ಮಂಗಳವಾರ, ಏಪ್ರಿಲ್ 29, 2025
HomeCinemaAara movie : ಆರ ಸಿನಿಮಾದ ಮೂಲಕ ಮತ್ತೊಮ್ಮೆ ಖಡಕ್‌ ವಿಲನ್‌ ಆಗಿ ಕಾಣಿಸಿಕೊಂಡ ನಟ...

Aara movie : ಆರ ಸಿನಿಮಾದ ಮೂಲಕ ಮತ್ತೊಮ್ಮೆ ಖಡಕ್‌ ವಿಲನ್‌ ಆಗಿ ಕಾಣಿಸಿಕೊಂಡ ನಟ ಸತ್ಯರಾಜ್

- Advertisement -

ಕನ್ನಡ ಸಿನಿರಂಗವು ಇದೀಗ ಹೊಸ ಪ್ರತಿಭೆಗಳಿಗೆ ಮಣೆ ಹಾಕಿದೆ. ಸಿನಿಪ್ರೇಕ್ಷಕರು ಕೂಡ ಹೊಸಬರ ಸಿನಿಮಾಗಳಿಗೆ ಸಾಕಷ್ಟು ಮೆಚ್ಚುಗೆ ನೀಡುವುದರ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ. ಸದ್ಯ ಮತ್ತೊಂದು ಪ್ರತಿಭಾನ್ವಿತ, ಯುವ ಸಿನಿತಂಡವೊಂದು ಸೇರಿ ಆರ (Aara movie) ಎನ್ನುವ ಸಿನಿಮಾವನ್ನು ನಿರ್ಮಿಸಿದ್ದು, ಇದೇ ವಾರ ಬಿಡುಗಡೆಯಾಗಲಿದೆ. ನಿರ್ದೇಶಕ ಅಶ್ವಿನ್‌ ವಿಜಯಮೂರ್ತಿ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಮತ್ತೊಂದು ವಿಭಿನ್ನ ಪಾತ್ರದೊಂದಿಗೆ ಸಿನಿಪ್ರೇಕ್ಷಕರ ಮುಂದೆ ಬರಲಿದ್ದಾರೆ.

ನಟ ಸತ್ಯರಾಜ್‌ ಕಿರುತೆರೆ, ಬೆಳ್ಳಿತೆರೆಯಲ್ಲಿ ಹೆಸರುವಾಸಿಯಾಗಿರುವ ಇವರು ಬೆಂಗಳೂರಿನವರೇ ಆಗಿದ್ದಾರೆ. ನಟ ಸತ್ಯರಾಜ್‌ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಆದರೂ ಅವರ ಗಮನ ಸೆಳೆದಿದ್ದು ಮಾತ್ರ ಸಿನಿಮಾಕ್ಷೇತ್ರವಾಗಿದೆ. ಬಾಲ್ಯದಿಂದಲೂ ಬಣ್ಣದಲೋಕದ ಕಡೆಗೆ ಪ್ರಬಲ ಆಸಕ್ತಿ ಹೊಂದಿದ್ದ ಇವರು ಆರಂಭಿಕ ದಿನಗಳಲ್ಲಿ ಸಿನಿಮಾ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಡೇಂಜರ್ ಝೋನ್ ಎಂಬ ಸಿನಿಮಾದ ಮೂಲಕ ಬಣ್ಣ ಹಚ್ಚಿದ್ದ ಸತ್ಯರಾಜ್, ಕಟ್ಟುಕಥೆದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡರು. ಗರುಡಾಕ್ಷ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿ ಅವರು ಆ ಬಳಿಕ ಸಾಲು ಸಾಲು ಅವಕಾಶಗಳನ್ನು ತಮ್ಮದಾಗಿಸಿಕೊಂಡರು.

ಇದನ್ನೂ ಓದಿ : Love movie song release‌ : ಲವ್ ಸಿನಿಮಾದ ಎರಡನೇ ಸಾಂಗ್‌ ರಿಲೀಸ್ : ಕೇಳುಗರಿಂದ ಮೆಚ್ಚುಗೆ ಸುರಿಮಳೆ

ಇದನ್ನೂ ಓದಿ : Pretha Movie : ಕಲಾಕರ್‌ ಹರೀಶ್ ರಾಜ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಪ್ರೇತ’ ಫಸ್ಟ್‌ ಲುಕ್ ರಿಲೀಸ್

ಕೆಜಿಎಫ್, ಶುಗರ್ ಲೆಸ್ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿರುವ ಸತ್ಯರಾಜ್, ಬುದ್ಧಿವಂತ-2, ಆರ, ಮೆಹಾಬೂಬ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಆರ ಸಿನಿಮಾದಲ್ಲಿ ದಿಲ್ಲಿ ಕ್ರಿಸ್ಥ ಎಂಬ‌ ಖಡಕ್ ಖಳನಾಯಕನ ಪಾತ್ರದಲ್ಲಿ ಅವರು ನಟಿಸಿದ್ದು, ಈ ಸಿನಿಮಾಕ್ಕಾಗಿ ತುಳು ಭಾಷೆ ಕಲಿತಿದ್ದಾರಂತೆ. ಪದ್ಮಾವತಿ, ಕಮಲಿ, ಬ್ರಹ್ಮಗಂಟು, ನಾನು ನನ್ನ ಕನಸು, ಗೀತಾ, ಶಾಂತಂ ಪಾಪಂ, ಗಟ್ಟಿಮೇಳ , ಕೆಂಡಸಂಪಿಗೆ, ತ್ರಿಪುರ ಸುಂದರಿ ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿರುವ, ನಟಿಸುತ್ತಿರುವ ಸತ್ಯರಾಜ್, ಲಕ್ಷ್ಮೀ ರೈ ನಟನೆಯ ಝಾನ್ಸಿ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕಳೆದ ಎಂಟು ವರ್ಷಗಳಿಂದ ಕಲಾಸೇವೆಯಲ್ಲಿ ತೊಡಗಿಸಿಕೊಂಡಿರುವ ಸತ್ಯರಾಜ್ ವಿಭಿನ್ನ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ತಮ್ಮನ್ನು ಪ್ರೋತ್ಸಾಹಿಸುತ್ತಿರುವ ಸಿನಿಮಾಪ್ರೇಮಿಗಳಿಗೆ , ಕನ್ನಡಿಗರಿಗೆ ಧನ್ಯವಾದ ತಿಳಿಸಿರುವ ಸತ್ಯರಾಜ್ ಅವರು, ಖಳನಾಯಕನ ಪಾತ್ರಗಳಲ್ಲಿಯೂ ಅಭಿನಯಿಸುವ ಆಸಕ್ತಿ ತೋರಿದ್ದಾರೆ.

Aara movie: Actor Sathyaraj appeared as a villain once again through Aara movie

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular