ಮಂಗಳೂರು : ಕಾರು ಸೈಡ್ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಹಾಗೂ ತುಳು ಚಿತ್ರ ನಟಿ ಶೋಭಿತಾ ಮೇಲೆ ಗುಂಪೊಂದು ಹಲ್ಲೆ ನಡೆಸಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ನಡೆದಿದೆ.

ನಟಿ ಶೋಭಿತಾ ತನ್ನ ಕಾರಿನಲ್ಲಿ ಪೆರುವಾಯಿ ಕಡೆಗೆ ಸಾಗುತ್ತಿದ್ದ ವೇಳೆಯಲ್ಲಿ ಎದುರಿನಿಂದ ಬರುತ್ತಿದ್ದ ಕಾರಿನವರು ಸೈಡ್ ಕೊಡೋ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕ್ ತೆಗೆದಿದ್ದಾರೆ. ಈ ವೇಳೆಯಲ್ಲಿ ನಟಿ ಹಾಗೂ ಕಾರಿನಲ್ಲಿದ್ದವರ ಜಗಳ ತಾರಕಕ್ಕೇರಿದ್ದು ನಡು ರಸ್ತೆಯಲ್ಲೇ ಹೊಡೆದಾಟಕ್ಕೆ ಇಳಿದಿದ್ದಾರೆ. ಈ ವೇಳೆಯಲ್ಲಿ ಕಾರಿನಲ್ಲಿದವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತಾ ಶೋಭಿತಾ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೊ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಟಿಶೋಭಿತಾ ಸ್ಯಾಂಡಲ್ ವುಡ್ ನಲ್ಲಿ ಸಿಡಿದೆದ್ದ ಗಂಡು ಸಿನಿಮಾದಲ್ಲಿ ನಟಿಸಿದ್ದಾರೆ.

ನಟಿ ಶೋಭಿತಾ ನಡುರಸ್ತೆಯಲ್ಲಿ ಹೊಡೆದಾಡುತ್ತಿರೋ NEWS NEXT EXCLUSIVE ವಿಡಿಯೋ..