ಸಿನಿಮಾ ಬಿಡುಗಡೆಗೆ ಮುನ್ನ ಟೀಸರ್, ಟ್ರೈಲರ್ ರಿಲೀಸ್ ಮಾಡೋದು ಮಾಮೂಲು. ಬಹುತೇಕರು ಟ್ರೈಲರ್ ನೋಡಿಯೋ ಸಿನಿಮಾ ಹೀಗೆ ಇರುತ್ತೆ ಅಂತಾ ನಿರ್ಧರಿಸಿ ಬಿಡ್ತಾರೆ. ಆದರೆ ಸಿನಿಮಾ ಸಂಪೂರ್ಣವಾಗಿ ನೋಡಿದ ನಂತರವೇ ಅಸಲಿ ವಿಚಾರಗೊತ್ತಾಗುತ್ತೆ ಅಂತಾ ಖ್ಯಾತ ನಡಿಯೊಬ್ಬರು ಕಮೆಂಟ್ ಮಾಡುವವರಿಗೆ ಪಾಠ ಮಾಡಿದ್ದಾರೆ.

ಹೌದು, ಟಾಲಿವುಡ್ ಕ್ರೇಜಿ ಹೀರೋ ವಿಜಯ್ ದೇವರಕೊಂಡ ಅಭಿನಯದ ಸಿನಿಮಾ ವರ್ಲ್ಡ್ ಫೇಮಸ್ ಲವರ್ ಸಿನಿಮಾ ತೆರೆಗೆ ಬರ್ತಿದೆ.

ಅದ್ರಲ್ಲೂ ನಟಿ ರಾಶಿ ಖನ್ನಾ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಟ್ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿರೋ ರಾಶಿ ಖನ್ನಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗಿದ್ರು.

ಇದರಿಂದ ನೊಂದ ರಾಶಿ ಖನ್ನಾ ತನ್ನ ಸೆಕ್ಸ್ ದೃಶ್ಯಗಳ ಬಗ್ಗೆ ಕಮೆಂಟ್ ಮಾಡುವವರು ಮೊದಲು ಸಿನಿಮಾ ನೋಡಿ. ಆ ಮೇಲೆ ನಿಮಗೆ ಅಸಲಿ ವಿಚಾರ ಗೊತ್ತಾಗುತ್ತೆ ಅಂತಾ ಹೇಳಿದ್ದಾರೆ. ವಿಜಯ್ ದೇವರಗೊಂಡ ನಾಲ್ಕು ಡಿಫರೆಂಟ್ ಶೇಡ್ಸ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯ್ ಗೆ ನಾಯಕಿಯರಾಗಿ ಐಶ್ವರ್ಯಾ ರಾಜೇಶ್, ಇಜಾ ಬೆಲ್ಲಾ, ಕ್ಯಾಥರಿನ್ ತ್ರೆಸಾ ಹಾಗೂ ರಾಶಿ ಖನ್ನಾ ಕಾಣಿಸಿಕೊಂಡಿದ್ದಾರೆ. ಯಾಮಿನಿ ಪಾತ್ರದಲ್ಲಿ ರಾಶಿ ಖನ್ನಾ ನಟಿಸಿದ್ದಾರೆ. ಬೆಡ್ ರೂಮ್, ಲಿಪ್ ಲಾಕ್ ಸೀನ್‌ಗಳಲ್ಲಿ ಇಬ್ಬರ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ವರ್ಕೌಟ್ ಆಗಿದೆ ಅಂತಿದ್ದಾರೆ ಸಿನಿ ಪ್ರೇಕ್ಷಕರು.
world famous lover Teaser :