ಪುಕ್ಸಟ್ಟೆ ಲೈಫಿನಲ್ಲಿ ಅಯ್ಯಪ್ಪನ ಹಾಡು

0

ಸ್ಯಾಂಡಲ್ ವುಡ್ ನಲ್ಲಿ ಅದೆಷ್ಟೋ ಸಿನಿಮಾಗಳು ಸೆಟ್ಟರುತ್ತವೆ. ಪ್ರತಿ ವಾರ ಬಿಡುಗಡೆಯಾಗೋದು ಸುಮಾರು 5-10 ಸಿನಿಮಾಗಳು. ಒಂದೆರಡು ಸಿನಿಮಾಗಳನ್ನ ಬಿಟ್ರೆ ಬೇರೆ ಸಿನಿಮಾಗಳು ಸದ್ದು ಮಾಡೋದಿಲ್ಲ. ಆ ಕೆಲವು ಸದ್ದು ಮಾಡ್ತಿರೋ ಸಿನಿಮಾಗಳ ಪೈಕಿ ಅರವಿಂದ್ ಕುಪ್ಳೀಕರ್ ಆಕ್ಷನ್ ಕಟ್ ಹೇಳಿರೋ ಪುಕ್ಸಟ್ಟೆ ಲೈಫು ಪುರುಸೊತ್ತು ಇಲ್ಲ ಸಿನಿಮಾ ಮುಂಚೂಣಿಯಲ್ಲಿದೆ. ಈ ಸಿನಿಮಾದ ಮೊದಲ ಹಾಡು ಇದೇ ಜನವರಿ 24 ಕ್ಕೆ ಬಿಡುಗಡೆಯಾಗಲಿದ್ದು, ಅದಿತಿ ಸಾಗರ್ ಅವರ ಧ್ವನಿಯಲ್ಲಿ ಮೂಡಿಬಂದಿದೆ. ಹೊಸ ಅಲೆಯಲ್ಲಿ ಸ್ವಾಮಿ ಅಯ್ಯಪ್ಪ ಭಜನೆ ಹಾಡನ್ನು ರೆಡಿಮಾಡಿದೆ ಚಿತ್ರತಂಡ. ವಾಸು ದಿಕ್ಷಿತ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರೋ ಈ ಹಾಡು ಅಯ್ಯಪ್ಪನ ಭಜನೆ ಹಾಡುಗಳಲ್ಲೇ ಹೊಸತನದ ಹಾಡು ಅಂತಾನೇ ಹೇಳಬಹುದು.

ಸರ್ವಸ್ವ ಪ್ರೊಡಕ್ಷನ್ ನಲ್ಲಿ ತಯಾರಾಗಿರೋ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಸಂಚಾರ್ ವಿಜಯ್, ರಂಗಾಯಣ ರಘು, ಅಚ್ಯುತ್ ಕುಮಾರ್, ಮಾತಂಗಿ ಪ್ರಸನ್ನ ಬಣ್ಣ ಹಚ್ಚಿದ್ದಾರೆ. ಅದ್ವೈತ ಗುರುಮೂರ್ತಿ ಸಿನಿಮಾಕ್ಕೆ ಕ್ಯಾಮೆರಾ ಕೈಚಳ ತೋರಿಸಿದ್ದು, ಈ ಸಿನಿಮಾ ನಿರ್ಮಾಣಕ್ಕೆ ನಾಗರಾಜ್ ಸೋಮಯಾಜಿ ಬಂಡವಾಳ ಹೂಡಿದ್ದಾರೆ. ಸಿನಿಮಾ ಫೆಬ್ರವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ.

Leave A Reply

Your email address will not be published.