ಥೆಯನ್ನು ಸ್ಥಾಪಿಸಲು ಗಲ್ಫ್ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಯುಪಿಐ (UPI) ಬಳಸಿಕೊಂಡು ಭಾರತದ ಗಡಿಯಾಚೆಗಿನ ಹಣಕಾಸಿನ ವರ್ಗಾವಣೆಯನ್ನು ಸುಲಭವಾಗಿ ಮಾಡಲು NPCI ಕೆಲವು ಗಲ್ಫ್ ರಾಷ್ಟ್ರಗಳೊಂದಿಗೆ ಚರ್ಚೆ ಆರಂಭಿಸಿದೆ. ಇದು ಪ್ರಾಥಮಿಕವಾಗಿ ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ದೇಶದ ಕೇಂದ್ರ ಬ್ಯಾಂಕ್ ಸಹಯೋಗ ಮತ್ತು ನಮ್ಮ ಭಾರತೀಯ ಮಿಷನ್ ಕಚೇರಿಗಳಿಂದ ಚರ್ಚೆಗಳನ್ನು ಸುಗಮಗೊಳಿಸಲಾಗಿದೆ ಎಂದು ಎನ್‌ಪಿಸಿಐನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ದಿಲೀಪ್ ಅಸ್ಬೆ ತಿಳಿಸಿದ್ದಾರೆ.

ಭಾರತದಲ್ಲಿ ಯುಪಿಐ ಪಾವತಿ ಸಣ್ಣವಹಿವಾಟುಗಳನ್ನು ನಡೆಸುವವರಿಗೆ ಹೆಚ್ಚು ಅನುಕೂಲಕರವಾಗಿದೆ. ಇದೀಗ ವಿಶ್ವದಾದ್ಯಂತ ಯುಪಿಐ ಪಾವತಿಯನ್ನು ವಿಸ್ತರಣೆ ಮಾಡಲು ಯೋಜನೆಯನ್ನು ರೂಪಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಭಾರತ ಮತ್ತು ಸಿಂಗಾಪುರವು ತಮ್ಮ ರಾಷ್ಟ್ರೀಯ ಪಾವತಿ ವ್ಯವಸ್ಥೆಗಳನ್ನು $1 ಶತಕೋಟಿಗೂ ಹೆಚ್ಚು ವಾರ್ಷಿಕ ರವಾನೆಗಾಗಿ ಕಡಿಮೆ-ವೆಚ್ಚದ ಸುರಕ್ಷಿತ ಮಾರ್ಗದಲ್ಲಿ ವ್ಯವಹಾರವನ್ನು ನಡೆಸಿದೆ.

ಭೂತಾನ್ 2021 ರಲ್ಲಿ UPI ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಈ ಮೂಲಕ ಯುಪಿಐ ಅಳವಡಿಸಿಕೊಂಡ ಮೊದಲ ದೇಶ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಭೂತಾನ್‌ ನಂತರದಲ್ಲಿ 2022 ರಲ್ಲಿ ನೇಪಾಳ ಕೂಡ ಯುಪಿಐ ವಾಪತಿಯನ್ನು ಅಳವಡಿಸಿಕೊಂಡಿದೆ. ಅಲ್ಲದೇ 2021 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಭಾರತೀಯ ಪ್ರಯಾಣಿಕರಿಗೆ ಯುಪಿಐ ಖಾತೆಗಳ ಮೂಲಕ ಪಾವತಿಗಳನ್ನು ಮಾಡಲು ಅನುಕೂಲ ಕಲ್ಪಿಸಿಕೊಟ್ಟಿದೆ. ಅಲ್ಲದೇ ಯುಎಇ ಜೊತೆಗೆ ಡಿಜಿಟಲ್‌ ಪಾವತಿಗಳ ಕುರಿತು ಭಾರತ ಸರಕಾರ ಮಾತುಕತೆಯನ್ನು ಮುಂದುವರಿಸಿದೆ.

