Gruha Lakshmi Yojana : ಬೆಂಗಳೂರು : ಕರ್ನಾಟಕದ ಕಾಂಗ್ರೆಸ್ ಸರಕಾರ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ ಹಣಕ್ಕಾಗಿ ಗೃಹಿಣಿಯರು ಕಾದು ಕುಳಿತಿದಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ 11 ಮತ್ತು 12 ನೇ ಕಂತಿನ ಹಣ ಕೈ ಸೇರಿಬೇಕಾಗಿದೆ. ಈ ನಡುವಲ್ಲೇ ಗೃಹಲಕ್ಷ್ಮೀ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.

ರಾಜ್ಯದಲ್ಲಿನ ಮಹಿಳೆಯರ ಆರ್ಥಿಕ ಸ್ವಾವಲಂಭನೆಗಾಗಿ ಕರ್ನಾಟಕದ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆ ಯನ್ನು ಜಾರಿಗೊಳಿಸಿದೆ. ಪ್ರತೀ ಕುಟುಂಬದ ಯಜಮಾನಿಯ ಖಾತೆಗೆ ಪ್ರತೀ ತಿಂಗಳು 2 ಸಾವಿರ ರೂಪಾಯಿ ಹಣವನ್ನು (DBT) ವರ್ಗಾವಣೆ ಮಾಡಲಾಗುತ್ತಿದೆ. ಬಹುತೇಕ ಮಹಿಳೆಯರು 10 ಕಂತುಗಳ ಹಣವನ್ನು ಪಡೆದುಕೊಂಡಿದ್ದಾರೆ.
ಇದೀಗ 11 ಮತ್ತು 12 ನೇ ಕಂತಿನ ಹಣಕ್ಕಾಗಿ ಗೃಹಿಣಿಯರು ಕಾಯುತ್ತಿದ್ದಾರೆ. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತೀ ತಿಂಗಳ 15 ನೇ ತಾರೀಕಿನ ಒಳಗಾಗಿ ಹಣವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಹದಿನೈದನೇ ತಾರೀಕು ಕಳೆದು ಹತ್ತು ದಿನಗಳೇ ಕಳೆದರೂ ಕೂಡ ಇದುವರೆಗೂ ಮಹಿಳೆಯ ಖಾತೆಗೆ ಹಣ ಜಮೆ ಆಗಿಲ್ಲ.
ಇದನ್ನೂ ಓದಿ : ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಿಗಲಿದೆ 5 ಲಕ್ಷ ರೂ. ಯೋಜನೆ : ಅರ್ಜಿ ಸಲ್ಲಿಸುವುದು ಹೇಗೆ ?
ಗೃಹಲಕ್ಷ್ಮೀ ಯೋಜನೆಯ ಹಣ ಬಂದಿದ್ಯಾ ಇಲ್ಲವೋ ಅಂತಾ ಚೆಕ್ ಮಾಡೋದಕ್ಕೆ ಗೃಹಿಣಿಯರು ಬ್ಯಾಂಕಿಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ಇನ್ನೊಂದೆಡೆ ಯಲ್ಲಿ ಬ್ಯಾಂಕ್ ಸಿಬ್ಬಂದಿ ಕೂಡ ಗೃಹಿಣಿಯರಿಗೆ ಉತ್ತರ ಕೊಟ್ಟು ಸುಸ್ತಾಗಿದ್ದಾರೆ. ಆದರೆ ಸರಕಾರ ಮಾತ್ರ ಯಾವ ದಿನಾಂಕದಂದು ಗೃಹಲಕ್ಷ್ಮೀ ಯೋಜನೆ ಯ ಹಣ ಬಿಡುಗಡೆ ಆಗಲಿದೆ ಅನ್ನೋ ಕುರಿತು ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ.

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಕುರಿತು ಮಾಧ್ಯಮಗಳ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಸಂಪನ್ಮೂಲ ಕ್ರೂಢೀಕರಣ ಮಾಡಲಾಗುತ್ತಿದೆ. ಕೆಲವೊಂದು ತಿಂಗಳು ಎರಡು ತಿಂಗಳ ಹಣವನ್ನು ಒಟ್ಟಿಗೆ ಹಾಕಲಾಗಿದೆ. ಈ ಬಾರಿಯೂ ಹಾಗೆಯೇ ಮಾಡಲಾಗುವುದು. ಆದರೆ ಯಾವುದೇ ಕಾರಣಕ್ಕೂ ಯೋಜನೆಯನ್ನು ರದ್ದು ಮಾಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ : 300 ಯೂನಿಟ್ ಉಚಿತ ವಿದ್ಯುತ್ : ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಸೂರ್ಯಘರ್ ಯೋಜನೆ ಘೋಷಣೆ
ಉಪಮುಖ್ಯಮಂತ್ರಿಯವರು ನೀಡಿರುವ ಮಾಹಿತಿಯ ಪ್ರಕಾರ, ಗೃಹಲಕ್ಷ್ಮೀ ಯೋಜನೆಯ ಹಣ ಈ ತಿಂಗಳ ಅಂತ್ಯದ ಒಳಗೆ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಪ್ರತೀ ತಿಂಗಳು 2000 ರೂಪಾಯಿಯಂತೆ ವಾರ್ಷಿಕ 24 ಸಾವಿ ರೂಪಾಯಿಯನ್ನು ಪ್ರತೀ ಕುಟುಂಬದ ಮಹಿಳೆಯರಿಗೆ ನೀಡುವುದು ಸರಕಾರ ಉದ್ದೇಶವಾಗಿದೆ.
ಇದನ್ನೂ ಓದಿ : Union Budget 2024 : 1 ಲಕ್ಷ ವಿದ್ಯಾರ್ಥಿಗಳಿಗೆ ಸಿಗಲಿದೆ 10 ಲಕ್ಷ ರೂ. : ಮುದ್ರಾ ಸಾಲದ ಮೊತ್ತ 20 ಲಕ್ಷಕ್ಕೆ ಏರಿಕೆ
ಲೋಕಸಭಾ ಚುನಾವಣೆಯ ಕಳೆದ ನಂತರದಲ್ಲಿ ಗೃಹಿಣಿಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಕ್ಕಿಲ್ಲ. ಇದರಿಂದಾಗಿ ಯೋಜನೆಯ ಫಲಾನುಭವಿಗಳು ಹೈರಾಣಾಗಿದ್ದಾರೆ. ಮಹಿಳೆಯರನ್ನು ಪದೇ ಪದೇ ಬ್ಯಾಂಕಿಗೆ ಅಲೆಯುವಂತೆ ಮಾಡುವ ಬದಲು ಯಾವ ದಿನಾಂಕದಂದು ಹಣ ವರ್ಗಾವಣೆ ಆಗುತ್ತೆ ಅನ್ನೋ ಕುರಿತು ಮಾಹಿತಿ ನೀಡಬೇಕಾಗ ಅಗತ್ಯವಿದೆ.
When will the Gruha Lakshmi Scheme money be released ? Here is Big Updates How to check Gruhalakshmi payment status ?