ಸೋಮವಾರ, ಏಪ್ರಿಲ್ 28, 2025
HomeCinemaಆದಿಪುರುಷ ಸಿನಿಮಾಕ್ಕೆ ನಟ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ಪಡೆದ ಸಂಭಾವನೆ ಎಷ್ಟು...

ಆದಿಪುರುಷ ಸಿನಿಮಾಕ್ಕೆ ನಟ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ಪಡೆದ ಸಂಭಾವನೆ ಎಷ್ಟು ?

- Advertisement -

ತೆಲುಗು ಸೂಪರ್‌ಸ್ಟಾರ್ ಪ್ರಭಾಸ್‌ ಅಭಿನಯದ ಆದಿಪುರುಷ್‌ ಸಿನಿಮಾ (Aadipurush trailer release) ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಲೇ ಇದೆ. ಸದ್ಯ ಈ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದ್ದು, ಸಿನಿಪ್ರೇಕ್ಷಕರು ತಮ್ಮ ಮೆಚ್ಚಿನ ನಟನನ್ನು ರಾಮನ ಪಾತ್ರದಲ್ಲಿ ಕಂಡು ಖುಷಿಪಟ್ಟಿದ್ದಾರೆ. ಇನ್ನು ಈ ಸಿನಿಮಾದ ರಿಲೀಸ್‌ ಡೇಟ್‌ ಕೂಡ ಫಿಕ್ಸ್‌ ಆಗಿದ್ದು, ಬರುವ ಜೂನ್​ 16ರಂದು ಬಹಳ ಅದ್ದೂರಿಯಾಗಿ ದೇಶದಾದ್ಯಂತ ಬಿಡುಗಡೆಯಾಗಲಿದೆ. ಇನ್ನುಳಿದಂತೆ ಈ ಸಿನಿಮಾದಲ್ಲಿ ನಟಿಸುತ್ತಿರುವವರ ಸಂಭಾವನೆ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಶುರುವಾಗಿದೆ.

ಆದಿಪುರುಷ ಬಹು ನಿರೀಕ್ಷಿತ ಸಿನಿಮಾವಾಗಿದ್ದು, 700 ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನಲ್ಲಿ ಇದು ತಯಾರಾಗುತ್ತಿದೆ ಎಂದು ವರದಿಗಳು ತಿಳಿಸಿದೆ. ಪ್ರಭಾಸ್ ಅವರ ಸಂಭಾವನೆಗೆ ಸಂಬಂಧಿಸಿದಂತೆ, ವರದಿ ಪ್ರಕಾರ ಅವರು ಚಲನಚಿತ್ರಕ್ಕಾಗಿ ಸುಮಾರು 150 ಕೋಟಿ ರೂಪಾಯಿಗಳ ಭಾರೀ ಮೊತ್ತವನ್ನು ಪಡೆಯುತ್ತಿದ್ದಾರೆ ಎಂದು ಸೂಚಿಸುತ್ತದೆ. ಇದು ಅಭಿಮಾನಿಗಳು ಮತ್ತು ಉದ್ಯಮದ ಒಳಗಿನವರಲ್ಲಿ ಸಾಕಷ್ಟು ಚರ್ಚೆ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ.

ಮತ್ತೊಂದೆಡೆ, ಸೈಫ್ ಅಲಿ ಖಾನ್ ಅವರ ಪಾತ್ರಕ್ಕಾಗಿ 12 ಕೋಟಿ ರೂಪಾಯಿಗಳನ್ನು ಸಂಭಾವನೆ ಪಡೆಯುತ್ತಿದ್ದಾರೆ. ಇದು ಅವರನ್ನು ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿರೋಧಿಗಳಲ್ಲಿ ಒಬ್ಬರನ್ನಾಗಿ ಮಾಡುತ್ತದೆ. ಆದಿಪುರುಷ ಸಿನಿಮಾದಲ್ಲಿ ಸಂಕಷ್ಟದಲ್ಲಿರುವ ಜಾನಕಿ ಪಾತ್ರದಲ್ಲಿ ನಟಿಸಲಿರುವ ಕೃತಿ ಸನನ್ 3 ಕೋಟಿ ರೂ.ಗಳನ್ನು ಮನೆಗೆ ತೆಗೆದುಕೊಂಡು ಹೋಗಲಿದ್ದು, ಸನ್ನಿ ಸಿಂಗ್ 1.5 ಕೋಟಿ ರೂ. ಎನ್ನಲಾಗಿದೆ. ಸದ್ಯ ಇದು ಊಹಾಪೋಹಗಳಾಗಿದ್ದು, ಅಧಿಕೃತವಾಗಿ ಸಿನಿತಂಡ ಇನ್ನೂ ಮಾಹಿತಿ ಬಿಟ್ಟುಕೊಟ್ಟಿರುವುದಿಲ್ಲ.

