ಅಭಿಮಾನಿಗಳ ಪಾಲಿಗೆ ಒಡೆಯ, ಸ್ಯಾಂಡಲ್ವುಡ್ನ ಚಕ್ರವರ್ತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇಮು- ಫೇಮು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಅದರಲ್ಲೂ ಮಾಸ್ ಪ್ರಿಯರ ಹೃದಯದಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿದ್ದಾರೆ ಡಿ ಬಾಸ್ ದರ್ಶನ್ ಅಭಿಮಾನಿಗಳ ಸಂಖ್ಯೆಯು ಆಗಸದತ್ತ ಏರುತ್ತಿದೆ.

ಸೂಪರ್ ಹಿಟ್ ಚಿತ್ರಗಳನ್ನು ನೀಡೋ ಮೂಲಕ ಬಾಕ್ಸ್ ಆಫೀಸ್ ಸುಲ್ತಾನ್ ಅಂತಾನೆ ಕರೆಯಿಸಿಕೊಳ್ಳೋ ತೂಗುದೀಪ ದರ್ಶನ್ ಅವರು ತನ್ನ ಸಂಭಾವನೆಯಲ್ಲಿಯೂ ಸುಲ್ತಾನ್ ಆಗ್ತಿದ್ದಾರೆ. ಯಜಮಾನ, ಒಡೆಯ ಹಾಗೂ ರಾಬರ್ಟ್ ಸಿನಿಮಾಗಳಿಗೆ ಎಂಟು ಕೋಟಿ ಸಂಭಾವನೆ ಪಡೆದಿದ್ದ ಚಾಲೆಂಜಿಂಗ್ ಸ್ಟಾರ್, ಮುಂದಿನ ಸಿನಿಮಾವೊಂದಕ್ಕಾಗಿ ಬರೋಬ್ಬರಿ 12 ಕೋಟಿ ಸಂಭಾವನೆ ಪಡೀತಿದ್ದಾರೆ ಎನ್ನಲಾಗುತ್ತಿದೆ.

ಮುಂಬೈ ಮೂಲದ ನಿರ್ಮಾಪಕರೊಬ್ಬರು ರಾಬರ್ಟ್ ಶೂಟಿಂಗ್ ಸೆಟ್ಗೆ ಬಂದು ಇನ್ನೂ ಹೆಸರಿಡದ ಸಿನಿಮಾವೊಂದಕ್ಕೆ ಗುಟ್ಟಾಗಿ ಮಾತುಕತೆ ಮಾಡಿರೋದು ಕನ್ಫರ್ಮ್ ಆಗಿದೆ. ದರ್ಶನ್ ಅವರ ಈ ಸಿನಿಮಾಕ್ಕೂ ತರುಣ್ ಸುಧೀರ್ ಅವರೇ ನಿರ್ದೇಶನ ಮಾಡಲಿದ್ದು, ತರುಣ್ ಸುಧೀರ್ ಅವರೂ ಕೂಡ ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ.

ಹಿಂದೆಲ್ಲಾ ತೆಲುಗು, ತಮಿಳು ಸಿನಿಮಾ ಸ್ಟಾರ್ ಗಳು ಮಾತ್ರವೇ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ರು. ಆದ್ರೀಗ ಡಿ ಬಾಸ್ ಕನ್ನಡ ಸಿನಿಮಾಗಳನ್ನೂ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಇತರ ಭಾಷೆಗಳಲ್ಲಿಯೂ ದರ್ಶನ್ ಅಂತದ್ರೆ ಮುಗಿಬೀಳೋ ಅಭಿಮಾನಿಗಳಿದ್ದಾರೆ.

ಅಲ್ಲದೇ ಕನ್ನಡ ಸಿನಿಮಾ ರಂಗದಲ್ಲಿಯೂ ಮೇಕಿಂಗ್, ಸ್ಟಾರ್ ಕಾಸ್ಟ್, ರಿಲೀಸ್ ಹಾಗೂ ಕಲೆಕ್ಷನ್ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಕ್ರಾಂತಿ ಶುರುವಾಗಿದೆ. ಹಾಗಾಗಿ ದರ್ಶನ್ರ ಸಂಭಾವನೆ ಹೆಚ್ಚಾಗೋದರಲ್ಲಿ ತಪ್ಪೇ ಇಲ್ಲ. ಸಮಾಜಮುಖಿ ಕಾರ್ಯಗಳ ಮೂಲಕ ಅಭಿಮಾನಿಗಳ ಪಾಲಿಗೆ ಒಡೆಯನಾಗಿರೋ ದರ್ಶನ್ ದುಬಾರಿ ಸಂಭಾವನೆ ಪಡೆಯುತ್ತಿರೋದು ಅಭಿಮಾನಿಗಳಿಗೂ ಖುಷಿಯನ್ನು ಕೊಟ್ಟಿದೆ.