ಬುಧವಾರ, ಏಪ್ರಿಲ್ 30, 2025
HomeCinemaAbhishek- Aviva Engagement: ನಾಳೆ ಅಭಿಷೇಕ್ ಅಂಬರೀಶ್ - ಅವೀವಾ ಬಿದ್ದಪ್ಪ ಎಂಗೇಜ್ ಮೆಂಟ್; ಖಾಸಗಿ...

Abhishek- Aviva Engagement: ನಾಳೆ ಅಭಿಷೇಕ್ ಅಂಬರೀಶ್ – ಅವೀವಾ ಬಿದ್ದಪ್ಪ ಎಂಗೇಜ್ ಮೆಂಟ್; ಖಾಸಗಿ ಹೋಟೆಲ್ ನಲ್ಲಿ ಅದ್ಧೂರಿ ಕಾರ್ಯಕ್ರಮ

- Advertisement -

ಬೆಂಗಳೂರು: Abhishek- Aviva Engagement:: ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥಕ್ಕೆ ಶುಭ ಮುಹೂರ್ತ ಕೂಡಿ ಬಂದಿದೆ. ನಾಳೆಯೇ ಅಭಿಷೇಕ್ ಅವರ ಅದ್ಧೂರಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ತನ್ನ ಬಹುಕಾಲದ ಗೆಳತಿ ಅವೀವಾ ಬಿದ್ದಪ್ಪ ಜೊತೆ ನಾಳೆ ನಿಶ್ಚಿತಾರ್ಥ ನಡೆಯಲಿದೆ.

ಕಳೆದ ಕೆಲ ದಿನಗಳಿಂದ ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿತ್ತು. ಆದರೆ ಅದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಈ ಮಧ್ಯೆಯೇ ಸುಮಲತಾ ಅಂಬರೀಶ್ ಅವರ ವಿವಾಹ ವಾಷಿಕೋತ್ಸವದ ದಿನದಂದು ಸದ್ದಿಲ್ಲದೇ ಉಂಗುರ ಪೂಜೆ ಮಾಡಲಾಗಿತ್ತು. ಇದೀಗ ಡಿಸೆಂಬರ್ 11ರಂದು ಅಭಿಷೇಕ್ ಹಾಗೂ ಅವೀವಾ ಜೋಡಿಯ ಅದ್ಧೂರಿ ನಿಶ್ಚಿತಾರ್ಥ ನಡೆಯಲಿದೆ.

ಇದನ್ನೂ ಓದಿ: Shivrajkumar: ಇಂದು ಮಂಗಳೂರಿನಲ್ಲಿ ‘ವೇದ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್; ಕೊರಗಜ್ಜನ ಸನ್ನಿಧಾನಕ್ಕೆ ನಟ ಶಿವಣ್ಣ ದಂಪತಿ ಭೇಟಿ

ನಾಳೆಯ ಅದ್ಧೂರಿ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ. ಸಂಕ್ರಾಂತಿ ಬಳಿಕ ಮದುವೆ ದಿನಾಂಕವನ್ನು ಘೋಷಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಸದ್ಯ ಅಂಬರೀಶ್ ಕುಟುಂಬ ನಿಶ್ಚಿತಾರ್ಥದ ಸಂಭ್ರಮದಲ್ಲಿದೆ.

ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿಯಾಗಿರುವ ಅವೀವಾ ಬಿದ್ದಪ್ಪ ಅಭಿಷೇಕ್ ಅವರ ಬಹುಕಾಲದ ಗೆಳತಿಯಾಗಿದ್ದಾರೆ. ಕುಟುಂಬದ ಸಮ್ಮುಖದಲ್ಲಿ ನಾಳೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದ್ದು, ಹಲವು ಸಿನಿಗಣ್ಯರು ಆಗಮಿಸುವ ನಿರೀಕ್ಷೆಯಿದೆ. ರಾಕಿಂಗ್ ಸ್ಟಾರ್ ಯಶ್ ದಂಪತಿ, ಶಿವರಾಜ್ ಕುಮಾರ್, ದುನಿಯಾ ಸೂರಿ ಸೇರಿದಂತೆ ಹಲವರು ನಟ-ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಕೇವಲ 100 ಮಂದಿಯಷ್ಟೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಕುಟುಂಬಸ್ಥರು ಹಾಗೂ ತೀರಾ ಆಪ್ತರ ಸಮ್ಮುಖದಲ್ಲಿ ಅಭಿಷೇಕ್- ಅವೀವಾ ಉಂಗುರು ಬದಲಾಯಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Kantara 2 Movie : “ಕಾಂತಾರ 2” ಸಿನಿಮಾಕ್ಕೆ ಅಣ್ಣಪ್ಪ ಪಂಜುರ್ಲಿ ಒಪ್ಪಿಗೆ : ರಿಷಬ್ ಶೆಟ್ಟಿಗೆ ದೈವ ವಿಧಿಸಿದ ಷರತ್ತುಗಳೇನು ಗೊತ್ತಾ ?

Abhishek-Aviva Engagement: Abhishek Ambarish – Aviva Biddappa Engagement Tomorrow A grand event at a private hotel

RELATED ARTICLES

Most Popular