ಈ ಸಿನಿಮಾವು ರಾಮಾಯಾಣವನ್ನು ಆಧರಿಸಿದ ಕಥೆಯನ್ನು ಒಳಗೊಂಡ ಸಿನಿಮಾವಾಗಿದೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಓಂ ರಾವತ್‌ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ರಾಮನಾಗಿ ನಟ ಪ್ರಭಾಸ್‌, ಸೀತೆಯಾಗಿ ಕೃತಿ ಸನೋನ್‌, ರಾವಣನಾಗಿ ಸೈಫ್‌ ಆಲಿ ಖಾನ್‌, ಆಂಜನೇಯನಾಗಿ ದೇವದತ್ತ ನಾಗೆ, ಲಕ್ಷ್ಮಣನಾಗಿ ಸನ್ನಿ ಸಿಂಗ್‌ ಅಭಿನಯಿಸಿದ್ದಾರೆ. ಈ ಸಿನಿಮಾವು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಸದ್ಯ ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಸಾಕಷ್ಟು ಅದ್ದೂರಿತನ ಎದ್ದು ಕಾಣುತ್ತಿದೆ.

ಇನ್ನು ದೊಡ್ಡ ಪರದೆಯಲ್ಲಿ ಆದಿಪುರುಷ್‌ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿರುವುದು ಬಹಳ ವಿಶೇಷವಾಗಿದೆ. ಟಿ ಸೀರೀಸ್‌ನ ಭೂಷಣ್‌ ಕುಮಾರ್ ಅವರು ಆದಿಪುರುಷ್​ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ತೆರೆಕಾಣಲಿದೆ. ಮೊದಲ ದಿನ ಈ ಸಿನಿಮಾಕ್ಕೆ ಎಷ್ಟು ಕಲೆಕ್ಷನ್​ ಆಗಲಿದೆ ಎನ್ನುವುದನ್ನು ತಿಳಿಯುವ ಕಾತುರತೆ ಮೂಡಿದೆ.

ಇದನ್ನೂ ಓದಿ : ಕಾಂತಾರ 2 ಸ್ಕ್ರಿಫ್ಟ್‌ ತಯಾರಿ ನಡುವಲ್ಲೇ ದೇವರ ಮೊರೆ ಹೋದ ನಟ ರಿಷಬ್‌ ಶೆಟ್ಟಿ

ಪ್ರಭಾಸ್​ ಅವರು ಆದಿಪುರುಷ್​ ಸಿನಿಮಾ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ಬಾಹುಬಲಿ 2 ಬಳಿಕ ಅವರು ನಿರೀಕ್ಷಿತ ಮಟ್ಟದ ಗೆಲುವು ಕಂಡಿಲ್ಲ. ಹಾಗಾಗಿ ಆದಿಪುರುಷ್​ ಸಿನಿಮಾ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಇದಲ್ಲದೇ ನಟ ಪ್ರಭಾಸ್‌ ಅಭಿನಯದ ಸಲಾರ್, ಪ್ರಾಜೆಕ್ಟ್​ ಕೆ ಸಿನಿಮಾದ ಕೆಲಸದಲ್ಲೂ ಸಾಕಷ್ಟು ಬ್ಯುಸಿ ಆಗಿದ್ದಾರೆ.

Aadipurush trailer release: How much did actors Prabhas, Kriti Sanon, Saif Ali Khan get for the movie Aadipurush?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular