ರೆಬಲ್ಸ್ಟಾರ್ ಅಂಬರೀಶ್ ಮನೆಯಲ್ಲಿ ಇಂದು (Abhishek Ambarish – Aviva Marriage) ಸಂಭ್ರಮದ ವಾತಾವರಣ ಮನೆ ಮಾಡಿತ್ತು. ನಟ ಅಂಬರೀಶ್ ಹಾಗೂ ಸಂಸದೆ ಸುಮಲತಾ ಕನಸಿನಂತೆಯೇ ಇಂದು ಮಗ ಅಭಿಷೇಕ್ ಹಾಗೂ ಅವಿವಾ ಮದುವೆ ಬಹಳ ವಿಜೃಂಭಣೆಯಿಂದ ನಡೆದಿದೆ. ಹೆಸರಾಂತ ಫ್ಯಾಷನ್ ಐಕಾನ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಜೊತೆ ನಟ ಅಭಿಷೇಕ್ ಅಂಬರೀಶ್ ಸಪ್ತಪದಿ ತುಳಿದಿದ್ದಾರೆ. ಈ ವಿವಾಹ ಸಮಾರಂಭಕ್ಕೆ ಸಿನಿಗಣ್ಯರು, ರಾಜಕೀಯ ಗಣ್ಯರು ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಹೊಸ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಹಾಗೂ ಅವಿವಾ ಜೋಡಿಗೆ ಸೂಪರ್ಸ್ಟಾರ್ ರಜನಿಕಾಂತ್ ಆಗಮಿಸಿದ್ದು, ಬಿಳಿವರ್ಣದ ವಸ್ತ್ರವನ್ನು ತೊಟ್ಟಿದ್ದು, ಈ ವಿವಾಹ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ನಟ ಅಂಬರೀಶ್ ಅವರು ಪರಭಾಷೆ ನಟ ನಟಿಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಹೀಗಾಗಿ ನಟ ಅಂಬರೀಶ್ ಹಾಗೂ ರಜನಿಕಾಂತ್ ಇಬ್ಬರೂ ಆತ್ಮೀಯ ಗೆಳಯರಾಗಿದ್ದು, ತಮ್ಮ ಕೆಲಸದ ಒತ್ತಡದ ನಡುವೆಯೂ ಸ್ನೇಹಿತನ ಮಗನ ಮದುವೆಗೆ ಬಂದು ಶುಭ ಹಾರೈಸಿದ್ದಾರೆ.
ಕನ್ನಡ ಸಿನಿರಂಗದ ರಾಕಿಂಗ್ ಸ್ಟಾರ್ ದಂಪತಿಗಳು ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ಮದುವೆಗೆ ಆಗಮಿಸಿದ್ದರು. ಯಶ್ ತೆಳು ಗುಲಾಬಿ ಬಣ್ಣದ ಶೇರ್ವಾನಿ ತೊಟ್ಟಿದ್ದು, ರಾಧಿಕಾ ಟ್ರೆಡಿಷನ್ ಆಗಿ ಸೀರೆಯುಟ್ಟು ಮದುವೆ ಆಗಮಿಸಿ, ನವ ದಂಪತಿಗೆ ಶುಭ ಹಾರೈಸಿದ್ದಾರೆ. ಇನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಕೂಡ ಇವರ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿದ್ದು, ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ : Abhishek Ambarish – Aviva Marriage : ಅಭಿಷೇಕ ಅಂಬರೀಶ್ – ಅವಿವಾ ಅದ್ದೂರಿ ವಿವಾಹ
ಅಭಿಷೇಕ್ ಹಾಗೂ ಅವಿವಾ ಮದುವೆಗೆ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಜೊತೆ ಆಗಮಿಸಿದ್ದಾರೆ. ಈ ವೇಳೆಯಲ್ಲಿ ಅಭಿಷೇಕ್ ಅಂಬರೀಶ್ಗೆ ನಟ ಸುದೀಪ್ ವಿಶೇಷ ಉಡುಗೊರೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸ್ವತಃ ಸುದೀಪ್ ಅವರೇ ಅಭಿಷೇಕ್ ಕತ್ತಿಗೆ ಸರವನ್ನು ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ನಂತರ ಅಭಿಷೇಕ್ ಹಾಗೂ ಅವಿವಾ ಜೊತೆ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ನಟ ಅಂಬರೀಶ್ ಆತ್ಮೀಯ ಗೆಳಯರಾದ ಮೋಹನ್ ಬಾಬು, ವೆಂಕಯ್ಯ ನಾಯ್ಡು, ಸುಹಾಸಿನಿ, ರಾಕ್ಲೈನ್ ವೆಂಕಟೇಶ್ ಸೇರಿದಂತೆ ಸಿನಿಗಣ್ಯರು ರಾಜಕೀಯ ಗಣ್ಯರು ಉಪಸ್ಥಿತಿಯಲ್ಲಿದ್ದು, ನವ ದಂಪತಿಗಳಿಗೆ ಶುಭ ಕೋರಿದ್ದಾರೆ.
Abhishek Ambarish – Aviva Marriage : Actor Abhishek Ambarish – Aviva Biddappa Wedding Attendnes