ಯುಪಿಐ ಯಶಸ್ವಿಯಾದ್ರೆ ಸರಕಾರವು ಅನಿವಾಸಿ ಭಾರತೀಯರಿಗೆ ಅಂತರಾಷ್ಟ್ರೀಯ ಮೊಬೈಲ್‌ ಸಂಖ್ಯೆಗಳ ಮೂಲಕ ಪಾವತಿಗೆ ಅವಕಾಶ ನೀಡಲಿದೆ. ಎನ್‌ಪಿಸಿಐ ಸಿಂಗಾಪುರ್, ಆಸ್ಟ್ರೇಲಿಯಾ, ಕೆನಡಾ, ಹಾಂಗ್ ಕಾಂಗ್, ಓಮನ್, ಕತಾರ್, ಅಮೇರಿಕಾ, ಸೌದಿ ಅರೇಬಿಯಾ, ಯುಎಇ ಮತ್ತು ಇಂಗ್ಲೆಂಡ್‌ನಿಂದ ಎನ್‌ಆರ್‌ಐಗಳು ಭಾರತದಲ್ಲಿ ತಂಗಿದ್ದಾಗ ಅಂತರಾಷ್ಟ್ರೀಯ ಸಂಖ್ಯೆಗಳಲ್ಲಿ ಯುಪಿಐ ಪಾವತಿಯನ್ನು ಮಾಡಬಹುದಾಗಿದೆ.

ಇದನ್ನೂ ಓದಿ : PAN Card Address Change : ನಿಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ಪ್ಯಾನ್ ವಿಳಾಸ ಹೀಗೆ ಬದಲಾಯಿಸಿ : ಇಲ್ಲಿದೆ ಹಂತ ಹಂತ ಮಾರ್ಗದರ್ಶಿ

ಯುಪಿಐ ದೇಶದ ಆರ್ಥಿಕತೆ ಮತ್ತು ಸಬಲೀಕರಣಕ್ಕೆ ಸಾಧನವಾಗಬೇಕು. ಇದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ನಮ್ಮ ಹಣಕಾಸು ಸಂಸ್ಥೆಗಳು ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಫಿನ್‌ಟೆಕ್‌ಗಳ ಜೊತೆಗೆ ಹೆಚ್ಚು ಪಾಲುದಾರಿಕೆಯನ್ನು ಹೊಂದಿರಬೇಕು ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದಿನ ಭಾಷಣದಲ್ಲಿ ತಿಳಿಸಿದ್ದರು. ಇದೀಗ ಅದೇ ಹಾದಿಯಲ್ಲಿ ಭಾರತ ಸಾಗುತ್ತಿದೆ. ಅನಿವಾಸಿ ಭಾರತೀಯರಿಗೆ ಯುಪಿಐ ಪಾವತಿ ಅವಕಾಶ ಸಿಕ್ಕರೆ ಭಾರತದಲ್ಲಿನ ಹಣಕಾಸಿನ ವಟಿಹಾಟು ಇನ್ನಷ್ಟು ಹೆಚ್ಚಳವಾಗಲಿದೆ. ಆರಂಭಿಕ ಹಂತದಲ್ಲಿ ಅರಬ್‌ ದೇಶಗಳಲ್ಲಿ ಬ್ಯಾಂಕ್‌ ಮೂಲಕ ಯುಪಿಐ ವ್ಯವಹಾರಕ್ಕೆ ಅವಕಾಶ ದೊರೆಯಲಿದ್ದು, ನಂತರದಲ್ಲಿ ಮೊಬೈಲ್‌ ಸಂಖ್ಯೆಗಳಿಗೆ ವರ್ಗಾವಣೆಗೆ ಅವಕಾಶ ದೊರೆಯುವ ಸಾಧ್ಯತೆಯಿದೆ.

UPI Payment In Gulf Countries: UPI Payment Will Be Expanded To Gulf Countries: Payment For Non Residents Is Easier Now

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular