ಆದಿತ್ಯ ರಾಯ್ ಕಪೂರ್ ಮತ್ತು ದಿಶಾ ಪಠಾಣಿ ಅಭಿನಯದ ಮಲಾಂಗ್ ಚಿತ್ರದ ಸಖತ್ ಹಾಟ್ ಆಗಿ ಮೂಡಿಬಂದಿದೆ. ಮೋಹಿತ್ ಸೂರಿ ನಿರ್ದೇಶಿಸಿರೋ ಸಿನಿಮಾದಲ್ಲಿ ದಿಶಾ ಪಠಾಣಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ವಿಭಿನ್ನ ರೀತಿಯ ಕಿಸ್ ಪೋಸ್ಟರ್ನಿಂದಲೇ ಸಿನಿರಸಿಕರಲ್ಲಿ ಕಿಚ್ಚು ಹಚ್ಚಿದ್ದ ಬಾಲಿವುಡ್ ಮಲಾಂಗ್ ಚಿತ್ರ ಇದೀಗ ಟ್ರೈಲರ್ನಿಂದಲೂ ಬಾರೀ ಸದ್ದು ಮಾಡುತ್ತಿದೆ.

ಚಿತ್ರದಲ್ಲಿ ಬಾಲಿವುಡ್ ಬೋಲ್ಡ್ ಬ್ಯೂಟಿ ದಿಶಾ ಪಾಟನಿ ಹಾಗೂ ನಟ ಆದಿತ್ಯ ರಾಯ್ ಕಪೂರ್ ಚುಂಬನದ ಪೋಸ್ಟರ್ ವೈರಲ್ ಆಗಿತ್ತು. ಇದೀಗ ಟ್ರೈಲರ್ನಲ್ಲೂ ಬಿಕಿನಿ ಉಡುಗೆಯ ಮೂಲಕ ಪಡ್ಡೆ ಹುಡುಗರ ನಿದ್ದೆಗೆ ದಿಶಾ ಭಂಗ ತಂದಿದ್ದಾರೆ.

ಇನ್ನೂ ಆದಿತ್ಯಾ ಮತ್ತು ದಿಶಾ ಅವರ ಸಾಕಷ್ಟು ರೋಮ್ಯಾಂಟಿಕ್ ದೃಶ್ಯಗಳು ಟ್ರೈಲರ್ನಲ್ಲಿದೆ. ಯೂಟ್ಯೂಬ್ ನಲ್ಲಿ ಮಲಾಂಗ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ದಾಖಲೆ ಬರೆಯುತ್ತಿದೆ. ಬಿಕಿನಿ ಲುಕ್ನಲ್ಲಿ ಮಿಂಚಿರೋ ದಿಶಾ ಪಠಾಣಿ ನಶೆಯೇರಿಸುತ್ತಿದ್ದಾರೆ.

ಸಿನಿಮಾಕ್ಕೆ ಚಿತ್ರವನ್ನು ಟಿ-ಸೀರೀಸ್, ಎಲ್ಯುವಿ ರಂಜನ್, ಅಂಕುರ್ ಗಾರ್ಗ್ ಮತ್ತು ಜಯ್ ಶೇವಕ್ರಮಣಿ ಬಂಡವಾಳ ಹೂಡಿದ್ದಾರೆ.

ಮಲಾಂಗ್ ಸಿನಿಮಾ ಟ್ರೈಲರ್ ಸಂಪೂರ್ಣ ಆ್ಯಕ್ಷನ್ ಮತ್ತು ರೋಮ್ಯಾಂಟಿಕ್ ದೃಶ್ಯಗಳಿಂದ ಕೂಡಿದ್ದು, ಬಾಲಿವುಡ್ ಸಿನಿ ದಿಗ್ಗಜ ಅನಿಲ್ ಕಪೂರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಯೂಟ್ಯೂಬ್ ನಲ್ಲಿ ಈಗಾಗಲೇ ದಾಖಲೆಯನ್ನು ಬರೆದಿರುವ ಸಿನಿಮಾದ ಟ್ರೈಲರ್ ನ್ನು ಈಗಾಗಲೇ 3 ಕೋಟಿ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.